Advertisement
ಗ್ರಾಮಸ್ಥರ ನಿಯೋಗ ಮಂಗಳವಾರ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿ, ಚಿತ್ತಾಪುರ ತಾಲೂಕಿನ 12 ಗ್ರಾಮಗಳನ್ನು ಕಾಳಗಿ ತಾಲೂಕಿಗೆ ಸೇರ್ಪಡೆ ಮಾಡಲಾಗಿದೆ. ಇದರಿಂದಾಗಿ ಈ ಗ್ರಾಮಸ್ಥರಿಗೆ ತೊಂದರೆಯಾಗಲಿದೆ ಎಂದು ತಾಲೂಕಾಡಳಿದ ಗಮನ ತರಲಾಯಿತು. ಸರ್ಕಾರ ತಾಲೂಕು ವಿಂಗಡಣೆ ಮಾಡಬೇಕಾದರೆ ಒಂದು ಸಮಿತಿ ರಚಿಸಿ, ಗ್ರಾಮಸ್ಥರ ಅಭಿಪ್ರಾಯ ಸಂಗ್ರಹ ಮಾಡಿ ತಾಲೂಕನ್ನು ವಿಭಜನೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಕೆಲ ರಾಜಕಾರಣಿಗಳು ಸ್ವಾರ್ಥ ರಾಜಕಾರಣಕ್ಕಾಗಿ ಈ ಹಳ್ಳಿಗಳನ್ನು ಮಾರ್ಪಾಡು ಮಾಡಿ ಕಾಳಗಿ ತಾಲೂಕಿಗೆ ಸೇರ್ಪಡೆ ಮಾಡಿರುವುದು ತಮ್ಮ ವಿರೋಧವಿದೆ ಎಂದು ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ್ ತಿಳಿಸಿದರು.
Advertisement
ಕಾಳಗಿಗೆ ಗ್ರಾಮಗಳ ಸೇರ್ಪಡೆಗೆ ವಿರೋಧ
08:09 AM Jun 24, 2020 | Suhan S |
Advertisement
Udayavani is now on Telegram. Click here to join our channel and stay updated with the latest news.