Advertisement

ವಿಪಕ್ಷ‌ಗಳ ಸ್ಥಿತಿ ಚಿಂತಾಜನಕ: ಎಂ.ಟಿ.ರಮೇಶ್‌ 

06:30 AM Oct 05, 2018 | |

ಮುಳ್ಳೇರಿಯ: ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಎಲ್ಲೆಲ್ಲ ಜತೆಯಾಗಿ ಬಿಜೆಪಿಯನ್ನು ಎದುರಿಸಿವೆಯೋ ಅಲ್ಲೆಲ್ಲ ಬಿಜೆಪಿ ಬಹುಮತದಿಂದ ಅಧಿಕಾರಕ್ಕೇರಿದೆ. ಬಿಜೆಪಿಯನ್ನು ಅಧಿಕಾರದಿಂದ ಮುಕ್ತಗೊಳಿ ಸಲು ಹೆಣಗುವ ಪಕ್ಷಗಳ ಸ್ಥಿತಿ ಇಂದು ತೀವ್ರ ಚಿಂತಾಜನಕವಾಗುತ್ತಿದೆ. ಇದರಿಂದ ಉಂಟಾಗುವ ಮಾನಸಿಕ ಭಾÅಂತಿಯು ಜನರನ್ನು ದಿಕ್ಕುತಪ್ಪಿಸುವ ಹೇಳಿಕೆಗಳ ಮೂಲಕ ಜಗಜ್ಜಾಹೀರಾಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್‌ ತಿಳಿಸಿದರು.

Advertisement

ಕಾರಡ್ಕ ಗ್ರಾ. ಪಂ.ನಲ್ಲಿ ಕಾಂಗ್ರೆಸ್‌-ಲೀಗ್‌ ಹಾಗೂ ಎಡಪಕ್ಷಗಳು ಪರಸ್ಪರ ಜತೆಯಾಗಿ ಅಧಿಕಾರ ನಡೆಸುತ್ತಿದ್ದ ಬಿಜೆಪಿ ಆಡಳಿತ ಸಮಿತಿಯನ್ನು ಅವಿಶ್ವಾಸ ಗೊತ್ತುವಳಿ  ಮೂಲಕ ಅಧಿಕಾರದಿಂದ ಕೆಳಗಿಳಿಸಿದ ಘಟನೆಯನ್ನು ಖಂಡಿಸಿ ಕಾರಡ್ಕ ಪಂಚಾಯತ್‌ ಬಿಜೆಪಿ ಸಮಿತಿ ಮಂಗಳ ವಾರ ಸಂಜೆ ಮುಳ್ಳೇರಿಯ ಪೇಟೆಯಲ್ಲಿ ಹಮ್ಮಿಕೊಂಡ  ಬೃಹತ್‌ ಪ್ರತಿಭಟನ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಕಾರಡ್ಕ  ಪಂಚಾಯತ್‌ನಲ್ಲಿ  18 ವರ್ಷ ಗಳಿಂದ ಆಡಳಿತ ನಡೆಸುತ್ತಿದೆ ಎಂದರೆ ಅದು ಅಭಿವೃದ್ಧಿಯ ಮಂತ್ರ ಜಪಿಸಿ ಗ್ರಾಮದ ಅಭಿವೃದ್ಧಿಯನ್ನು ಮೂಲ ಧ್ಯೇಯ ವಾನ್ನಾಗಿಸಿದ ಆಡಳಿತ ಯಂತ್ರವಾಗಿತ್ತು. ಅದನ್ನು ಕೋ-ಮಾ-ಲೀ ಅನೈತಿಕ ಸಖ್ಯ ದಿಂದ ಒಡೆಯಬಹುದೇ ವಿನಾ ಜನರು ನೀಡಿದ ಜನಾದೇಶವನ್ನಲ್ಲ ಎಂದರು. 

ಮೈತ್ರಿ ಮೂಲಕ ಕಾಂಗ್ರೆಸ್‌ ಅನ್ನು ನುಂಗುವ ಲೀಗ್‌ ಇಂದು  ತನ್ನ ಪ್ರಧಾನ ಎದುರಾಳಿ ಸಿ.ಪಿ.ಎಂ.ನ ಜತೆ ಕಾರಡ್ಕದಲ್ಲಿ ಕೈಜೋಡಿಸಿದೆ. ಇದು ಸಿಪಿಎಂನ ಸರ್ವ ನಾಶಕ್ಕೆ ನಾಂದಿಯಾಗಲಿದೆ ಎಂದರು.

