ಅರಸೀಕೆರೆ: ಕೋವಿಡ್ 19 ಸೋಂಕಿತರು ಹಾಗೂ ಶಂಕಿತರ ಕ್ವಾರಂಟೈನ್‌ಗೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ರುವ ವಸತಿ ಗೃಹಗಳನ್ನು ತಾಲೂಕು ಹಾಗೂ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಬಳಕೆ ಮಾಡಬಾರದು ಎಂದು ಒತ್ತಾಯಿಸಿ ತಾಲೂಕು ವಸತಿ ಗೃಹ ಮಾಲೀಕರ ಒಕ್ಕೂಟದಿಂದ ಉಪ ತಹಶೀಲ್ದಾರ್ ಪಾಲಾಕ್ಷ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಸಲ್ಲಿಸಿದ ನಂತರ ಮಾತನಾಡಿದ ತಾಲೂಕು ವಸತಿ ಗೃಹಗಳ ಮಾಲೀಕರ ಒಕ್ಕೂಟದ ಮುಖಂಡ ಜಿ.ಟಿ.ಗಣೇಶ್, ಅರಸೀಕೆರೆ ನಗರ ಸೇರಿದಂತೆ ತಾಲೂಕಿನ ವ್ಯಾಪ್ತಿಯಲ್ಲಿರುವ ವಸತಿ ಗೃಹಗಳನ್ನು ಕೋವಿಡ್ 19 ಶಂಕಿತರ ಕ್ವಾರಂಟೈನ್‌ಗೆ ಬಳಕೆ ಮಾಡುವುದರಿಂದ ಹಲವು ಸಂಕಷ್ಟ ಎದುರಾಗಲಿದೆ.
ಮುಂದಿನ ದಿನಗಳಲ್ಲಿ ನಡೆಯುವ ಶುಭ ಸಮಾರಂಭಗಳು ಹಾಗೂ ಬೇರೆ ಊರುಗಳಿಂದ ಬರುವ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ನಮ್ಮ ಲಾಡ್ಜ್ಗಳಿಗೆ ಬರುವರ ಸಂಖ್ಯೆ ಕಡಿಮೆಯಾಗುವುದರೊಂದಿಗೆ ಆದಾಯವಿಲ್ಲದೆ ನಷ್ಟ ಉಂಟಾಗಲಿದೆ ಎಂದರು. ಈಗಾಗಲೇ ತಾಲೂಕು ಆಡಳಿತ ಗುರುತಿಸಿರುವ ವಸತಿಗೃಹಗಳು ಜನವಸತಿ ಪ್ರದೇಶದಲ್ಲಿದ್ದು, ಜನರಲ್ಲಿ ಹೆಚ್ಚಿನ ಆತಂಕ ಉಂಟಾಗಲಿದೆ.
ಇಂತಹ ಪರಿಸ್ಥಿತಿ ಮನಗಂಡು ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರೇ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ತಮ್ಮ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಆದ್ದರಿಂದ ವಸತಿಗೃಹಗಳನ್ನು ಕ್ವಾರಂಟೈನ್‌ಗೆ ಬಳಸಿಕೊಳ್ಳುವ ತಮ್ಮ ನಿರ್ಧಾರವನ್ನು ಮರು ಪರಿಶೀಲಿ ಸುವ ಮೂಲಕ ಉದ್ಯಮಕ್ಕೆ ಅನುಕೂಲವಾಗುವಂತೆ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.
ವಸತಿಗೃಹಗಳ ಮಾಲೀಕರಾದ ಜಿ.ವಿ.ಬಸವರಾಜ್, ಜಯರಾಮ್, ರಾಜ್‌ಗೊಪಾಲ್, ರಾಘವೇಂದ್ರ, ಕೆ.ಆರ್. ಮುರಳೀಧರ್, ರಮೇಶ್ ನಾಯ್ಡು, ಸೋಮು, ಕೆ. ಪ್ರಕಾಶ್, ಕಾಂತರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಗರಸಭೆ ಆಯುಕ್ತರು ಹಾಗೂ ಡಿವೈಎಸ್‌ಪಿ ಕಚೇರಿಗೂ ತೆರಳಿ ಮನವಿ ಪತ್ರವನ್ನು ಸಲ್ಲಿಸಿದರು.