Advertisement

ಖಾಸಗಿ ಸಂಸ್ಥೆಗಳಲ್ಲಿ  ಸಿಸಿ ಕೆಮರಾ ಅಳವಡಿಸಲು ಆದೇಶ

12:52 PM May 21, 2021 | Team Udayavani |

ಮುಂಬಯಿ: ಗ್ರೇಟರ್‌ ಮುಂಬಯಿ ಪೊಲೀಸ್‌ ಆಯುಕ್ತರ ವ್ಯಾಪ್ತಿಯಲ್ಲಿರುವ ಖಾಸಗಿ ಸಂಸ್ಥೆಗಳಲ್ಲಿ  ಸಿಸಿ ಕೆಮರಾಗಳ ಅಳ ವಡಿಕೆಗೆ ಸಂಬಂಧಿಸಿದಂತೆ  ಆದೇಶ ಹೊರಡಿಸಲಾಗಿದ್ದು, ಈ ಆದೇಶವನ್ನು ತತ್‌ಕ್ಷಣ ಜಾರಿಗೆ ತರುವಂತೆ  ಪೊಲೀಸ್‌ ಉಪ ಆಯುಕ್ತ  ಮತ್ತು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ ಎಸ್‌. ಚೈತನ್ಯ ತಿಳಿಸಿದ್ದಾರೆ.

Advertisement

ಬ್ಯಾಂಕ್‌, ಎಟಿಎಂ,  ಹಣಕಾಸು ಸಂಸ್ಥೆ, ಆಭರಣ ಮಳಿಗೆ,  ಹೊಟೇಲ್‌,  ಗೆಸ್ಟ್‌ ಹೌಸ್‌, ರೆಸ್ಟೋರೆಂಟ್‌,  ಬಾರ್‌,  ಪಬ್‌,  ವೈನ್‌ ಮತ್ತು ಬಿಯರ್‌ ಶಾಪ್‌, ವಸತಿ ಸಂಕೀರ್ಣ, ಕಚೇರಿ ಕಟ್ಟಡ, ಹೊಸ ಮತ್ತು ನಿರ್ಮಾಣ ಹಂತದಲ್ಲಿರುವ ವಸತಿ ಸಂಕೀರ್ಣ / ಕಚೇರಿ,  ಪೆಟೊ›àಲ್‌ ಪಂಪ್‌,  ಶಾಪಿಂಗ್‌ ಮಾಲ್‌,  ಶಾಪಿಂಗ್‌ ಸಂಕೀರ್ಣ,  ಸೂಪರ್‌ಮಾರ್ಕೆಟ್‌,  ಜಿಮ್, ಆಟದ ಮೈದಾನ, ಚಿತ್ರ ಮಂದಿರ ಮತ್ತು ಸಂಕೀರ್ಣಗಳು, ಶೈಕ್ಷಣಿಕ ಸಂಕೀರ್ಣಗಳು, ಧಾರ್ಮಿಕ ಸ್ಥಳಗಳು, ಔಷಧಾಲಯಗಳು,  ಪ್ರತಿಮೆಗಳ ರಕ್ಷಣೆ ಮತ್ತು ನಿರ್ವಹಣೆಗಾಗಿ ನೇಮಕಗೊಂಡ ಸಂಸ್ಥೆಗಳು  ಇತ್ಯಾದಿ ಗಳಲ್ಲಿ ಸಿಸಿ ಕೆಮರಾ ಕಡ್ಡಾಯವಾಗಿದೆ.

ಈ ಖಾಸಗಿ ಸಂಸ್ಥೆಗಳು 50 ಮೀ. ವ್ಯಾಪ್ತಿವರೆಗೆ ಚಿತ್ರೀಕರಿಸುವ ಕೆಮರಾಗಳನ್ನು ಸ್ಥಾಪಿಸಬೇಕು. ಉತ್ತಮ ಗುಣಮಟ್ಟದ್ದಾಗಿರಬೇಕು ಮತ್ತು ರೆಕಾರ್ಡಿಂಗ್‌ ಕನಿಷ್ಠ 15 ದಿನಗಳವರೆಗೆ ಇರಬೇಕು. ಪೊಲೀಸರು ಕೇಳಿದಾಗ ರೆಕಾರ್ಡಿಂಗ್‌ ಅನ್ನು ಪೊಲೀಸರಿಗೆ ನೀಡಬೇಕು. ಶಂಕಿತರು ಕಂಡುಬಂದಲ್ಲಿ  ಹತ್ತಿರದ ಪೊಲೀಸ್‌ ಠಾಣೆಗೆ ವರದಿ ಮಾಡಿ ಎಂದು ಆದೇಶದಲ್ಲಿ ತಿಳಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next