Advertisement

ಗಂಟಲು ದ್ರಾವಣ ಸಂಗ್ರಹಕ್ಕೆ ವಿರೋಧ

05:52 AM May 15, 2020 | Lakshmi GovindaRaj |

ಬೆಂಗಳೂರು: ಪಾದರಾಯನಪುರ ವಾರ್ಡ್‌ನಲ್ಲಿ ಶಂಕಿತರ ಕ್ವಾರಂಟೈನ್‌ ವಿಚಾರವಾಗಿ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಇದರ ಬೆನ್ನಲ್ಲೆ ಪಾದರಾಯನಪುರ ವಾರ್ಡ್‌ನ ಸುತ್ತಮುತ್ತಲ ಆಸ್ಪತ್ರೆಗಳಲ್ಲಿ ಶಂಕಿತರ ಗಂಟಲು ದ್ರಾವಣ ಸಂಗ್ರಹ ಕ್ಯಾಂಪ್‌ ಹಾಕಲು ಸ್ಥಳೀಯ ರಿಂದ ವಿರೋಧ ವ್ಯಕ್ತವಾಗಿದೆ. ನಗರದ ಹಾಟ್‌ಸ್ಪಾಟ್‌ ಪಾದರಾಯನ ಪುರದಲ್ಲಿ ರ್‍ಯಾಂಡಮ್‌ ಸೋಂಕು ಪರೀಕ್ಷೆ ಯಲ್ಲಿ ಅನೇಕರಿಗೆ ಸೋಂಕು ದೃಢಪಟ್ಟ ಹಿನ್ನೆಲೆ ಎಲ್ಲಾ ನಿವಾಸಿಗಳ ಪರೀಕ್ಷೆಗೆ ಬಿಬಿಎಂಪಿ ಮುಂದಾಗಿದೆ.

Advertisement

ಪರೀಕ್ಷೆಗೆ ಅಗತ್ಯ ವಿರುವ ಗಂಟಲು ದ್ರವ ಸಂಗ್ರಹಿಸಲು ಪಕ್ಕದ ವಾರ್ಡ್‌ನ ಜೆಜೆಆರ್‌ ನಗರ ರೆಫೆರಸ್‌ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡಿತ್ತು. ಆದರೆ, ಆಸ್ಪತ್ರೆಯ ಸುತ್ತ ಮುತ್ತಲ ನಿವಾಸಿಗಳು ಹಾಗೂ ಗಜೀವನ್‌ರಾಮ್‌ನಗರ ವಾರ್ಡ್‌, ರಾಯಪುರ ವಾರ್ಡ್‌ನಲ್ಲಿಯೂ “ಸೋಂಕು ಪರೀಕ್ಷೆಗೆ ಬರುವವರು ನಮ್ಮ ವಾರ್ಡ್‌ ವಿವಿಧ ರಸ್ತೆಗಳಲ್ಲಿ ನಡೆದುಕೊಂಡು ಬರುತ್ತಾರೆ. ಇದರಿಂದ ನಮ್ಮ ವಾರ್ಡ್‌ಗೆ ಸೋಂಕು ಹರಡುತ್ತದೆ.

ಪಾದರಾಯನ  ಪುರದಲ್ಲಿಯೇ ಗಂಟಲು ದ್ರಾವಣ ಸಂಗ್ರಹಿಸಿ ಅಥವಾ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಿರಿ’ ಎಂದು ವಿರೋಧ ವ್ಯಕ್ತಪಡಿಸಿದ್ದರು. ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುವಂತೆ, “ಪಾದರಾಯನಪುರ ವಾರ್ಡ್‌ನಲ್ಲಿ 35  ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ಪರೀಕ್ಷೆ ಮಾಡಬೇಕಿದೆ. ಮೊದಲ ಹಂತದಲ್ಲಿ ಅತೀ ಹೆಚ್ಚು ಸೋಂಕು ದೃಢಪಟ್ಟ ಹರಫ‌ತ್‌ ನಗರದ 5 ರಿಂದ 11ನೇ ಅಡ್ಡ ರಸ್ತೆಯಲ್ಲಿ ವಾಸವಿರುವ 5,000ಕ್ಕೂ ಹೆಚ್ಚು ಮಂದಿಗೆ ಪರೀಕ್ಷೆ  ಮಾಡಲಾಗುತ್ತದೆ.

