Advertisement

ಭಜನೆಯಿಂದ ಸಂಘಟನೆ ಸದೃಢಗೊಳ್ಳಲು ಸಾಧ್ಯ: ಕಾಳಹಸ್ತೇಂದ್ರ ಶ್ರೀ

12:21 AM May 05, 2019 | sudhir |

ಕಾಪು: ಭಜನೆಯಿಂದ ಸಂಘಟನೆ ಸದೃಢಗೊಳ್ಳುತ್ತದೆ. ಭಜನೆಯ ಮೂಲಕ ಆರಂಭ ಗೊಂಡ ಬೆಳಪು ಕಾಳಿಕಾಂಬಾ ಭಜನ ಮಂಡಳಿಯು ನಿರಂತರ ಧಾರ್ಮಿಕ ಯಜ್ಞದ ಮೂಲಕವಾಗಿ ಗ್ರಾಮೀಣ ಪ್ರದೇಶದ ಭಜನ ಮಂಡಳಿಗಳಲ್ಲೇ ಶ್ರೇಷ್ಠವಾದ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಇದರೊಂದಿಗೆ ಸಂಸ್ಥೆಯ ಸಾಮಾಜಿಕ ಚಟುವಟಿಕೆಗಳೂ ಶ್ಲಾಘನೀಯವಾಗಿವೆ ಎಂದು ಕುತ್ಯಾರು ಶ್ರೀ ಆನೆಗುಂದಿ ಮಠದ ಅನಂತಶ್ರೀ ವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು
ಬೆಳಪು ಶ್ರೀ ಕಾಳಿಕಾಂಬಾ ಸೇವಾ ಭಜನ ಮಂದಿರದ 28ನೇ ವಾರ್ಷಿಕ ಭಜನ ಮಂಗಲೋತ್ಸವದ ಧಾರ್ಮಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

Advertisement

ಭಜನ ಮಂಡಳಿಯ ಅಧ್ಯಕ್ಷ ಪದ್ಮನಾಭ ಆಚಾರ್ಯ ಬೆಳಪು ಅಧ್ಯಕ್ಷತೆ ವಹಿಸಿದ್ದರು. ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌, ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶೇಖರ ಆಚಾರ್ಯ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ವೈದಿಕರಾದ ರವಿ ಪುರೋಹಿತ್‌ ಮತ್ತು ಭರತ್‌ ಪುರೋಹಿತ್‌ ಇವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ಮಧ್ಯಾಹ್ನ ಹೂವಿನ ಪೂಜೆ, ಮಹಾಪೂಜೆ, ದಾನಿ ಪದ್ಮನಾಭ ಆಚಾರ್ಯ ಅವರ ಸೇವಾರ್ಥ ಅನ್ನಸಂತರ್ಪಣೆ ನಡೆಯಿತು. ವಿವಿಧ ಭಜನ ಮಂಡಳಿಗಳ ಸಹಯೋಗದೊಂದಿಗೆ ಭಜನಾ ಕಾರ್ಯಕ್ರಮ ನಡೆಯಿತು.

ಭಜನ ಮಂಡಳಿಯ ಪೂರ್ವಾಧ್ಯಕ್ಷ ಮಧುಸೂದನ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಜಯಶ್ರೀ ಸೀತಾರಾಮ ಆಚಾರ್ಯ, ಕಾರ್ಯದರ್ಶಿ ಉಷಾ ಬಾಲಕೃಷ್ಣ ಆಚಾರ್ಯ, ಗ್ರಾಮ ಮೊಕ್ತೇಸರ ಶಿವರಾಮ ಆಚಾರ್ಯ, ಮಂದಿರದ ಅರ್ಚಕ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು.

ಭಜನಾ ಮಂದಿರದ ಪದಾಧಿಕಾರಿಗಳು, ಮಹಿಳಾ ಬಳಗದ ಪದಾಧಿಕಾರಿಗಳು, ವಿಶ್ವಕರ್ಮ ಯುವಕ ಸೇವಾದಳದ ಪದಾಧಿಕಾರಿಗಳು ಭಾಗವಹಿಸಿದ್ದರು.
ಬೆಳಪು ಕಾಳಿಕಾಂಬಾ ಸೇವಾ ಭಜನಾ ಮಂಡಳಿಯ ಗೌರವಾಧ್ಯಕ್ಷ ಬಾಲಕೃಷ್ಣ ಎಸ್‌. ಆಚಾರ್ಯ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮುರಳೀಕೃಷ್ಣ ಆಚಾರ್ಯ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next