Advertisement

ಭೂಕಾಯ್ದೆ ತಿದ್ದುಪಡಿಗೆ ವಿರೋಧ

10:30 AM Jul 24, 2020 | Suhan S |

ವಿಜಯಪುರ: ರಾಷ್ಟ್ರೀಯ ಸಂಘಟನೆ ಕೃಷಿಕ್‌ ಖೆತ್‌ ಮಜ್ದೂರ್‌ ಸಂಘಟನೆ ಕರೆ ಮೇರೆಗೆ ಗುರುವಾರ ರೈತ, ಕೃಷಿ, ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಅಖೀಲ ಭಾರತ ಪ್ರತಿಭಟನಾ ದಿನದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಸಂಘಟನೆ ರಾಜ್ಯ ಉಪಾದ್ಯಕ್ಷ ಬಿ.ಭಗವಾನರೆಡ್ಡಿ ಮಾತನಾಡಿ, ದೇಶಾದ್ಯಂತ ಕೋವಿಡ್ ಸಾಂಕ್ರಾಮಿಕ ರೋಗ ಹರಡಿರುವ ದುಸ್ಥಿತಿ ಸಂದರ್ಭದಲ್ಲಿ ರೈತರು ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಇಂಥ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಲಾಕ್‌ಡೌನ್‌ ದುರ್ಲಾಭ ಪಡೆಯಲು ಮುಂದಾಗಿದೆ. ಅಸ್ತಿತ್ವದಲ್ಲಿರುವ ಅಗತ್ಯ ಸರಕುಗಳ ಕಾಯ್ದೆ, 1955ಕ್ಕೆ ಕೆಲವೊಂದು ತಿದ್ದುಪಡಿಗಳನ್ನು ತಂದಿದೆ. ಜೊತೆಗೆ ರೈತರ ಉತ್ಪನ್ನದ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆ ಕಾಯ್ದೆ 2020, ಬೆಲೆಗಳು ಮತ್ತು ಕೃಷಿ ಸೇವೆಗಳ ಕುರಿತು ರೈತರ ಒಪ್ಪಂದ (ಸಬಲೀಕರಣ ಮತ್ತು ಸಂರಕ್ಷಣೆ) ಆರ್ಡಿನೆನ್ಸ್‌, 2020ನ್ನು ಜಾರಿಗೊಳಿಸಿ ಕೃಷಿ ಹಾಗೂ ಜನ ವಿರೋಧಿ ಕ್ರಮಕ್ಕೆ ಮುಂದಾಗಿದೆ ಎಂದು ದೂರಿದರು.

ಆರ್ಥಿಕ ಅಭಿವೃದ್ಧಿ ಹೆಸರಿನಲ್ಲಿ ಕೇಂದ್ರ

ಸರ್ಕಾರ ಅಗತ್ಯ ಸರಕುಗಳ ಕಾಯ್ದೆ-1955 ಅಕ್ಕಿ, ಗೋಧಿ , ಧಾನ್ಯಗಳು (ಸೀರಿಯಲ್ಸ್‌), ಆಲೂಗಡ್ಡೆ, ಈರುಳ್ಳಿ ಮತ್ತು ಬೇಳೆ ಕಾಳುಗಳಂಥ ಅಗತ್ಯ ಸರಕುಗಳ ಪಟ್ಟಿಯಿಂದ ತೆಗೆದು ಹಾಕಿ ತಿದ್ದುಪಡಿ ಮಾಡಿದೆ. ಇದು ಕಾಳ ಸಂತೆಕೋರರಿಗೆ, ದೊಡ್ಡ ವ್ಯಾಪಾರಿ ಸಂಸ್ಥೆಗಳಿಗೆ. ಈ ವಸ್ತುಗಳನ್ನು ದಾಸ್ತನು ಮಾಡಿ ಗರಿಷ್ಠ ಲಾಭ ಗಳಿಸಲು ದಾರಿ ಮಾಡಿಕೊಡುತ್ತದೆ. ಇದು ಅಗತ್ಯ ಸರಕುಗಳ ಕಾಳಸಂತೆ ಹಾಗೂ ಬೆಲೆಗಳು ಹೆಚ್ಚಳಕ್ಕೆ ಕಾರಣವಾಗಲಿದೆ. ಸರ್ಕಾರ ಕೂಡಲೇ ಇದರಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ಆರ್‌ಕೆಎಸ್‌ ಸಂಘಟಕ ಮಹಾದೇವ ಲಿಗಾಡೆ, ಆಕಾಶ ಪಾಟೀಲ, ತಿಪರಾಯ ಹತ್ತರಕಿ, ಪ್ರಕಾಶ ಕಿಲಾರೆ, ವಿಶ್ವನಾಥ ನರಳೆ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next