ಆಯುಷ್ಮಾನ್‌ ವಿರೋಧಿ ರಾಜ್ಯ ಸರಕಾರ 
ಕೇಂದ್ರ ಸರಕಾರವು ಬಡಜನರ ಪಾಲಿನ ಸಂಜೀವಿನಿಯಾದ “ಆಯುಷ್ಮಾನ್‌ ಭಾರತ್‌’ ಯೋಜನೆಯನ್ನು ಕೇರಳ ಸರಕಾ ರವು ವಿರೋಧಿಸುತ್ತಿದೆ.  ರಾಜ್ಯವನ್ನಾಳು ತ್ತಿರುವ ಬಡಜನರ ಪಕ್ಷ ವೆಂದು ಸ್ವಯಂ ಹೇಳಿಕೊಳ್ಳುವ ಸಿ.ಪಿ.ಎಂ. ಪಕ್ಷವು ಬಡಜನರ ವಿರೋಧಿ ಎಂದು ಈ ಮೂಲಕ ಸಾಬೀತು ಮಾಡಿದ್ದಾರೆ ಎಂದರು.  

Advertisement

ಕಾರಡ್ಕ ಪಂಚಾಯತ್‌ ಬಿಜೆಪಿ ಸಮಿತಿ ಅಧ್ಯಕ್ಷ ವಸಂತ ಕೆ. ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ, ರಾಜ್ಯ ಸಮಿತಿ ಉಪಾಧ್ಯಕ್ಷೆ ಪ್ರಮೀಳಾ ಸಿ.ನಾೖಕ್‌, ರಾಜ್ಯ ಸಮಿತಿ ಸದಸ್ಯ ಕುಂಟಾರು ರವೀಶ ತಂತ್ರಿ, ಸುರೇಶ್‌ ಕುಮಾರ್‌ ಶೆಟ್ಟಿ, ರಾಜ್ಯ ಕೌನ್ಸಿಲ್‌ ಸದಸ್ಯ ಶಿವಕೃಷ್ಣ ಭಟ್‌,ಮಂಡಲಾಧ್ಯಕ್ಷ ಸುಧಾಮ ಗೋಸಾಡ, ಮಂಡಲ ಕಾರ್ಯದರ್ಶಿ ಹರೀಶ್‌ ನಾರಂಪಾಡಿ, ಸುಕುಮಾರ ಕುದ್ರೆಪ್ಪಾಡಿ,  ಕಾರಡ್ಕ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷೆ ಜಿ. ಸ್ವಪ್ನಾ, ನೇತಾರೆ ಎಂ. ಜನನಿ ಮೊದಲಾದವರು   ಮಾತನಾಡಿದರು. 

ಕಾರಡ್ಕ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷೆ ಜಿ. ಸ್ವಪ್ನಾ ಅವರು ಬಿಜೆಪಿ ಆಡಳಿತದಲ್ಲಿ  ಕೈಗೊಂಡ ಹಾಗೂ  ಪೂರ್ಣಗೊಂಡ ಅಭಿವೃದ್ಧಿ ಕಾರ್ಯಗಳನ್ನು  ಮಂಡಿಸಿದರು. ಪಂಚಾಯತ್‌ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್‌ ಗೌರಿಯಡ್ಕ ಸ್ವಾಗತಿಸಿ, ರತ್ನಾಕರ ವಂದಿಸಿದರು. ಕು| ಸಿಂಧೂರಾ ಪಿ.ವಿ. ಕೆದಿಲ್ಲಾಯ ಪಣಿಯೆ  ವಂದೇಮಾತರಂ ಹಾಡಿದರು. 

ಮುಂದಿನ ಮುಖ್ಯಮಂತ್ರಿ ಬಿಜೆಪಿಯಿಂದ 
ಇದೇ ಸಖ್ಯವನ್ನು ನೀವು ಮುಂದುವರಿಸಿದರೂ ಮುಂದಿನ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಕೇರಳದಲ್ಲಿ ಬಿಜೆಪಿಯ ಮುಖ್ಯಮಂತ್ರಿಯೋರ್ವರು ಅಧಿಕಾರ ವಹಿಸಲಿದ್ದಾರೆ,  ಚುನಾವಣಾ ಸಂದರ್ಭದಲ್ಲಿ ಪರಸ್ಪರ ಮೂದಲಿಸಿ ಪ್ರಚಾರ ನಡೆಸಿ ಮತಗಿಟ್ಟಿಸುವ ಕೋ-ಮಾ-ಲೀ ನೇತಾರರು ಅಧಿಕಾರದ ದುವ್ಯಾìಮೋಹದಿಂದ ಕಾರ್ಯ ಕರ್ತರ ಭಾವನೆಗಳಿಗೆ ಬೆಲೆಕೊಡದೆ ಕುರ್ಚಿಯ ಆಸೆಗಾಗಿ ಮಾಡುವ ಈ ಕಪಟನಾಟಕಕ್ಕೆ ಮತದಾರರು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಕಾರಡ್ಕ ಪಂ.ನಲ್ಲಿ ಬಿಜೆಪಿಗೆ ಸ್ಪಷ್ಟಬಹುಮತದ ಮೂಲಕ ಉತ್ತರ ನೀಡಲಿದ್ದಾರೆ. ಇದರೊಂದಿಗೆ ಕೋ-ಮಾ-ಲೀಗ್‌ನ ಕಪಟ ನಾಟಕಕ್ಕೆ ಜನರು ತೆರೆ ಎಳೆಯಲಿದ್ದಾರೆ ಎಂದು ರಮೇಶ್‌ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next