ಟೇಕಲ್: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮ ಪಂಚಾಯ್ತಿಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯಡಿ ವೈಯಕ್ತಿಕ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ತೆಗೆದುಕೊಳ್ಳಲು ತಿಳಿಸಿದ್ದು, ಈಗ ಪ್ರತಿ ಗ್ರಾಪಂನಲ್ಲಿ ವೈಯಕ್ತಿಕ ಕಾಮಗಾರಿಗಳ ಅಭಿಯಾನವನ್ನು ಕೈಗೊಳ್ಳಲು ಆದೇಶ ಹೊರಡಿಸಿದೆ.
ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿ ಕನಿಷ್ಠ 20 ಎಕರೆ ಜಮೀನಿನಲ್ಲಿ ಕ್ಷೇತ್ರ ಬದು ನಿರ್ಮಾಣಕ್ಕೆ ಕಾರ್ಯಾದೇಶ ನೀಡುವುದು. ಕ್ಷೇತ್ರ ಬದು ನಿರ್ಮಿಸಿದ ಜಮೀನಿನಲ್ಲಿ ಮುಂಗಾರು ಅವಧಿಯಲ್ಲಿ ಕೃಷಿ ಅರಣ್ಯೀಕರಣದ ಮೂಲಕ ಗಿಡಗಳನ್ನು ನೆಡಲು ಮುಂಗಡ ಗುಂಡಿಗಳನ್ನು ತೆಗೆಯಬಹುದು. ಪ್ರತಿ ಗ್ರಾಮ ಪಂಚಾಯ್ತಿ ಯಲ್ಲಿ ಕನಿಷ್ಠ 10 ಕೃಷಿ ಹೊಂಡ ನಿರ್ಮಿಸಲು ಕಾಮಗಾರಿಗೆ ಕಾರ್ಯಾದೇಶ ನೀಡಬಹುದೆಂದು ತಿಳಿಸಿದೆ.
ತೋಟಗಾರಿಕೆ ಕ್ಷೇತ್ರ ವಿಸ್ತರಣೆಗಾಗಿ (ಮುಂಗಡ ಗುಂಡಿ ತೆಗೆಯುವುದು) ಕೆಲಸಕ್ಕಾಗಿ ಪ್ರತಿ ತಾಲೂಕಿನಲ್ಲಿ 200 ಎಕರೆ ವಿಸ್ತರಣೆಗೆ ಕಾರ್ಯಾದೇಶ ನೀಡುವಂತೆ ವಿವರಿಸಿದೆ. ಗ್ರಾಪಂವಾರು ಗುರಿಯನ್ನು ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಸಹಾಯಕ ನಿರ್ದೇಶಕರು ತೋಟಗಾರಿಕೆ ಹಂಚಿಕೆ ಮಾಡಬಹುದು. ದನದ ಕೊಟ್ಟಿಗೆಗಾಗಿ ಪ್ರತಿ ಗ್ರಾಮ ಪಂಚಾಯ್ತಿ ಯಲ್ಲಿ ಕನಿಷ್ಠ 10 ಕಾರ್ಯಾದೇಶ ನೀಡಬಹುದು. ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ಕಾರಿ ಕಚೇರಿ/ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಗುಂಡಿ ತೆಗೆಯುವ ಕೆಲಸ ಪ್ರಾರಂಭಿಸಬಹುದೆಂದು ವಿವರಿಸಿದೆ.
ಜಿಪಂ ಸಿಇಒ ಮೂಲಕ ಗ್ರಾಮ
ಪಂಚಾಯ್ತಿವಾರು ಕಾಮಗಾರಿಗಳ ಮೇಲುಸ್ತುವಾರಿ ವಹಿಸುವುದು ಸಾಮ ಗ್ರಿಗಳ ಅವಶ್ಯಕತೆ (ಇಟ್ಟಿಗೆ/ಮರಳು/ ಸಿಮೆಂಟ್) ಯನ್ನು ಪರಿಶೀಲಿಸಿ ಗ್ರಾಮ ಪಂಚಾಯ್ತಿಗಳಿಗೆ ಸಾಮಗ್ರಿ ಸರಬರಾಜು ವ್ಯವಸ್ಥೆ ಮಾಡುವುದೆಂದು ತೋಟ ಗಾರಿಕೆ/ಕೃಷಿ ಅರಣ್ಯೀಕರಣದ ಗುರಿಯನ್ನು ತಾಲೂಕಿನ ಸಾಮರ್ಥ್ಯಕ್ಕೆ ಅನುಗುಣವಾಗಿ ನೀಡುವುದು, ಈ ಕಾರ್ಯಾದೇಶ ಪಿಡಿಒ ನೀಡಲು ತಿಳಿಸಿದೆ.