Advertisement

ತೈಲ ಬೆಲೆ ಏರಿಕೆಗೆ ವಿರೋಧ

08:00 AM Jun 20, 2020 | Suhan S |

ವಿಜಯಪುರ: ತೈಲ ಬೆಲೆ ಏರಿಕೆ ವಿರೋಧಿಸಿ ನಗರದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದವು.

Advertisement

ಮನವಿ ಸಲ್ಲಿಸಿ ಮಾತನಾಡಿದ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಅಧ್ಯಕ್ಷ ಹಾಸಿಂಪೀರ್‌ ವಾಲೀಕಾರ, ತೈಲ ಬೆಲೆ ಹೆಚ್ಚಳದಿಂದ ದೇಶದ ಎಲ್ಲ ವರ್ಗದ ಜನರಿಗೆ ಇದರಿಂದ ಆರ್ಥಿಕ ಹೊರೆ ಬೀಳುತ್ತಿದೆ. ಅಗತ್ಯ ವಸ್ತುಗಳಲ್ಲಿ ತೈಲ್‌ ಒಂದಾಗಿದ್ದು ಭಾರತೀಯ ನಾಗರಿಕರಿಗೆ ಹೆಚ್ಚುವರಿ ಹೊರೆ ಹಾಕದೇ ಡಿಸೇಲ್‌ 35 ರೂ. ಮತ್ತು ಪೆಟ್ರೋಲ್‌ 40 ರೂ. ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಕ್ಷತ್ರೀಯ ಮಹಾಸಭಾದ ಉಪಾಧ್ಯಕ್ಷ ವಿಜಯಕುಮಾರ ಘಾಟಗೆ, ಜೆಡಿಎಸ್‌ ಕಾರ್ಯಾಧ್ಯಕ್ಷ ದಿಲಾವರ ಖಾಜಿ ಮಾತನಾಡಿ. ನೆರೆಯ ಬಡರಾಷ್ಟ್ರಗಳಾದ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳ ದೇಶದಲ್ಲಿ ಡಿಸೇಲ್‌ ಬೆಲೆ 37 ರೂ. ಹಾಗೂ ಪೆಟ್ರೋಲ್‌ 41 ರೂ. ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿದಿದ್ದು ಬೆಲೆ ಕಡಿತಗೊಳಿಸಬೇಕು ಎಂದು ಒತ್ತಾಯಿಸಿದರು.

ಭಾರತ ಮುಕ್ತಿಮೋರ್ಚಾ ಅಧ್ಯಕ್ಷ ಬಂದೆನವಾಜ್‌ ಮಹಾಬರಿ, ಜಿಲ್ಲಾ ಜಂಗಮ ಅಭಿವೃದ್ಧಿ ಸಮಿತಿಯ ಚಂದ್ರಕಾಂತ ಹಿರೇಮಠ, ಸಿಟಿಜನ್‌ ಪೋರಂ ಅಧ್ಯಕ್ಷ ಮುನ್ನಾ ಭಕ್ಷಿ, ಕೆಎಸ್‌ ಆರ್‌ಟಿಸಿ ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಫೀಕ್‌ ಅಹ್ಮದ ಪಣಿಬಂದ ಮಾತನಾಡಿದರು. ಮಹಮ್ಮದ್‌ ಹನೀಫ್‌ ಇನಾಮದಾರ, ಅಲ್ತಾಫ್‌ ಪಟೇಲ್‌, ಸಂತೋಷ ಗುಡದಿನ್ನಿ, ಶಮನ ಇನಾಮದಾರ, ಸುನೀಲ ಹಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next