ನಿತ್ಯ 100 ರಿಂದ 150 ಮಂದಿಯ ಗಂಟಲು ದ್ರಾವಣ ಸಂಗ್ರಹಿಸಲಾಗುತ್ತದೆ. ಎಲ್ಲರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವುದಕ್ಕೆ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಹೀಗಾಗಿಯೇ, ಸಮೀಪದ ಆಸ್ಪತ್ರೆಯಲ್ಲಿ  ಗಂಟಲು ದ್ರಾವಣ ಸಂಗ್ರಹ ಕಿಯೋಸ್ಕ್ ಹಾಕಲಾಗಿದೆ. ಇದಕ್ಕಾಗಿ ಪಾದರಾಯನಪುರ ಹಾಗೂ ರಾಯಪುರಂ ನಡುವಿನ ಜೆಜೆಆರ್‌ ನಗರ ರೆಫೆರಲ್‌ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜತೆಗೆ 2 ಮೊಬೈಲ್‌ ಕ್ಲಿನಿಕ್‌ ಗಳು ಬಳಸಿ  ಅವುಗಳಲ್ಲಿಯೂ ದ್ರಾವಣ ಸಂಗ್ರಹಿಸಲು ವ್ಯವಸ್ಥೆ ಮಾಡಿದೆ’.

ಕ್ವಾರಂಟೈನ್‌ ಬಳಿಕ ಮನೆಗೆ: ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ಕೊರೊನಾ ಸೋಂಕು ದೃಢಪಟ್ಟವರ ಪ್ರಾಥಮಿಕ ಸಂಪರ್ಕದಲ್ಲಿದ್ದು, 14ದಿನಗಳ ಕಾಲ ಕ್ವಾರಂಟೈನ್‌ ಮುಗಿಸಿರುವ 172 ಜನರನ್ನು ಶುಕ್ರವಾರ ಮತ್ತು ಶನಿವಾರ ಹಂತ ಹಂತವಾಗಿ ಅವರ  ಊರುಗಳಿಗೆ ಕಳುಹಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಅನುºಕುಮಾರ್‌ ತಿಳಿಸಿದರು. ಈ ಸಂಬಂಧ ಪ್ರತಿಕ್ರಿಯಿಸಿದ ಅವರು,

Advertisement

ಉತ್ತರ ಪ್ರದೇಶದ 14ಜನರನ್ನು ಶುಕ್ರವಾರ ಹಾಗೂ ಬಿಹಾರದ 92ಜನರನ್ನು ಶನಿವಾರ ರೈಲಿನ  ಮೂಲಕ ಕಳುಹಿಸಲಾಗುವುದು. ಇನ್ನು 40ಜನ ಕರ್ನಾಟಕದವರು ಇದ್ದಾರೆ. ಒಟ್ಟು 172ಜನ ಇದ್ದು ಇವರನ್ನೆಲ್ಲ ಹಂತ ಹಂತವಾಗಿ ಕಳುಹಿಸಲಾಗುವುದು. ಈಗಾಗಲೇ ಕ್ವಾರಂಟೈನ್‌ ಮುಗಿಸಿದ ಎಲ್ಲರಿಗೂ ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ. ಐವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಲ್ಲರ ಹೆಸರನ್ನು ಸೇವಾ ಸಿಂಧು ಪೋರ್ಟ್‌ಲ್‌ನಲ್ಲಿ ರಿಜಿಸ್ಟರ್‌ ಮಾಡಲಾಗಿದೆ ಎಂದರು.

