ನವ ದೆಹಲಿ : ಶೂನ್ಯ ರೂಪಿಗಳಾದ ವಿರೋಧ ಪಕ್ಷದ ನಾಯಕರನ್ನು, ಸಮಗ್ರವಾಗಿ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಯಾವ ಆಯಾಮದಲ್ಲಿಯೂ ಹೋಲಿಸುವುದಕ್ಕೆ ಸಾಧ್ಯವಿಲ್ಲವೆಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಮತ್ತು ಬಿಜೆಪಿ ನಾಯಕ ಅಜಯ್ ಮಿಶ್ರಾ ಟೆನಿ ಹೇಳಿದ್ದಾರೆ.
ಬರುವ ಲೋಕ ಸಭಾ ಚುನಾವಣೆಯನ್ನು ಎಲ್ಲಾ ಪ್ರತಿಪಕ್ಷಗಳು ಒಗ್ಗೂಡಿ ಬಿಜೆಪಿಯನ್ನು ಎದುರಿಸುವ ಉದ್ದೇಶದಿಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪ್ರಯತ್ನವನ್ನು ಸಚಿವರು ಹೀಗೆ ಜರಿದಿದ್ದಾರೆ.
ಇದನ್ನೂ ಓದಿ : ಮೂಡಿಗೆರೆ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು : ಉಡುಪಿ ಮೂಲದ ಪ್ರಯಾಣಿಕರು ಪಾರು
ರಾಷ್ಟ್ರೀಯ ಸುದ್ದಿ ಸಂಸ್ಥೆ ಎ ಎನ್ ಐ ನೊಂದಿಗೆ ಮಾತನಾಡಿದ ಟೆನಿ, ಮಮತಾ ಬ್ಯಾನರ್ಜಿ ಹತಾಶರಾಗಿದ್ದಾರೆ. ಈಗ ಎಲ್ಲಾ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ಇದ್ದಾರೆ. ಇದೇ ಪ್ರಯತ್ನವನ್ನು ಕಳೆದ ಲೋಕ ಸಭಾ ಚುನಾವಣೆಯ ಸಂದರ್ಭದಲ್ಲಿಯೂ ಮಾಡಿದ್ದರು. ವಿಫಲವಾಗಿರುವುದು ನಿಮಗೆ ತಿಳಿದೇ ಇದೆ. ಈ ಬಾರಿಯೂ ಬ್ಯಾನರ್ಜಿಯವರದ್ದು ವಿಫಲ ಯತ್ನವಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸದೃಢವಾಗುತ್ತಿರುವುದರಿಂದ ಮಮತಾ ಬ್ಯಾನರ್ಜಿ ಭಯದಲ್ಲಿದ್ದಾರೆ. ಮುಂದಿನ ವಿಧಾನ ಸಭಾ ಮಮತಾ ಬ್ಯಾನರ್ಜಿಯವರಿಗೆ ಟಿಎಂಸಿಯಿಂದ ಬಿಜೆಪಿಯನ್ನು ರದುರಿಸುವ ಭಯವಿದೆ. ಅದೇ ಭಯದಿಂದಲೇ ಅವರು ದೆಹಲಿಗೆ ಬಂದಿದ್ದಾರೆ. ಮೈತ್ರಿಗೆ ಪರದಾಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 2026ರ ವಿಧಾನ ಸಭಾ ಚುನಾವಣೆಯ ಫಲಿತಾಂಶ ಬಿಜೆಪಿ ಪಾಲಾಗಿಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ : ಚಿಕ್ಕಮಗಳೂರು: ಜಮೀನಿಗೆ ಹಾಕಿದ್ದ ತಂತಿ ಬೇಲಿಯ ವಿದ್ಯುತ್ ಸ್ಪರ್ಶಿಸಿ ಕಾಡಾನೆ ಸಾವು