ದಾವಣಗೆರೆ: ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನವನ್ನು ಕಡಿತಗೊಳಿಸಿರುವದನ್ನು ವಿರೋಧಿಸಿ ಮುಸ್ಲಿಂ ಚಿಂತಕರ ಚಾವಡಿ ಪದಾಧಿಕಾರಿಗಳು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ಹಿಂದುಳಿದಿರುವ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರಕಲ್ಯಾಣ ಇಲಾಖೆಯ ಮೂಲಕ ಸರ್ಕಾರ ಸಮುದಾಯಗಳ ಅಭಿವೃದ್ಧಿಗಾಗಿಜಾರಿಯಲ್ಲಿಟ್ಟಿರುವ ನೀತಿಗಳನ್ನು ಮುಸ್ಲಿಂಚಿಂತಕರ ಚಾವಡಿ ಸ್ವಾಗತಿಸುತ್ತದೆ. ಅಲ್ಪಸಂಖ್ಯಾತಸಮುದಾಯಗಳ ಆಭಿವೃದ್ಧಿ ಸಮಾನವಾಗಿ ಸಾಧ್ಯವಾಗುವವರೆಗೂ ಯಾವ ಯೋಜನೆಗಳೂ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳಬಾರದು ಎಂದು ಒತ್ತಾಯಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬುದ್ಧ, ಪಾರ್ಸಿಮತ್ತು ಜೈನ ಸಮುದಾಯಗಳ ಜನಪರಕಲ್ಯಾಣ ಯೋಜನೆಗಳಿಗೆ ನಿಗದಿಗೊಳಿಸಲಾದಅನುದಾನ ಕಡಿತಗೊಳಿಸಿರುವುದು ಖಂಡನೀಯ.ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಈ ಹಿಂದೆನಿಗದಿಗೊಳಿಸುತ್ತ ಬಂದಿರುವ ಅನುದಾನಕಡಿತಗೊಳಿಸಿದ್ದಲ್ಲದೆ ಹಲವು ಯೋಜನೆಗಳನ್ನುರದ್ದು ಮಾಡಲಾಗಿದೆ. 2020-21ನೇ ಸಾಲಿನ ಬಜೆಟ್‌ನಲ್ಲಿ 1177 ಕೋಟಿ ರೂ.ಗಳಷ್ಟಿದ್ದ ಅನುದಾನವನ್ನು ಕಡಿತಗೊಳಿಸಿ 1055 ಕೋಟಿ ರೂ.ಗಳಿಗೆ ನಿಗದಿಗೊಳಿಸಲಾಗಿದೆ. ಇತ್ತೀಚಿಗೆ ಮತ್ತೆ 50 ಕೋಟಿ ರೂ.ಅನುದಾನ ಕಡಿತಗೊಳಿಸಿದೆ ಎಂದು ಆಕ್ಷೇಪಿಸಿದರು.
ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಈಗಾಗಲೇ ಜಾರಿಯಲ್ಲಿರುವ ಎಲ್ಲ ಯೋಜನೆಗಳನ್ನುಮುಂದುವರೆಸಬೇಕು. ಅನುದಾನವನ್ನುಸಂಪೂರ್ಣವಾಗಿ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಚಿಂತಕರ ಚಾವಡಿ ರಾಜ್ಯ ಕಾರ್ಯದರ್ಶಿ
ಅನೀಸ್ ಪಾಷಾ, ಕೆ.ಬಿ. ಜಾಕೋಬ್, ಘನಿ ತಾಹಿರ್, ಕೆ. ಹನೀಫ್, ಸಲೀಂ ಬಾಯ್, ತಾರಿಕ್ ನಕಾಶ್, ಜಬೀವುಲ್ಲಾ ಖಾನ್, ಬಿ. ಖಲೀಲ್, ಮುಸ್ತಾಫಾ ಇತರರು ಇದ್ದರು.