ಶಿಕಾರಿಪುರ: ಪಟ್ಟಣವನ್ನು ಸುಂದರವಾಗಿ ಇಡಬೇಕು ಎಂಬ ಕಾರಣದಿಂದ ಬೀದಿಬದಿ ವ್ಯಾಪಾರಿಗಳ ಮೇಲೆದಿನೇ ದಿನೇ ದೌರ್ಜನ್ಯದಿಂದ ವ್ಯಾಪಾರಿ ಸ್ಥಳದಿಂದಅವರನ್ನು ತೆಗೆಸುತ್ತಿದ್ದು ಬೀದಿಬದಿ ವ್ಯಾಪಾರಿಗಳುಬೀದಿಗೆ ಬೀಳುವಂತಾಗಿದ್ದು ಅವರ ಬದುಕು ನಾಶವಾಗುತ್ತಿದೆ ಎಂದು ಪುರಸಭಾ ಸದಸ್ಯ ಹಾಗೂ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಹುಲ್ಮಾರ್ ಮಹೇಶ್ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಅಖೀಲಕರ್ನಾಟಕ ಬೀದಿ ವ್ಯಾಪಾರಿಗಳ ಸಂಘದ ವತಿಯಿಂದಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವುದನ್ನುವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ಜಾಗ ನೀಡುವಂತೆ ಆಗ್ರಹಿಸಿದರು.
ರಾಜ್ಯದ ಯಾವುದೇ ತಾಲೂಕುಗಳಲ್ಲಿ ಇಲ್ಲದ ಸಮಸ್ಯೆ ನಮ್ಮ ತಾಲೂಕಿನಲ್ಲಿ ಇದ್ದು ಊರು ಸುಂದರವಾಗಿ ಇರಬೇಕು ಎನ್ನುವ ಉದ್ದೇಶದಿಂದಬೀದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ಕಾರ್ಯ ನಡೆಯುತ್ತಿದೆ. ಊರು ಸುಂದರವಾಗಿ ಇರಬೇಕಾದರೆ ಬಡವರ ಗುಡಿಸಲು, ಹೆಂಚಿನ ಮನೆಗಳನ್ನೂ ಕೆಡವಿ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
1999 ರಲ್ಲಿ ಬಿ.ಎಸ್. ಯಡಿಯೂರಪ್ಪನರೇ ಬೀದಿಬದಿ ವ್ಯಾಪಾರಿಗಳ ಬದುಕು ಬೆಳಗಲಿ ಎಂದು ದೀಪ ಹಚ್ಚಿ ಉದ್ಘಾಟಿಸಿದ ಸಂಘ ಇದು. ಆದರೆ ಅವರ ಸರ್ಕಾರದ ಅವ ಧಿಯಲ್ಲಿ ಅವರ ತಾಲೂಕಿನಲ್ಲಿಯೇಬೀದಿಬದಿ ವ್ಯಾಪಾರಿಗಳ ಮನೆಯ ಬೆಳಕನ್ನು ಆರಿಸುವಕೆಲಸವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 10 -15 ವರ್ಷಗಳಿಂದ ನಾನು ಪುರಸಭೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಶಾಶ್ವತವಾಗಿಒಂದು ಸ್ಥಳವನ್ನು ನಿಯೋಜಿಸಿ ಫುಡ್ ಕೋರ್ಟ್‌ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದುಯಾವುದೇ ಪ್ರಯೋಜನವಾಗಿಲ್ಲ. ಪರ್ಯಾಯ ಜಾಗ ಕೊಡಿ. ಆಮೇಲೆ ಅವರನ್ನು ತೆರವು ಮಾಡಿ ಎಂದು ಆಗ್ರಹಿಸಿದರು.
ಆಮ್ ಆದ್ಮಿ ಪಕ್ಷದ ಚಂದ್ರಕಾಂತ್ ರೇವಣಕರ್ ಮಾತನಾಡಿ, ಅಧಿಕಾರಿಗಳು ಕಾನೂನು ಪಾಲನೆ ಮಾಡಲಿ. ಆದರೆ ಸರ್ಕಾರ ಗೆಜೆಟೆಡ್ ಆದೇಶ ನಿಯಮಾವಳಿ ತಿಳಿದು ಕೆಲಸ ಮಾಡಬೇಕು. ನಗರವನ್ನುಸುಂದರವಾಗಿ ಇಡಬೇಕು. ಆದರೆ ಅದರಿಂದ ಬಡವರ ಬದುಕಿಗೆ ತೊಂದರೆಯಾಗಬಾರದು ಎಂದರು. ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಕಬುತರ್ , ಎನ್ ಎಸ್‌ಯುಐ ಅಧ್ಯಕ್ಷ ಶಿವು ಹುಲ್ಮಾರ್, ಆಮ್ ಆದ್ಮಿಪಕ್ಷದ ಪ್ರಕಾಶ್ ಕೊನಪುರ, ಉಪನ್ಯಾಸಕ ಸುರೇಶ್, ಶ್ರೀಕಾಂತ್, ಅಹಮ್ಮದ್ ಮತ್ತಿತರರು ಇದ್ದರು.