“ಸುದಂತ ಯೋಜನೆ’ ಎಂದು ಕನ್ನಡದಲ್ಲಿ ಕರೆಯಬಹುದಾದ ಆಥೊìಡಾಂಟಿಕ್ ಚಿಕಿತ್ಸೆಯ ಮುಖ್ಯ ಗಮನ ಹಲ್ಲುಗಳ ಅಸಮರ್ಪಕ ಸ್ಥಾನವನ್ನು ಮತ್ತು ಜಗಿಯುವ ಸ್ಥಾನ ಸಂಬಂಧಗಳನ್ನು ಉತ್ತಮಪಡಿಸುವುದು ಮತ್ತು ಸರಿಪಡಿಸುವುದಾಗಿರಬಹುದು. ಆದರೆ, ಮುಖದ ಆಕಾರ ಮತ್ತು ರೂಪದ ಮೇಲೆಯೂ ಅದು ಕಾಲಾಂತರದಲ್ಲಿ ಪ್ರಭಾವ ಬೀರಬಲ್ಲುದು. ವ್ಯಕ್ತಿಯೊಬ್ಬನ ಹಲ್ಲುಗಳು ಮತ್ತು ಮುಖದ ಸಾಮಾನ್ಯ ಸೌಂದರ್ಯವನ್ನು ಸುರೂಪಕ್ಕೆ ತರುವ ಶುದ್ಧ ಸೌಂದರ್ಯವರ್ಧಕ ಉದ್ದೇಶದಿಂದಲೂ ಆಥೊìಡಾಂಟಿಕ್ ಚಿಕಿತ್ಸೆಯನ್ನು ಕೈಗೊಳ್ಳಬಹುದು. ಇದಲ್ಲದೆ, ಹಲ್ಲುಗಳು ಕಚ್ಚಿಕೊಳ್ಳುವುದನ್ನು (ಮುಚ್ಚಿಕೊಳ್ಳುವಿಕೆ) ಕ್ರಿಯಾತ್ಮಕವಾಗಿ ಉತ್ತಮಪಡಿಸುವ ಉದ್ದೇಶದಿಂದಲೂ ಈ ಚಿಕಿತ್ಸೆ ಅಗತ್ಯವಾಗಬಹುದು. ಬಹುತೇಕ ಸಂದರ್ಭಗಳಲ್ಲಿ ಈ ಎರಡೂ ಗುರಿಗಳನ್ನು ಏಕಕಾಲದಲ್ಲಿ ಸಾಧಿಸಬಹುದಾಗಿದೆ.
Advertisement
ಮುಖದಲ್ಲಿ ಅರಳುವ ನಗುವಿನ ವಿನ್ಯಾಸದಲ್ಲಿ ಅತ್ಯಂತ ಮುಖ್ಯವಾದ ಮತ್ತು ಮೂಲಭೂತವಾಗಿ ನಿರ್ಣಾಯಕವಾಗುವ ವಿಚಾರ ಹಲ್ಲುಗಳ ರಚನೆ ಮತ್ತು ಸ್ಥಾನ. ಅಂದರೆ, ಮುಖದ ಚೌಕಟ್ಟು ಮತ್ತು ದವಡೆಯಲ್ಲಿ ಹಲ್ಲುಗಳು ವಸ್ತುಶಃ ಹೇಗೆ ಸ್ಥಾಪಿತವಾಗಿವೆ ಹಾಗೂ ಮೇಲ್ದವಡೆ ಮತ್ತು ಕೆಳದವಡೆಗಳು ಪರಸ್ಪರ ಹೇಗೆ ಹೊಂದಿಕೊಳ್ಳುತ್ತಿವೆ.
ತಮ್ಮ ನಡುವೆ ಸ್ಥಿತಿಸ್ಥಾಪಕ ಗುಣ ಹೊಂದಿರುವ ಸೂಕ್ಷ್ಮ ತಂತುಗಳನ್ನು ಪೋಣಿಸಿಕೊಂಡಿದ್ದು, ಹಲ್ಲುಗಳ ಮೇಲೆ ಅಳವಡಿಸಲ್ಪಡುವ ಕಿರು ಬ್ರಾಕೆಟ್‌ಗಳೇ ಸಾಮಾನ್ಯವಾಗಿ “ಬ್ರೇಸಸ್’ ಎಂದು ಕರೆಯಲ್ಪಡುವ ಆಥೊìಡಾಂಟಿಕ್ ಪರಿಕರಗಳು. ಈ ಸೂಕ್ಷ್ಮ ತಂತುಗಳು ಸ್ಥಿತಿಸ್ಥಾಪಕ ಗುಣ ಹೊಂದಿರುವುದರಿಂದ ಅಸಮರ್ಪಕ ಸ್ಥಾನದಲ್ಲಿರುವ ಹಲ್ಲುಗಳ ಮೇಲೆ ಇವು ಮೃದುವಾದ ಒತ್ತಡವನ್ನು ಹೇರಿ ಹಲ್ಲುಗಳನ್ನು ಸೂಕ್ತ ಸ್ಥಾನಕ್ಕೆ ಸ್ಥಾನಾಂತರ ಹೊಂದುವಂತೆ ಮಾಡುತ್ತವೆ. ಹಲ್ಲುಗಳನ್ನು ಎಲುಬಿನ ಜತೆಗೆ ಸಂಧಿಸುವ ಪರಿದಂತದ ಮೂಳೆನಾರಿನ ಗುಣ ಹಲ್ಲುಗಳು ಸಮಸ್ಥಿತಿಗೆ ಚಲಿಸಲು ಕಾರಣವಾಗುತ್ತದೆ. ಈ ಜೀವಕೋಶಗಳು ಸಜೀವವಾಗಿರುವ ಕಾರಣ ಸತತವಾಗಿ ಪರಿವರ್ತನೆ ಹೊಂದುತ್ತಿರುತ್ತವೆ ಮತ್ತು ಪುನಾರೂಪಿತಗೊಳ್ಳುತ್ತಿರುತ್ತವೆ. – ಡಾ| ರಿತೇಶ್ ಸಿಂಗ್ಲಾ ,
ರೀಡರ್, ಆಥೊìಡಾಂಟಿಕ್ಸ್ ವಿಭಾಗ,
ಮಣಿಪಾಲ ದಂತ ವೈದ್ಯಕೀಯ ವಿಜ್ಞಾನ ಕಾಲೇಜು,
ಮಣಿಪಾಲ