ಸಿಂದಗಿ: ಮಿಸಲಾತಿ ಕುರಿತು ಮತ್ತು ದೌರ್ಜನ್ಯ ಕಾಯ್ದೆ ತಿದ್ದುಪಡಿ ಮಾಡಿರುವುದನ್ನು ಖಂಡಿಸಿ ದಲಿತ ಸೇನೆ ತಾಲೂಕು ಘಟಕದ ಕಾರ್ಯಕರ್ತರು ಸೋಮವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಾಣ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ನಂತರ ಪ್ರತಿಭಟನಾಕಾರರು ಕಾಯ್ದೆ ತಿದ್ದುಪಡಿಯನ್ನು ಪುನಃ ಪರಿಶೀಲನೆ ಮಾಡಬೇಕು ಎಂದು ಉಪ ತಹಶೀಲ್ದಾರ್ ಸುರೇಶ ಮ್ಯಾಗೇರಿ ಅವರ ಮೂಲಕ ಪ್ರಧಾನಿ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ದಲಿತ ಸೇನೆ ರಾಜ್ಯ ಉಪಾಧ್ಯಕ್ಷ ರಾಜಶೇಖರ ಚೌರ ಮಾತನಾಡಿ, ಮಿಸಲಾತಿ ಕುರಿತು ಮತ್ತು ದೌರ್ಜನ್ಯ ಕಾಯ್ದೆ ತಿದ್ದುಪಡಿ ಮಾಡಿರುವುದು ಖಂಡನೀಯ.
ದೌರ್ಜನ್ಯ ಕಾಯ್ದೆಯಿದ್ದಾಗಲೇ ದಲಿತರ ಮೇಲೆ ಸಾಕಷ್ಟು ದೌರ್ಜನ್ಯಗಳು ನಡೆಯುತ್ತಿವೆ. ಇನ್ನು ದೌರ್ಜನ್ಯ ಕಾಯ್ದೆ ತಿದ್ದುಪಡಿ ಮಾಡಿದರೆ ದಲಿತರ ಮೇಲೆ ಇನ್ನಷ್ಟು ಅನ್ಯಾವಾಗುತ್ತದೆ. ಆದ್ದರಿಂದ ಕಾಯ್ದೆ ತಿದ್ದುಪಡಿಯನ್ನು ಪುನಃ ಪರಿಶೀಲನೆ ಮಾಡಬೇಕು. ಇಲ್ಲದ ಪಕ್ಷದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕಾಧ್ಯಕ್ಷ ಪರುಶುರಾಮ ಗುಂದಗಿ ಮಾತನಾಡಿ, ಕಾಯ್ದೆ ತಿದ್ದುಪಡಿ ಮರು ಪರೀಶಿಲನೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿದರು. ದಲಿತ ಸೇನೆಯ ರೇಣುಕಾ ಹೊಸಮನಿ, ಅಂಬಿಕಾ ನಾಟೀಕಾರ, ನಾಗಮ್ಮ ಎಮ್ಮಿ, ಸಾಯಬಣ್ಣ ದೊಡಮನಿ, ಜೈಭೀಮ ಹೊಸಮನಿ, ಅನ್ವರ್ ಮದಬಾವಿ, ಸಂತೋಷ ಪೂಜಾರಿ, ಸಿದ್ದು, ಮೇಲಿನಮನಿ, ಕಂಠೀರವ ಹೊಸಮನಿ, ಪವನ ಹೊಸಮನಿ, ಮಾಂತು ಸೊಂಪುರ, ಮಧು ಬಬಲೇಶ್ವರ, ರವಿ ಬೂದಿಹಾಳ, ಸಿದ್ದು ಬೂದಿಹಾಳ,
ಹರೀಶ ಬಿಸನಾಳ, ಸೈಫನ್ ಬಾಗವಾನ, ಉಮೇಶ ಕುರಿ, ಭೀಮು ಬೊಮ್ಮನಹಳ್ಳಿ, ರವಿ ದೊಡಮನಿ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.