Advertisement
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2022ರಲ್ಲೇ ಸಿಗರೇಟ್ ಮತ್ತು ಬೀಡಿ ತುಂಡುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಸಂಬಂಧ ಮಾರ್ಗಸೂಚಿಯನ್ನು ಹೊರಡಿಸಿದೆ. ಆದರೆ, ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ವೈಜ್ಞಾನಿಕ ರೀತಿಯಲ್ಲಿ ಸಿಗರೇಟ್ ಮತ್ತು ಬೀಡಿ ತುಂಡುಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆ ನಡೆದಿಲ್ಲ. ಮಾರ್ಗಸೂಚಿ ಕೂಡ ಸರಿಯಾಗಿ ಪಾಲನೆ ಆಗುತ್ತಿಲ್ಲ. ಪಾಲಿಕೆ ವ್ಯಾಪ್ತಿಯ ಕೆಲವು ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಟೀ ಅಂಗಡಿ ಸೇರಿದಂತೆ ಇನ್ನೂ ಕೆಲವು ಕಡೆ ಎಲ್ಲೆಂದರಲ್ಲಿ ಸಿಗರೇಟ್ ತುಂಡುಗಳನ್ನು ಬಿಸಾಡುವ ಪ್ರವೃತ್ತಿ ಮುಂದುವರಿದಿದೆ. ಕೆಲವರು ಚರಂಡಿಗೂ ಎಸೆಯುತ್ತಾರೆ. ಹೀಗೆ ಬಿಸಾಡುವ ಸಿಗರೆಟು ಮತ್ತು ಬೀಡಿ ತುಂಡುಗಳಲ್ಲಿ ಹಾನಿಕಾರಕ ರಾಸಾ ಯನಿಕ ಅಂಶಗಳು ಇರುವುದರಿಂದ ಅಂತರ್ಜಲ, ಮಣ್ಣು ಮತ್ತು ಪರಿಸರವನ್ನು ಕಲುಷಿತಗೊಳಿಸುತ್ತದೆ. ಭವಿಷ್ಯತ್ತಿನಲ್ಲಿ ಪರಿಸರದ ಮೇಲೂ ಪ್ರಭಾವ ಬೀರುವ ಹಿನ್ನೆಲೆಯಲ್ಲಿ ಅವುಗಳ ಸಮ ರ್ಪ ಕ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ಪಾಲಿಕೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Related Articles
Advertisement
ಸಭೆಯಲ್ಲಿ ಸಿಗರೇಟ್ ತುಂಡಗಳ ಮರು ಬಳಕೆ ಸಂಬಂಧ ಒಪ್ಪಿಗೆ ನೀಡಿದ್ದಾರೆ. 2 ವಾರ್ಡ್‌ಗಳಲ್ಲಿ ಪ್ರಾಯೋಗಿಕ ವಾಗಿ ಸಿಗರೇಟ್ ತುಂಡು ವಿಲೇ ವಾರಿಗೆ ಕ್ರಮ ಕೈಗೊಳ್ಳುವಂತೆ ಸಿಗರೇಟ್ ತಯಾರಿಕಾ ಸಂಸ್ಥೆ ಐಟಿಸಿಗೆ ಪತ್ರ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಏಕೆ ಈ ಯೋಜನೆ?: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಸಿಗರೇಟ್ ಮತ್ತು ಬೀಡಿ ತುಂಡುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕುರಿತಂತೆ ಕೆಲವು ಮಾರ್ಗಸೂಚಿ ರೂಪಿಸಿದೆ. ಅವುಗಳನ್ನು ನಗರದಲ್ಲಿ ಪಾಲಿಸಲು ಬಿಬಿಎಂಪಿ ಈ ಯೋಜನೆ ರೂಪಿಸಿದೆ. ಎಲ್ಲೆಲ್ಲಿ ಡಸ್ಟ್ ಬಿನ್? ನಗರದಲ್ಲಿನ ಬಾರ್ ಆ್ಯಂಡ್ ರೆಸ್ಟೋರೆಂಟ್, ಹೋಟೆಲ್ ಸೇರಿದಂತೆ ಹೆಚ್ಚಿನ ಜನನಿಬಿಡ ಪ್ರದೇಶಗಳಲ್ಲಿ ಡಸ್ಟ್‌ಬಿನ್‌ಗಳನ್ನು ಅಳವಡಿಸಲಾಗಿದೆ. ಇದಕ್ಕೆ ಪ್ರಾಯೋಗಿಕ ವಾಗಿ ಎರಡು ವಾರ್ಡ್‌ಗಳನ್ನು ಬಿಬಿಎಂಪಿ ಅಧಿಕಾರಿಗಳು ಆಯ್ಕೆ ಮಾಡಿಕೊಂಡಿದ್ದಾರೆ.
ಸಿಗರೇಟ್ ತುಂಡುಗಳನ್ನು ಪ್ರತ್ಯೇಕ ರೀತಿಯಲ್ಲಿ ಸಂಗ್ರಹಿಸುವ ನಿಟ್ಟಿನಲ್ಲಿ ಪಾಲಿಕೆ ಯೋಜನೆ ರೂಪಿಸಲಿದೆ. ಹಾಟ್ ಸ್ಪಾಟ್ ಸ್ಥಳಗಲ್ಲಿ ಡಸ್ಟ್ ಬಿನ್‌ಗಳನ್ನು ಇರಿಸಿ ಪ್ರತ್ಯೇಕವಾಗಿ ಸಿಗರೇಟ್ ತುಣುಕುಗಳನ್ನು ಸಂಗ್ರಹಿಸುವ ಪ್ರಾಯೋಗಿಕ ಕೆಲಸ ನಡೆಯಲಿದೆ. ಇದಕ್ಕಾಗಿ ಬಿಬಿಎಂಪಿ 2 ವಾರ್ಡ್‌ಗಳನ್ನು ಆಯ್ಕೆ ಮಾಡಲಿದೆ. ●ಡಾ. ಸೈಯದ್ ಸಿರಾಜುದ್ದೀನ್ ಮದನಿ, ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ.
-ದೇವೇಶ ಸೂರಗುಪ್ಪ