ಕನಕಪುರ: ಗ್ರಾಮದಿಂದ ಕೂಗಳತೆ ದೂರದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲು ಹೊರಟಿ ರುವ ಗ್ರಾಪಂ ಅಧಿಕಾರಿಗಳ ವಿರುದಟಛಿ ಕಾಳೇಗೌಡನ ದೊಡ್ಡಿ ಮತ್ತು ವಡೇರಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಹಾರೋಹಳ್ಳಿ ಹೋಬಳಿ ಕಾಳೇಗೌಡನ ದೊಡ್ಡಿ ಗ್ರಾಮದಿಂದ ಕೂಗಳತೆ ದೂರದಲ್ಲಿ ವೃಷಭಾವತಿ ನದಿ ತಟದ ಸರ್ವೇ ನಂ.286ರ ಒಂದು ಎಕರೆ ಜಾಗದಲ್ಲಿ ಗ್ರಾಪಂ ಅಧಿಕಾರಿಗಳು ನಿರ್ಮಾಣ ಮಾಡಲು ಹೋರಟಿರುವ ಕಸ ವಿಲೇವಾರಿ ಘಟಕಕ್ಕೆ ಸ್ಥಳೀಯ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ವೃಷಭಾವತಿ ನದಿ ನೀರು ಈ ಗಾಗಲೇ ಕಲ್ಮಶ ವಾಗಿದ್ದು, ಕೂಳಚೆ ನೀರಿನಿಂದ ಉತ್ಪತ್ತಿಯಾಗುವ ಸೊಳ್ಳೆ ಗಳ ಕಾಟದಿಂದ ಗ್ರಾಮದಲ್ಲಿ ಆನೇಕ ಕಾಯಿಲೆಗಳು ಕಾಣಿಸಿಕೊಂಡು ಗ್ರಾಮದಲ್ಲಿ ನೆಮ್ಮದಿಯಾಗಿ ಬದುಕುವುದೇ ಕಷ್ಟಸಾಧ್ಯವಾಗಿದೆ ಎಂದು ತಮ್ಮ ನೋವು ತೋಡಿಕೊಂಡರು. ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಿದರೆ, ಸೊಳ್ಳೆಗಳ ಜತೆಗೆ ನೋಣಗಳ ಕಾಟ ಹೆಚ್ಚಾಗಲಿದೆ.
ಕಸ ವಿಲೇವಾರಿ ಘಟಕಕ್ಕೆ ಸ್ಥಳ ಪರೀಶೀಲನೆ ಮಾಡುವ ಮುನ್ನ ಅಧಿಕಾರಿಗಳು ಸ್ಥಳೀಯ ಸದಸ್ಯರ ಗಮನಕ್ಕೆ ತರದೆ ಸ್ಥಳೀಯ ಗ್ರಾಮಸ್ಥರ ಅಭಿಪ್ರಾಯ ಕೇಳದೆ ಅಧಿಕಾರಿಗಳು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಸಮಧಾನ ಹೊರಹಾಕಿದರು. ಕಸ ವಿಲೇವಾರಿ ಘಟಕ ನಿರ್ಮಾಣ ಕಾರ್ಯ ಸ್ವಾಗತರ್ಹ ಆದರೆ ಗ್ರಾಮದಿಂದ ದೂರವಿಬೇಕು. ಅದರಿಂದ ಜನರಿಗೆ ತೊಂದರೆಯಾಗಬಾರದು.
ಆ ನೀಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಗ್ರಾಪಂ ಸದಸ್ಯೆ ಸುಮಿತ್ರಾ ಜಯ ರಾಮೇಗೌಡ, ಅಬ್ದುಲ್ ರೆಹಮಾನ್, ಗ್ರಾಮಸ್ಥರಾದ ಮಣಿಗೌಡ, ಮಧು, ಜಯಕೃಷ್ಣ, ಶಿವರುದ್ರಯ್ಯ, ಕೃಷ್ಣಪ್ಪ ಸೇರಿದಂತೆ ಹಲವರು ಹಾಜರಿದ್ದರು.