Advertisement

ಉತ್ತರಿಸಲು ಕಾಲಾವಕಾಶ ಕೇಳಿದ್ದಕ್ಕೆ ಆಕ್ಷೇಪ

12:43 PM Jun 14, 2017 | Team Udayavani |

ವಿಧಾನ ಪರಿಷತ್ತು: ಗೋಹತ್ಯೆ ನಿಷೇಧ ಹಾಗೂ ಕಸಾಯಿಖಾನೆ ಬಗ್ಗೆ ಬಿಜೆಪಿ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಲು ಸಚಿವ ಎ.ಮಂಜು ಎರಡು ವಾರ ಸಮಯ ಕೇಳಿದ್ದು, ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು. ಬಿಜೆಪಿಯ ತಾರಾ ಅನುರಾಧ ಹಾಗೂ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಲು ಕಾಲಾವಕಾಶ ಕೋರಿದರು.

Advertisement

ಇದಕ್ಕೆ ಅಸಮಾಧಾನಗೊಂಡ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ, “ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್‌ ಅವರ ಆಶಯದಲ್ಲಿ ಗೋಹತ್ಯೆ ನಿಷೇಧವನ್ನು ಜಾರಿಗೊಳಿಸಬೇಕಿದೆ. ಇಂತಹ ಗಂಭೀರ ವಿಚಾರ ಕುರಿತ ಪ್ರಶ್ನೆಗೆ ಉತ್ತರ ನೀಡದೆ ನುಣುಚಿಕೊಳ್ಳುವುದು ಸರಿಯಲ್ಲ.

ಇದು ಧರ್ಮಕ್ಕೆ ಮಾತ್ರವಲ್ಲ, ದೇಶಕ್ಕೆ ಮಾಡುತ್ತಿರುವ ಅಪಮಾನ ಎಂದು ಕುಟುಕಿದರು. ಇದಕ್ಕೆ ಕಾಂಗ್ರೆಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಸಚಿವ ಎ.ಮಂಜು, “ಎರಡು ವಾರದಲ್ಲಿ ಉತ್ತರ ಒದಗಿಸಲಾಗುವುದು’ ಎಂದರು. ಆಗ ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌, “ಎರಡು ವಾರದಲ್ಲಿ ಅಧಿವೇಶನ ಮುಗಿದಿರುತ್ತದೆ.

ನಂತರ ವಿಧಾನಸೌಧದ ಆವರಣದಲ್ಲಿರುವ ಕೆಂಗಲ್‌ ಹನುಮಂತಯ್ಯ ಪ್ರತಿಮೆ ಮುಂದೆ ಉತ್ತರ ಕೊಡುತ್ತೀರಾ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೊನೆಗೆ ಸಭಾನಾಯಕ ಡಾ.ಜಿ.ಪರಮೇಶ್ವರ್‌ ಮಾತನಾಡಿ, “ಸರ್ವಾಧಿಕಾರಿಗಳಂತೆ ವರ್ತಿಸುವುದು ಸರಿಯಲ್ಲ. ಸದನ ಮುಗಿಯುವುದರೊಳದಗೆ ಸಚಿವರು ಉತ್ತರ ಒದಗಿಸಲಿದ್ದಾರೆ’ ಎಂದಾಗ ಚರ್ಚೆಗೆ ತೆರೆಬಿತ್ತು.

Advertisement

Udayavani is now on Telegram. Click here to join our channel and stay updated with the latest news.

Next