ಕಾಂಪೌಂಡ್‌ ಹತ್ತಿ ಹೋಗುವವರ ಸಂಖ್ಯೆ ಹೆಚ್ಚಳ: ಇಬ್ಬರು ಮಹಿಳೆಯರು ಪಾದರಾಯನಪುರ ಮತ್ತು ಟೆಲಿಕಾಂ ಲೇಔಟ್‌ನ ಗಡಿಭಾಗದ ಪ್ರದೇಶದಲ್ಲಿ ಕಾಂಪೌಂಡ್‌ ಹತ್ತಿ ಪಕ್ಕದ ಏರಿಯಾಗಳಿಗೆ ಹೋಗುತ್ತಿದ್ದರು. ಹೀಗಾಗಿ ಈ ಭಾಗದಲ್ಲಿ ಹೆಚ್ಚು ಭದ್ರತೆ ಹಾಕಿ ಸಾರ್ವಜನಿಕ ಎಚ್ಚರಿಕೆ  ಡಲಾಯಿತು. ಆದರೂ ಜನ ಎಚ್ಚೆತ್ತುಕೊಂಡಂತಿಲ್ಲ. ಹೀಗಾಗಿ ಪಾದರಾಯನಪುರದ ಎಲ್ಲೆಡೆ ಗಡಿಭಾಗದಲ್ಲಿ ಮರದ ತುಂಡುಗಳು, ಬ್ಯಾರಿಕೇಡ್‌ ಗಳನ್ನು ಹಾಕಿ ಕಟ್ಟಲಾಗಿದೆ.

ಆದರೂ ಕೆಲ ಮಹಿಳೆಯರು, ಮಕ್ಕಳು, ಸಾರ್ವಜನಿಕರು  ವಾಹನಗಳ ಸಮೇತ ಬ್ಯಾರಿಕೇಡ್‌ ಗಳನ್ನು ತಳ್ಳಿ, ಮರದ ತುಂಡುಗಳನ್ನು ಹತ್ತಿ ರೈಲ್ವೆ ಹಳಿ ದಾಟಿ ವಿಜಯನಗರ, ಹೊಸಹಳ್ಳಿ ಕಡೆ ಹೋಗುತ್ತಿದ್ದರು. ಕಾಂಪೌಂಡ್‌ ಹತ್ತಿ ರೈಲ್ವೆ ಹಳಿ ಮೂಲಕ ಮಹಿಳೆಯರು, ಸಾರ್ವಜನಿಕರು  ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಇದೀಗ ಪೊಲೀಸರು ಈ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಂಡಿದ್ದಾರೆ.

ಪಾದರಾಯನಪುರದಲ್ಲಿ ಸಾಕಷ್ಟು ಮಂದಿಗೆ ಕೊರೊನಾ ಸೋಂಕಿದೆ. ಜೆಜೆಆರ್‌ ನಗರ ಆಸ್ಪತ್ರೆ ಬಳಿ ಗಂಟಲು ದ್ರಾವಣ ನೀಡಲು ಬರುವವರಿಗೂ ಸೋಂಕು ತಗುಲಿರ ಬಹುದು. ಇದರಿಂದ ನಮ್ಮ ವಾರ್ಡ್‌ಗೂ ಸೋಂಕು ಹರಡುವ ಸಾಧ್ಯತೆ ಇದೆ. ಇತರೆ ವಾರ್ಡ್‌ನ ರಸ್ತೆಯಲ್ಲಿ ಪಾದರಾಯನಪುರದವರು ಓಡಾಟ ನಡೆಸದಂತೆಬಿಬಿಎಂಪಿ ಸೂಕ್ತ ಕ್ರಮಕೈಗೊಳ್ಳಬೇಕು.
-ರಮೇಶ್‌, ಸ್ಥಳೀಯರು

* ಜಯಪ್ರಕಾಶ್‌ ಬಿರಾದಾರ್

Advertisement

Udayavani is now on Telegram. Click here to join our channel and stay updated with the latest news.

Next