Advertisement

ಹುಲಿ ಯೋಜನೆಗೆ ವಿರೋಧ

02:31 PM Dec 04, 2020 | Suhan S |

ಬಾಳೆಹೊನ್ನೂರು: ಹುಲಿ ಯೋಜನೆ, ಕಸ್ತೂರಿ ರಂಗನ್‌ ವರದಿ, ಪರಿಸರ ಸೂಕ್ಷ್ಮ ವಲಯ ಹಾಗೂ ಬಫರ್‌ಝೋನ್‌ ಯೋಜನೆಗಳನ್ನು ರದ್ದುಗೊಳಿಸದಿದ್ದಲ್ಲಿ ಮುಂಬರುವ ಗ್ರಾಪಂ ಚುನಾವಣೆಯನ್ನು ಸಂಪೂರ್ಣ ಬಹಿಷ್ಕರಿಸುವುದಾಗಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ತೀರ್ಮಾ ನಿಸಿದ್ದೇವೆ ಎಂದು ಮುಖಂಡರು ತಿಳಿಸಿದರು.

Advertisement

ಸಮೀಪದ ಖಾಂಡ್ಯ ಹೋಬಳಿ ದೇವದಾನ ಗ್ರಾಪಂ ವ್ಯಾಪ್ತಿಯ ಸಂಗಮೇಶ್ವಪೇಟೆಯಲ್ಲಿ ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆ ವತಿಯಿಂದ ಸಂಗಮೇಶ್ವರಪೇಟೆ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಚುನಾವಣಾಬಹಿಷ್ಕಾರ ಕುರಿತ ಪೂರ್ವಬಾವಿ ಸಭೆಯಲ್ಲಿ ಕಾಂಗ್ರೆಸ್‌ಹೋಬಳಿ ಅಧ್ಯಕ್ಷ ಬಿ.ಎನ್‌. ಸೋಮೇಶ್‌ ಮಾತನಾಡಿ, ಮಲೆನಾಡಿನ ಜನತೆಗೆ ಮರಣ ಶಾಸನವಾದ ಈಯೋಜನೆಗಳನ್ನು ಸರಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿ ಸರಕಾರಕ್ಕೆ ಮನವಿ ಸಲ್ಲಿಸಿದರು.

ಖಾಂಡ್ಯ ಹೋಬಳಿ ಬಿಜೆಪಿ ಅಧ್ಯಕ್ಷ ಎಚ್‌.ಎಸ್‌. ರವಿ ಮಾತನಾಡಿ, ಕೋವಿಡ್‌ ಲಾಕ್‌ ಡೌನ್‌ ವೇಳೆಎನ್‌ಜಿಒಗಳು ಸುಪ್ರೀಂ ಕೋರ್ಟಿಗೆ ಆಕ್ಷೇಪ ಸಲ್ಲಿಸಿದ ಪರಿಣಾಮ ಈ ಸಮಸ್ಯೆ ಉಂಟಾಗಿದೆ. ಈ ಹಿಂದೆ ಗೋವಾ ಫೌಂಡೇಷನ್‌ ಯೋಜನೆಗಳ ಬಗ್ಗೆ ವರದಿಸಲ್ಲಿಸಿದ್ದು ಮಲೆನಾಡಿಗರು ಈ ವರದಿಯಿಂದ ಆತಂಕದ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಬದುಕಲು ಅವಕಾಶವಿಲ್ಲದಮೇಲೆ ಚುನಾವಣೆಯಾದರೂ ಯಾರಿಗೆ ಬೇಕಾಗಿದೆ ಎಂದು ಪ್ರಶ್ನಿಸಿದರು.

ಖಾಂಡ್ಯ ಹೋಬಳಿ ಜೆಡಿಎಸ್‌ ಅಧ್ಯಕ್ಷ ಜಯರಾಮ್‌ ಮಾತನಾಡಿ, ಅಧಿಕಾರಿಗಳು ವರದಿ ಸಲ್ಲಿಸುವಾಗ ಜನಪ್ರತಿನಿಧಿ ಗಳ ಗಮನಕ್ಕೆ ತಾರದೆ ಗ್ರಾಪಂಗಳಲ್ಲಿ ಒಪ್ಪಿಗೆ ಪತ್ರ ಗೌಪ್ಯವಾಗಿ ಕೊಡಿಸಿದ್ದಾರೆ. ಈ ಹಿನ್ನೆಲೆಯಲ್ಲಿಈ ಹಿಂದೆ 1.6ಕಿ.ಮೀ ರಿಂದ 12 ಕಿ.ಮೀ ವ್ಯಾಪ್ತಿಗೆ ಬಫರ್‌ ಝೋನ್‌ ಹಾಗೂ ಪರಿಸರ ಸೂಕ್ಷ್ಮವಲಯವೆಂದು ಸೇರ್ಪಡೆ ಮಾಡಿದ್ದಾರೆ. ಸರಕಾರವು ಈ ಯೋಜನೆಯನ್ನು ಹಿಂಪಡೆಯುವವರೆಗೂ ಹೋರಾಟ ನಡೆಸುವುದಾಗಿ ತಿಳಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಕಾಂತರಾಜ್‌ಮಾತನಾಡಿ, ಗ್ರಾಮಸ್ಥರ ಮನವಿಯನ್ನು ತುರ್ತಾಗಿ ಸರಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು. ತಾಪಂ ಇಒ ರೇವಣ್ಣ, ಉಪ ತಹಶೀಲ್ದಾರ್‌ ಸುಜಾತ, ರಾಜಸ್ವ ನಿರೀಕ್ಷಕ ಸಂತೋಷ್‌ ಮತ್ತಿತರರು ಪೂರ್ವಭಾವಿ ಸಭೆಯಲ್ಲಿ ಇದ್ದರು. ಬಾಳೆಹೊನ್ನೂರು ಹೋಬಳಿಯಲ್ಲಿ ಗ್ರಾಪಂ ಚುನಾವಣೆ ಕುರಿತು ಸರ್ವ ಪಕ್ಷಗಳ ಪೂರ್ವಭಾವಿ ಸಭೆಯು ಶ್ರೀ ವಿದ್ಯಾಗಣಪತಿ ಸಮುದಾಯ ಭವನದಲ್ಲಿಡಿ.4ರ ಸಂಜೆ 4ಗಂಟೆಗೆ ನಡೆಯಲಿದೆ ಎಂದು ಕಾಂಗ್ರೆಸ್‌ ಹೋಬಳಿ ಅಧ್ಯಕ್ಷ ಮಹಮ್ಮದ್‌ ಹನೀಫ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next