Advertisement
ಸಾಮಾನ್ಯವಾಗಿ ಸಿಗರೇಟ್‌ಗಳ ಸೇವನೆಯಿಂದ ಕೆಮ್ಮು, ಕಫ ಬರುತ್ತದೆ. ಆದರೆ, ಸಾವಯವಸಿಗರೇಟ್ ಸೇವನೆಯಿಂದ ಕೆಮ್ಮು, ಕಫ, ಶೀತ ಮತ್ತಿತರ ಕಾಯಿಲೆಗಳು ದೂರವಾಗುತ್ತವೆ. ಜತೆಗೆ ಮನುಷ್ಯ ಕೆಲಸದ ಒತ್ತಡದಿಂದ ಹೊರಬರಲಿಕ್ಕೂ ಈ ಸಾವಯವ ಸಿಗರೇಟ್ ಸಹಕಾರಿಯಾಗಿದೆ. ಅಂದ ಹಾಗೆ, ಇದಕ್ಕೆ ಕೇಂದ್ರ ಆಯುಷ್ ಇಲಾಖೆಯಿಂದ ಮಾನ್ಯತೆಯೂ ದೊರಕಿದೆ. ಇಂತಹದ್ದೊಂದು ವಿನೂತನ ಮಾದರಿಯ ಸಿಗರೇಟ್ ಮಾರುಕಟ್ಟೆ ಪ್ರವೇಶಿಸಿದೆ. ಗೀತಾ ಎಂಟರ್ ಪ್ರೈಸಸ್ ಎಂಬ ಸಂಸ್ಥೆ ಈ ಸಿಗರೇಟ್ ಪರಿಚಯಿಸಿದ್ದು, ಎಲ್ಲೆಡೆ ಬೇಡಿಕೆ ಕೇಳಿಬರುತ್ತಿದೆ. ಇದರಲ್ಲಿ ಯಾವುದೇ ರೀತಿಯ ತಂಬಾಕು, ನಿಕೋಟಿನ್ ಇರುವುದಿಲ್ಲ. ಇದನ್ನು ಪುದೀನ ಎಲೆಗಳು, ಗುಲಾಬಿಯ ದಳಗಳು, ಕ್ಯಾಮೆಲಿಯಾ ಸಿನೆನ್ಸಿಸ್ ಎಂಬ ಎಲೆಯ ಸಾರದ ಮಿಶ್ರಣ ಒಳಗೊಂಡಿದ್ದು, oxymoronic ಎಂಬ ಕಚ್ಚಾ ಕಾಗದದಲ್ಲಿ ಹಾಕಿ ಕೈಯಿಂದಲೇ ಸುರುಳಿ ಸುತ್ತ ಲಾಗಿರುತ್ತದೆ. ಹಾಗಾಗಿ, ಯಾವುದೇ ರೀತಿಯಿಂದ ಇದು ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂದು ಸಂಸ್ಥೆಯ ಸಂಸ್ಥಾಪಕ ಗಣೇಶ್ “ಉದಯವಾಣಿ’ಗೆ ಮಾಹಿತಿ ನೀಡಿದರು.
Related Articles
ಸಾಮಾನ್ಯ ಸಿಗರೇಟಿನ ಬೆಲೆ ಒಂದಕ್ಕೆ 15 ರೂ. ಆದರೆ, ಇದರ ಬೆಲೆ 25 ರೂ. ಒಂದು ಪ್ಯಾಕೆಟ್‌ಗೆ 255 ರೂ. ನಿಗದಿಪಡಿಸಿದ್ದು, ಇದರಲ್ಲಿ 10 ಸಿಗರೇಟ್‌ಗಳಿರುತ್ತವೆ. ಒಮ್ಮೆ ಸೇವನೆ ಮಾಡಿದರೆ, ನಾಲ್ಕು ತಾಸು ಮತ್ತೆ ಸಿಗರೇಟ್ ಹತ್ತಿರಕ್ಕೆ ಹೋಗಲು ಮನಸ್ಸು ಬರುವುದಿಲ್ಲ. ಎಲ್ಲೆಡೆ “ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ’ ಎಂದು ಫಲಕಗಳು ಮತ್ತು ಜಾಗೃತಿ ಫಲಕಗಳಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅದಕ್ಕೆ ಪರ್ಯಾಯವಾಗಿ ಆರೋಗ್ಯಕ್ಕೆ ಪೂರ ಕವಾದ ಸಿಗರೇಟ್ ಯಾಕೆ ಪರಿಚಯಿಸಬಾರದು ಎಂಬ ಚಿಂತನೆ ಹೊಳೆಯಿತು. ಅದರ ಫಲವೇ ಈ “ಆಗ್ಯಾìನಿಕ್ ಸ್ಮೋಕ್ಸ್’ (organic smokes) ಎಂದು ಅವರು ತಿಳಿಸಿದರು.
Advertisement
ವಿಜಯ್ ಕುಮಾರ್ ಚಂದರಗಿ