Advertisement

ರಾಹುಲ್‌ಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ಬಡ್ತಿಗೆ ವಿರೋಧ

10:53 PM May 05, 2023 | Team Udayavani |

ಹೊಸದಿಲ್ಲಿ: ರಾಹುಲ್‌ಗಾಂಧಿ ವಿರುದ್ಧದ ಮಾನಹಾನಿ ಪ್ರಕರಣದಲ್ಲಿ ತೀರ್ಪು ನೀಡಿದ್ದ ನ್ಯಾಯಾಧೀಶರು ಸಹಿತ 68 ನ್ಯಾಯಾಧೀಶರಿಗೆ ನೀಡಿರುವ ಬಡ್ತಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ನ್ಯಾಯಮೂರ್ತಿಗಳಾದ ಎಂ.ಎಆರ್‌.ಷಾ ಅವರ ನ್ಯಾಯಪೀಠವು ಈ ಅರ್ಜಿಯನ್ನು ಮೇ 8ರಂದು ವಿಚಾರಣೆ ನಡೆಸಲಿದೆ. ಶೇ.65 ಮೀಸಲಾತಿ ಆಧಾರದಲ್ಲಿ ಈ 68 ನ್ಯಾಯಾಧೀಶರಿಗೆ ಬಡ್ತಿ ನೀಡಲಾಗಿತ್ತು. ಆದರೆ ಈ ಬಡ್ತಿಯನ್ನು ರದ್ದುಗೊಳಿಸುವಂತೆ ಹಾಗೂ ಮೀಸಲಾತಿ ಜತಗೆ ಬಡ್ತಿಯಲ್ಲಿ ನ್ಯಾಯಾ ಧೀಶರ ಹಿರಿತನದ ಆಧಾರವನ್ನು ಪರಿಗಣ ಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ. ಇದರಲ್ಲಿ ಸೂರತ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾ ಲಯದ ನ್ಯಾಯಾಧೀಶ, ರಾಹುಲ್‌ ವಿರುದ್ಧ ತೀರ್ಪು ಹಸು¾ಖ್‌ಬಾಯ್‌ ಹರೀಶ್‌ ಕೂಡ ಸೇರಿದ್ದಾರೆ. ಹಿರಿಯ ಸಿವಿಲ್‌ ಜಡ್ಜ್ ಕೇಡರ್‌ನ ನ್ಯಾಯಾಂಗ ಅಧಿಕಾರಿಗಳಾದ ರವಿಕುಮಾರ್‌ ಮೆಹ್ತಾ ಹಾಗೂ ಸಚಿನ್‌ ಪ್ರತಾಪ್ರಾಯ ಮೆಹ್ತಾ ಸುಪ್ರೀಂಕೋರ್ಟ್‌ ನಲ್ಲಿ ಈ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಮಾರ್ಚ್‌10 ರಂದು ಗುಜರಾತ್‌ ಹೈಕೋರ್ಟ್‌ 68 ಮಂದಿಯ ಈ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು.

Advertisement

ವಿದ್ಯಾರ್ಥಿಗಳೊಂದಿಗೆ ರಾಹುಲ್‌ ಸಂವಾದ
ಹೊಸದಿಲ್ಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ದಿಲ್ಲಿ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿ­ಗಳೊಂದಿಗೆ ಸಂವಾದ ನಡೆಸಿ­ದ್ದಾರೆ.
ಪುರುಷರ ಹಾಸ್ಟೆಲ್‌ನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಬಿಳಿ ಟೀಶರ್ಟ್‌, ಪ್ಯಾಂಟ್‌ ಧರಿಸಿದ್ದ ಅವರು ವಿದ್ಯಾರ್ಥಿಗಳ ಸಮಸ್ಯೆಗಳೇ­ನೆಂದು ತಿಳಿಯಲು ಬಯಸಿ­ದ್ದರು ಎಂದು ಮೂಲ ಗಳು ಹೇಳಿವೆ.

ಕಳೆದ ತಿಂಗಳು ರಾಹುಲ್‌ ಗಾಂಧಿ, ಯುಪಿಎಸಿ ಪರೀಕ್ಷೆಗಳಿಗೆ ಸಿದ್ಧರಾಗಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ಆಗವರು ರಸ್ತೆ ಬದಿಯಲ್ಲಿ ಒಂದು ಕುರ್ಚಿ ಹಾಕಿಕೊಂಡು ಕುಳಿತು ವಿದ್ಯಾರ್ಥಿಗಳು ಮತ್ತವರ ನಿರೀಕ್ಷೆಗಳನ್ನು ಆಲಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next