Advertisement

ಬಸ್‌ ನಿಲ್ದಾಣ ಕಟ್ಟಡ ತೆರವಿಗೆ ವಿರೋಧ

01:35 PM Jun 11, 2020 | Suhan S |

ಬೈಲಹೊಂಗಲ: ಪಟ್ಟಣದ ಸುಸಜ್ಜಿತವಾದ ಬಸ್‌ ನಿಲ್ದಾಣ ಕಟ್ಟಡವನ್ನು ಸಾರಿಗೆ ಸಂಸ್ಥೆ ಕೆಡವಿ ಹೊಸದಾಗಿ ನಿರ್ಮಿಸಲು ಮುಂದಾಗಿರುವುದನ್ನು ಖಂಡಿಸಿ ಅಂಬೇಡ್ಕರ್‌ ಯುವ ಸೇನೆಯಿಂದ ಉಪ ವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಲಾಯಿತು.

Advertisement

ಅಂಬೇಡ್ಕರ್‌ ಯುವ ಸೇನೆ ರಾಜ್ಯ ಉಪಾಧ್ಯಕ್ಷ ಪರಶುರಾಮ ರಾಯಭಾಗ ಮಾತನಾಡಿ, ಪಟ್ಟಣದಲ್ಲಿ ಹಲವು ದಶಕಗಳ ಹಿಂದೆ ವಿಶಾಲವಾಗಿ ನಿರ್ಮಿಸಿದ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣವು ಸುಸಜ್ಜಿತವಾದ ಕಟ್ಟಡವಾಗಿದೆ. ನಾಲ್ಕು ವರ್ಷಗಳ ಹಿಂದೆ ಸರಕಾರವು ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡದ ದುರಸ್ತಿ ಕಾರ್ಯ ಕೈಗೊಂಡಿತ್ತು. ಈ

ಕಟ್ಟಡದಲ್ಲಿ ಹದಿನೈದಕ್ಕೂ ಹೆಚ್ಚು ವ್ಯಾಪಾರ ಮಳಿಗೆಗಳಿವೆ. ನೂರಾರು ಜನರಿಗೆ ಕುಳಿತುಕೊಳ್ಳಲು ಸ್ಥಳಾವಕಾಶವಿದ್ದು, ಇಲ್ಲಿಯ ವ್ಯಾಪಾರ ಮಳಿಗೆಗಳಿಂದಸಾರಿಗೆ ಸಂಸ್ಥೆಗೆ ಪ್ರತಿ ತಿಂಗಳು ಲಕ್ಷಾಂತರ ರೂ. ಆದಾಯ ಬರುತ್ತದೆ. ವಿಶಾಲವಾದ ಖುಲ್ಲಾ ಜಾಗದಲ್ಲಿ ನೂರಾರು ಬಸ್‌ ಗಳಿಗೆ ನಿಲ್ಲಿಸಲು ಸ್ಥಳವಾಕಾಶವಿದ್ದು, ಇಂತಹ ಕಟ್ಟಡವನ್ನು ಕೆಡವುತ್ತಿರುವುದನ್ನು ಖಂಡನೀಯ ಎಂದರು.

ಒಂದು ವೇಳೆ ಕಟ್ಟಡ ನಿರ್ಮಾಣ ಮಾಡುವುದಾದರೆ ಹಿಂದುಗಡೆ ಇರುವ ಖುಲ್ಲಾ ವಿಶಾಲವಾದ ಪ್ರದೇಶದಲ್ಲಿ ಗಟ್ಟಿಮುಟ್ಟಾದ ಕಟ್ಟಡ ನಿರ್ಮಿಸಿ ಇದರಿಂದ ಸರಕಾರದ ಹಣವನ್ನು ಉಳಿತಾಯ ಮಾಡಬೇಕು. ಸರಕಾರದ ಅನುದಾನವೆಂದರೆ ಅದು ಸಾರ್ವಜನಿಕರು ನೀಡಿದ ತೆರಿಗೆ ಹಣವಾಗಿದ್ದು, ಸಾರ್ವಜನಿಕ ಹಣವು ಶಾಶ್ವತ ಹಾಗೂ ಗುಣಮಟ್ಟದ ಕಾಮಗಾರಿಗೆ ಉಪಯೋಗಿಸಬೇಕು ಹೊರತು ಈಗಿದ್ದ ಸುಸಜ್ಜಿತವಾದ ಕಟ್ಟಡ ಕೆಡವಿ ಅದೇ ಕಟ್ಟಡ ಜಾಗೆಯಲ್ಲಿ ಹೊಸ ಕಟ್ಟಡ ನಿರ್ಮಿಸುವುದರಿಂದ ಸಾರ್ವಜನಿಕರ ತೆರಿಗೆ ಹಣ ವಿನಾಕಾರಣ ವೆಚ್ಚ ಮಾಡಿ ಹೆಚ್ಚಿನ ಹೊರೆ ಹಾಕಿದಂತಾಗುತ್ತದೆ. ಆದ್ದರಿಂದ ಸುಸಜ್ಜಿತವಾದ ಬಸ್‌ ನಿಲ್ದಾಣದ ಕಟ್ಟಡವನ್ನು ಕೆಡವುದನ್ನು ಖಂಡಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ವಿನೋದ ಸವದತ್ತಿ, ಗಣೇಶ ಕಾಂಬಳೆ, ಅರ್ಜುನ ಕೇಳಗೇರಿ, ಈರಣ್ಣಾ ರಾಯಭಾಗ ಇತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next