Advertisement

ಕಸ ಸಂಗ್ರಹ ಮಾಸಿಕ ಶುಲ್ಕಕ್ಕೆ ವಿರೋಧ

06:06 AM Jun 12, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಪ್ರತಿ ಮನೆಯಿಂದ ಕಸ ಸಂಗ್ರಹಕ್ಕೆ ಮಾಸಿಕ 200 ರೂ. ವಿಧಿಸುವ ಪ್ರಸ್ತಾವನೆಗೆ  ಸಾರ್ವಜನಿಕ ವಲಯದಿಂದ ವಿರೋಧ ವ್ಯಕ್ತವಾಗಿದೆ. ಸರ್ಕಾರ ಇತ್ತೀಚೆಗೆ ಅನುಮೋದನೆ ನೀಡಿದ್ದ “ಬಿಬಿಎಂಪಿಯ ಕಸ  ನಿರ್ವಹಣೆ ಉಪ ನಿಯಮ-2020’ರ ಅನ್ವಯ ನಗರದ ಪ್ರತಿ ಮನೆಯಿಂದ ತಿಂಗಳಿಗೆ 200 ರೂ. ಶುಲ್ಕ ಸಂಗ್ರಹ ಮಾಡುವುದಕ್ಕೆ ಪಾಲಿಕೆ ಮುಂದಾ ಗಿದ್ದು, ಜುಲೈನಿಂದ ಇದು ಜಾರಿಗೆ ಬರುವ ಸಾಧ್ಯತೆ ಇದೆ.

Advertisement

ಇದಕ್ಕೆ ತೀವ್ರ ವಿರೋಧ  ವ್ಯಕ್ತವಾಗಿದೆ. ಪಾಲಿಕೆ ಸದಸ್ಯೆ ಲತಾ ಕುಮಾರ್‌ ರಾಥೋಡ್‌ ಸೇರಿದಂತೆ ಗಾಂಧಿ  ನಗರದ ಕಾಂಗ್ರೆಸ್‌ ಮುಖಂಡರು, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಗುರುವಾರ ಪಶ್ಚಿಮ ವಲಯದ ಜಂಟಿ ಆಯುಕ್ತರ ಕಚೇರಿಯ ಮುಂಭಾಗ  ಪ್ರತಿಭಟನೆ ನಡೆಸಿದ್ದು, ತ್ಯಾಜ್ಯಸಂಗ್ರಹಣೆಗೆ ಮಾಸಿಕ ಶುಲ್ಕ ವಿಧಿಸದಂತೆ ಜಂಟಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್‌, ಬಿಬಿಎಂಪಿಯು ಈಗಾಗಲೇ ಕಸ  ನಿರ್ವಹಣೆಗೆ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ. ಇದನ್ನು ಸರಿದೂಗಿಸುವ ಉದ್ದೇಶ ದಿಂದ ಕಸ ಸಂಗ್ರಹಕ್ಕೆ ಶುಲ್ಕ ವಿಧಿಸುವು ದು ಅನಿವಾರ್ಯ.

ಇನ್ನು ಕೇಂದ್ರ ಸರ್ಕಾರದ ಘನತ್ಯಾಜ್ಯ ನಿರ್ವಹಣೆ 2016ರ ನಿಯಮದ ಪ್ರಕಾರ ಬಿಬಿಎಂಪಿಯ ಕಸ ನಿರ್ವಹಣೆ ಉಪ ನಿಯಮ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ. ಕಸ ಶುಲ್ಕ ನೀಡದಿದ್ದರೆ ಸಂಬಂಧ  ಪಟ್ಟವರಿಂದ ಕಸ ಸಂಗ್ರಹ ಮಾಡುವುದಿಲ್ಲ. ಜಲಮಂಡಳಿಯ ನೀರಿನ ಶುಲ್ಕ ಸಂಗ್ರಹಿಸುವ ಮಾದರಿಯಲ್ಲಿ ಕಸದ ಮಾಸಿಕ ಶುಲ್ಕ ಸಂಗ್ರಹಿಸುವ  ಚಿಂತನೆ ಇದೆ. ಈ ಸಂಬಂಧ ಮೇಯರ್‌, ಆಯುಕ್ತರೊಂದಿಗೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಕಸ ಸಂಗ್ರಹಕ್ಕೆ ವಿಧಿಸಲಾಗುವ ಶುಲ್ಕ: ನಗರದಲ್ಲಿ ಕಸ ನೀಡುವ ಎಲ್ಲ ಮನೆಗಳಿಂದ ಮಾಸಿಕ 200 ರೂ. (ತ್ಯಾಜ್ಯಉತ್ಪಾದಕರಿಂದ) ಹಾಗೂ ವಾಣಿಜ್ಯ ಉತ್ಪಾದಕರಿಂದ ಕಸದ ಪ್ರಮಾಣ ಆಧರಿಸಿ ಶುಲ್ಕ ಸಂಗ್ರಹಿಸಲು ನಿರ್ಧರಿಸಲಾಗಿದೆ.  ಅದರಂತೆ, (ದಿನಕ್ಕೆ) 5 ಕೆ.ಜಿ. ಗಿಂತ ಕಡಿಮೆ ಕಸ ಉತ್ಪಾದಕರಿಗೆ 500 ರೂ., 5 ರಿಂದ 10 ಕೆ.ಜಿ. ಕಸ ಉತ್ಪಾದಕರಿಗೆ 1,400 ರೂ., 11 ರಿಂದ 25 ಕೆ.ಜಿ. ಕಸ ಉತ್ಪಾದಕರಿಗೆ 3,500 ರೂ., 26 ರಿಂದ 50 ಕೆ.ಜಿ. ಕಸ ಉತ್ಪಾದಕರಿಗೆ 7,000 ರೂ. ಹಾಗೂ  100 ಅಥವಾ ಹೆಚ್ಚಿನ ಕಸ ಉತ್ಪಾದಕರಿಗೆ 14,000 ರೂ. ಶುಲ್ಕ ಸಂಗ್ರಹಿಸಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next