Advertisement
ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಮಾತನಾಡಿ, ಬಿಆರ್‌ಟಿಎಸ್ ಹುಬ್ಬಳ್ಳಿ-ಧಾರವಾಡ ಜನತೆಯ ಮಹತ್ವಾಕಾಂಕ್ಷೆ ಯೋಜನೆ. ಆದರೆ ಇದು ಅವೈಜ್ಞಾನಿಕ, ಅಪಾಯಕಾರಿ ವಿನ್ಯಾಸದ ಕಾಮಗಾರಿಯಾಗಿದೆ. ಸುಮಾರು 1,200ಕೋಟಿ ರೂ. ವೆಚ್ಚದ ಈ ಯೋಜನೆ ಸಾರ್ವಜನಿಕರು ಹಾಗೂ ವಾಹನ ಸವಾರರ ಬಳಕೆಗೆ ದುಃಸ್ವಪ್ನವಾಗಿದೆ. ಹು-ಧಾ ನಡುವಿನ ಬಿಆರ್‌ಟಿಎಸ್ ಕಾರಿಡಾರ್ ಬಳಸುವ ಬಸ್ ಪ್ರಯಾಣಿಕರು, ಪಾದಚಾರಿಗಳು ಮತ್ತು ಮಿಶ್ರ ಸಂಚಾರ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಶಾಪವಾಗಿ ಮಾರ್ಪಟ್ಟಿದೆ. ಅವಳಿ ನಗರದ ನಡುವೆ ತ್ವರಿತ ಸಾರಿಗೆ ಸೇವೆ ಒದಗಿಸುವ ಚಿಗರಿಯಾಗಬೇಕಿದ್ದ ಬಿಆರ್‌ಟಿಎಸ್ ಇದೀಗ ನರಭಕ್ಷಕ ಚಿಗರಿಯಾಗಿ ಜನರು, ಸವಾರರನ್ನು ಕಾಡುತ್ತಿದೆ. ಇದರಿಂದ ಈ ಕಾರಿಡಾರ್‌ನಲ್ಲಿ ಸಂಚರಿಸಲು ಜನರು, ವಾಹನ ಸವಾರರು ಜೀವದ ಹಂಗುತೊರೆದು ಹೋಗುವ ಪರಿಸ್ಥಿತಿನಿರ್ಮಾಣವಾಗಿದೆ. ಅವಳಿ ನಗರದ ಜನರನ್ನು ವಿನಾಕಾರಣ ಅಪಾಯಕ್ಕೆ ಸಿಲುಕಿಸಿ, ಪ್ರತಿದಿನಅಪಘಾತಗಳು ಎದುರಿಸುವಂತೆ ಮಾಡಿದೆ. ಸರ ಕಾರ ಸಮ ಸ್ಯೆ-ಗೊಂದಲ ನಿವಾರಿಸಲಿ ಇಲ್ಲವೆ ಯೋಜನೆ ರದ್ದು ಮಾಡಲಿ ಎಂದು ಒತ್ತಾಯಿಸಿದರು.
Advertisement
ಬಿಆರ್‌ಟಿಎಸ್ ಯೋಜನೆಗೆ ವಿರೋಧ
05:26 PM Dec 23, 2020 | Suhan S |
Advertisement
Udayavani is now on Telegram. Click here to join our channel and stay updated with the latest news.