Advertisement
ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ಪಟ್ಟಣದಲ್ಲಿನ ಮದ್ಯದಂಗಡಿಗಳು ಮುಚ್ಚಿದ್ದು, ಬಳ್ಳಾರಿ ಕ್ಯಾಂಪಿನ ಒಂದು ಅಂಗಡಿಮಾತ್ರ ಪ್ರತಿಭಟನೆಯ ನಡುವೆಯೂ ಕಾನೂನಿನ ರಕ್ಷಣೆ ನೆಪದಲ್ಲಿ ಮುಂದುವರಿದಿದೆ. ಇದನ್ನು ಮುಚ್ಚುವಂತೆ ಪ್ರತಿಭಟನೆಗಳು ನಡೆದಿರುವ ಬೆನ್ನಲ್ಲೆ ಶನಿವಾರ ದಿಢೀರ್ ರೈಲ್ವೆ ನಿಲ್ದಾಣದ ಹತ್ತಿರ ಮದ್ಯದಂಗಡಿ ಆರಂಭಗೊಂಡಿದ್ದಕ್ಕೆಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ರೈಲ್ವೆ ನಿಲ್ದಾಣದ ಮುಂಭಾಗ ಮದ್ಯದ ಪರವಾನಗಿ ನೀಡಿರುವ ಅಂಗಡಿಮುಂದೆ ಜಮಾವಣೆಗೊಂಡ ಈ ಭಾಗದ ಕ್ರಿಸ್ತಶರಣ ವಿದ್ಯಾಲಯದ ಶಿಕ್ಷಕರು ಮತ್ತು ಸಿಬ್ಬಂದಿ, ಅಕ್ಕಪಕ್ಕದ ನಿವಾಸಿಗಳು, ಪುರಸಭೆ ಸದಸ್ಯರು ಸ್ಥಳಕ್ಕಾಗಮಿಸಿದ ಅಬಕಾರಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.
ನಾಗರಿಕರ ಅಭಿಪ್ರಾಯ ಮತ್ತು ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಸೂಕ್ತರೀತಿಯ ತೀರ್ಮಾನಕ್ಕೆ ಬರದೇ ಸರ್ವಾ ಧಿಕಾರಿ ಧೋರಣೆ ಅನುಸರಿಸಿ ಪರವಾನಗಿ ನೀಡಿರುವ ಅಬಕಾರಿ ಇಲಾಖೆ ಮತ್ತು ಸರ್ಕಾರದ ನಡೆ ಜನಪ್ರತಿನಿ ಧಿಗಳಿಗೆ ಮಾಡಿದ ದ್ರೋಹ ಎಂದರು. ಅಬಕಾರಿ ಅಧಿಕಾರಿ ನೌಶದ್ ಅಹಮದ್ ಖಾನ್ ಮನವಿ ಸ್ವೀಕರಿಸಿ ಈ ಕುರಿತು
ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಜಿಲ್ಲಾಡಳಿತ, ಅಬಕಾರಿ ಇಲಾಖೆ ಮದ್ಯದಂಗಡಿಗಳ ಪರವಾನಗಿಯನ್ನು ವಾಪಸ್ ಪಡೆದು ಸಾರ್ವಜನಿಕರ ರಕ್ಷಣೆಗೆ ಬರದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರದ ಜೊತೆ ಉಪವಾಸ ಸತ್ಯಾಗ್ರಹ ಮಾಡಲಾಗವುದುಉ ನಿವಾಸಿಗಳು ಎಚ್ಚರಿಸಿದರು. ಕ್ರಿಸ್ತಶರಣ ಶಾಲೆಯ ಮುಖ್ಯಸ್ಥ ತಾರಾಸೆರಾವೋ, ಶಿಕ್ಷಕರು, ಪುರಸಭೆ ಸದಸ್ಯರಾದ ಎಂ.ಪಿ.ಸುದರ್ಶನ್, ಮಾರ್ಗದಮಧು, ಎಸ್. ಎಸ್. ದೇವರಾಜ್, ಶರತ್, ಶಶಿಧರ್, ಹಾಗೂ ರೈಲ್ವೆ ರಸ್ತೆ ನಿವಾಸಿಗಳಾದ ಚಂದ್ರಶೇಖರ್,
ಶಾಮಿಲ್ ಚಂದ್ರಪ್ಪ, ಶಶಿಕುಮಾರ್ ಇದ್ದರು.