Advertisement

ಕಿತ್ತಳೆ ಹೆಣ್ಣಿನ ನೋಟ

05:06 PM Apr 18, 2018 | Team Udayavani |

ಕಿತ್ತಳೆ ಹಣ್ಣು ತಿಂದರೆ ಆರೋಗ್ಯಕ್ಕೆ ಒಳ್ಳೇದು, ಸಿ ವಿಟಮಿನ್‌ ಸಿಗುತ್ತೆ ಅನ್ನೋದೆಲ್ಲಾ ಮಾಮೂಲಿ. ಅದೇ, ಕಿತ್ತಳೆಯನ್ನು ಫೇಸ್‌ಪ್ಯಾಕ್‌, ಮಾಸ್ಕ್ನಂತೆಯೂ ಬಳಸಬಹುದು. ಅಷ್ಟೇ ಅಲ್ಲ, ಇದು ಎಲ್ಲ ರೀತಿಯ ಚರ್ಮ ಸಮಸ್ಯೆಗೂ, ಎಲ್ಲ ರೀತಿಯ ಚರ್ಮಕ್ಕೂ ಹೊಂದುತ್ತದೆ. ಅಯ್ಯೋ, ಹುಳಿ ಇರುತ್ತೆ, ಮುಖ ಉರಿಯುತ್ತೆ ಅನ್ನೋ ಮುನ್ನ…

Advertisement

1. ಕಾಂತಿಹೀನ ತ್ವಚೆಯವರಿಗೆ
“ಸಿ’ ವಿಟಮಿನ್‌ನಿಂದ ತುಂಬಿ ತುಳುಕುವ ಕಿತ್ತಳೆಯನ್ನು ತಿಂದರಷ್ಟೇ ಅಲ್ಲ, ಚರ್ಮಕ್ಕೆ ಹಚ್ಚಿದರೂ ಒಳ್ಳೆಯದು. ವಾರಕ್ಕೆ ಎರಡು ಬಾರಿ, ಕಿತ್ತಳೆ ರಸಕ್ಕೆ, ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆದರೆ ಚರ್ಮದ ಕಾಂತಿ ಹೆಚ್ಚುತ್ತದೆ. 

2. ಒಣ ಚರ್ಮದವರಿಗೆ
ಕೆಲವರಿಗೆ ಒಣ ಚರ್ಮದ ಸಮಸ್ಯೆಯಿರುತ್ತದೆ. ತ್ವಚೆ ಬಿಳಿಚಿಕೊಂಡು ಉರಿಯೂ ಕಾಣಿಸುತ್ತದೆ. ಅಂಥವರು, ಕಿತ್ತಳೆ ರಸದ ಜೊತೆ ಮೊಸರು ಸೇರಿಸಿ ಹಚ್ಚಿದರೆ ಚರ್ಮ ಮೃದುವಾಗುತ್ತದೆ.  

3. ಜಿಡ್ಡಿನ/ ಎಣ್ಣೆಯ ತ್ವಚೆಯವರಿಗೆ
ಎಣ್ಣೆ ಚರ್ಮದವರನ್ನು ಮೊಡವೆಯಂಥ ಸಮಸ್ಯೆಗಳು ಕಾಡುವುದು ಹೆಚ್ಚು. ಅವರಿಗೂ ಕಿತ್ತಳೆ ರಸದಲ್ಲಿ ಔಷಧವಿದೆ. 3 ಚಮಚ ಕಿತ್ತಳೆ ರಸ, 1 ಚಮಚ ಮಜ್ಜಿಗೆ, 2 ಚಮಚ ಕಡಲೆಹಿಟ್ಟು, 1 ಚಮಚ ಲಿಂಬೆರಸ ಸೇರಿಸಿ ಪೇಸ್ಟ್‌ ಮಾಡಿ ಮುಖಕ್ಕೆ ಹಚ್ಚಿ, ಅರ್ಧ ಗಂಟೆ ಬಿಟ್ಟು ಅರೆಬೆಚ್ಚಗಿನ ನೀರಿನಿಂದ ತೊಳೆದರೆ ಜಿಡ್ಡಿನಾಂಶ ಕಡಿಮೆಯಾಗುತ್ತದೆ.
 
4. ಬಿಸಿಲಿಗೆ ಚರ್ಮ ಸುಟ್ಟಿದ್ದರೆ
ಬೇಸಿಗೆಯಲ್ಲಿ ಚರ್ಮ ಸುಟ್ಟು ಕಪ್ಪಾಗುವುದು ಸಾಮಾನ್ಯ. 1 ಚಮಚ ಕಿತ್ತಳೆ ರಸ, 1 ಚಮಚ ಮೊಟ್ಟೆಯ ದ್ರವ (ಬಿಳಿಭಾಗ) ಮತ್ತು 1 ಚಮಚ ಮೊಸರು ಸೇರಿಸಿ ಫೇಸ್‌ಪ್ಯಾಕ್‌ ಹಚ್ಚಿ, 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಚರ್ಮ ಸಹಜ ಬಣ್ಣಕ್ಕೆ ಬರುತ್ತದೆ. 

5. ಮೊಡವೆ ಕಲೆ ನಿವಾರಣೆಗೆ
ಎಲ್ಲರೂ ಅನುಭವಿಸುವ ಸಾಮಾನ್ಯ ಚರ್ಮದ ಸಮಸ್ಯೆಯೆಂದರೆ ಮೊಡವೆ. 1 ಚಮಚ ಲಿಂಬೆರಸ, 2 ಚಮಚ ಜೇನು ಹಾಗೂ 1 ಚಮಚ ಆಲಿವ್‌ ಎಣ್ಣೆ ಹಚ್ಚಿ ಮಸಾಜ್‌ ಮಾಡಿ, ಅರ್ಧ ಗಂಟೆ ಬಿಟ್ಟು ಮುಖ ತೊಳೆದರೆ ಮೊಡವೆ ಕಲೆ ಮಾಯವಾಗುತ್ತದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next