Advertisement

ಶಾಲೆಗಳ ವಿಲೀನಕ್ಕೆ ವಿರೋಧ

10:10 AM Jul 09, 2018 | Team Udayavani |

ಕ‌ಲಬುರಗಿ: ಶಾಲೆ ವಿಲೀನದ ಹೆಸರಿನಲ್ಲಿ ಸುಮಾರು 28847 ಶಾಲೆಗಳನ್ನು ಮುಚ್ಚಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ನೋವುಂಟಾಗಿದೆ. ಆದ್ದರಿಂದ ಈ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು ಎಂದು ಎಐಡಿಎಸ್‌ಒ (ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌) ವಿದ್ಯಾರ್ಥಿ ಸಂಘಟನೆ ಪದಾಧಿಕಾರಿಗಳು ರವಿವಾರ ನಗರಕ್ಕೆ ಆಗಮಿಸಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ಸಚಿವ ಎನ್‌. ಮಹೇಶ ಅವರಿಗೆ ಮನವಿ ಮಾಡಿದರು.

Advertisement

ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸಿ ಬೀದಿಪಾಲು ಮಾಡುತ್ತಿರುವುದು ನ್ಯಾಯವೇ? ಪ್ರತಿ ಶಾಲೆಯಲ್ಲಿ ಕನಿಷ್ಠ ಮೂರ್‍ನಾಲ್ಕು ಶಿಕ್ಷಕರು ಎಂದರೆ ಸರಾಸರಿ ಒಂದು ಲಕ್ಷ ಶಿಕ್ಷಕರು ಶಾಶ್ವತವಾಗಿ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿಯನ್ನು ಸರ್ಕಾರವೇ ಸೃಷ್ಟಿಸುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಯಾವುದೇ ಲಾಭ-ನಷ್ಟದ ಮೀನಾಮೇಷ ಎಣಿಸದೆ ಆರ್ಥಿಕ ಸಹಾಯ ಒದಗಿಸಬೇಕಾಗಿರುವುದು ಸರಕಾರದ ಕರ್ತವ್ಯಗಳಲ್ಲಿ ಒಂದಾಗಿದೆ. ಆದ್ದರಿಂದ ವಿಲಿನೀಕರಣದ ಹೆಸರಿನಲ್ಲಿ 28847 ಶಾಲೆ ಮುಚ್ಚಲು ಹೊರಟಿರುವ ನಿರ್ಧಾರ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು. ಎಐಡಿಎಸ್‌ಒ ಪದಾಧಿಕಾರಿಗಳಾದ ಮಲ್ಲಿನಾಥ ಸಿಂಘೆ, ಹಣಮಂತ ಎಸ್‌.ಎಚ್‌., ಶರಣು ಹೇರೂರ, ಮಲ್ಲಿನಾಥ ಗುಂಡೇಕಲ್‌, ಶಿವಕುಮಾರ ಆಂದೋಲಾ ಇದ್ದರು.

ಉಪನ್ಯಾಸಕರ ಮನವಿ: 2013ರಲ್ಲಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರಾಗಿ ನೇಮಕವಾಗಿ, ಸದ್ಯ ಬಿಎಡ್‌ ವ್ಯಾಸಾಂಗದಲ್ಲಿರುವ ರಾಜ್ಯದ ಸುಮಾರು 600ಕ್ಕೂ ಹೆಚ್ಚಿನ ಉಪನ್ಯಾಸಕರಿಗೆ ಎರಡು ವರ್ಷದ ಬಿಎಡ್‌ ಅವಧಿಯನ್ನು ಸೇವಾವ ಧಿ ಎಂದು ಪರಿಗಣಿಸಿ ಪೂರ್ಣ ವೇತನ ನೀಡುವಂತೆ ಪಿಯು ಉಪನ್ಯಾಸಕರ ಜಿಲ್ಲಾ ಘಟಕದ ವತಿಯಿಂದ ಸಚಿವ ಎನ್‌.ಮಹೇಶ ಅವರಿಗೆ ಮನವಿ ಸಲ್ಲಿಸಲಾಯಿತು.

ಸದ್ಯ ಬಿಎಡ್‌ ವ್ಯಾಸಾಂಗ ನಿರತ ಉಪನ್ಯಾಸಕರಿಗೆ ಈ ಅವ ಧಿಯನ್ನು ಸೇವಾರಹಿತ ಎಂದು ಪರಿಗಣಿಸಲಾಗಿದೆ. ಜತೆಗೆ ಪೂರ್ಣ ವೇತನ ನೀಡದೇ ಸ್ಟೈಫಂಡ್‌ ನೀಡಲಾಗುತ್ತಿದೆ. ಈ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಲಾಯಿತು. ಮನವಿ ಸ್ವೀಕರಿಸಿದ ಸಚಿವರು, ಉಪನ್ಯಾಸಕರ ಸೇವೆ ಮತ್ತು ಪೂರ್ಣ ವೇತನದ ನಷ್ಟದ ಬಗ್ಗೆ ಗಮನಕ್ಕೆ ಬರಲಾಗಿದೆ. ಈ ಕುರಿತಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಪ್ರಾಚಾರ್ಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಕಾಂತ ಅವಂಟಿ, ಉಪನ್ಯಾಸಕರ ಸಂಘದ ಪದಾಧಿಕಾರಿಗಳಾದ ಜೆ. ಮಲ್ಲಪ್ಪ, ನರಸಪ್ಪ ರಂಗೋಲಿ, ಜಿ.ಎಸ್‌. ಮಾಲಿಪಾಟೀಲ, ತಿಪ್ಪಾರೆಡ್ಡಿ, ಬಾಬುರಾವ್‌ ಚವ್ಹಾಣ, ಶರಣಯ್ಯ ಹಿರೇಮಠ, ಎಚ್‌.ಬಿ. ಪಾಟೀಲ, ರಾಜಕುಮಾರ ಕೋರಿ, ಜಗಜ್ಯೋತಿ ಬಸವೇಶ್ವರ ಸಮಾಜ ಸೇವಾ ಬಳಗ ಮತ್ತು ಬಸವೇಶ್ವರ ಶಿಕ್ಷಣ ಸಂಸ್ಥೆ ಸದಸ್ಯರಾದ ರಾಜಶೇಖರ ಮರಡಿ, ವೀರೇಶ ನಾವದಗಿ, ನರಸಪ್ಪ ಬಿರಾದಾರ, ಸೋಮಶೇಖರ ಪಾಟೀಲ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next