ರಾಜಗಢ, ಮಧ್ಯ ಪ್ರದೇಶ : ”ವಿರೋಧ ಪಕ್ಷಗಳು ದೇಶದ ಜನರಲ್ಲಿ ಸುಳ್ಳುಗಳನ್ನು ಹರಡುತ್ತಿವೆ; ಗೊಂದಲಗಳನ್ನು ಸೃಷ್ಟಿಸುತ್ತಿವೆ ಮತ್ತು ನಿರಾಶಾವಾದವನ್ನು ಹುಟ್ಟುಹಾಕುತ್ತಿವೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದು ಇಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾ ಹೇಳಿದರು.
“ಬಿಜೆಪಿ ಸರಕಾರ ಜನರ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದೆ; ಆದರೆ ಕೆಲವು ವಿರೋಧ ಪಕ್ಷಗಳು ಬಿಜೆಪಿ ವಿರುದ್ಧದ ನಂಜಿನಿಂದ ಜನರಲ್ಲಿ ಸುಳ್ಳು ಹರಡುತ್ತಿವೆ; ಅವರನ್ನು ಗೊಂದಲಕ್ಕೆ ಗುರಿಪಡಿಸುತ್ತಿವೆ ಮತ್ತು ಅವರಲ್ಲಿ ನಿರಾಶಾವಾದವನ್ನು ಸೃಷ್ಟಿಸುತ್ತಿವೆ’ ಎಂದು ಪ್ರಧಾನ ಮೋದಿ ಅವರು ಕಾಂಗ್ರೆಸ್ ಪಕ್ಷವನ್ನು ಹೆಸರಿಸದೆ ಪರೋಕ್ಷವಾಗಿ ಟಾಂಗ್ ನೀಡಿದರು.
ಮೋದಿ ಅವರ ರಾಜಗಢ ಜಿಲ್ಲೆಯ 4,000 ಕೋಟಿ ರೂ. ವೆಚ್ಚದ ಮೋಹನಪುರ ನೀರಾವರಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
”ದೇಶದ ಜನರು ಬಿಜೆಪಿಯನ್ನು ಮತ್ತು ಅದರ ಸರಕಾರವನ್ನು ನಂಬುತ್ತಾರೆ; ಯಾರು ಸುಳ್ಳು ಹರಡುತ್ತಾರೋ, ಗೊಂದಲ ಸೃಷ್ಟಿಸುತ್ತಾರೋ, ನಿರಾಶಾವಾದ ಹುಟ್ಟುಹಾಕುತ್ತಾರೋ ಅವರು ವಾಸ್ತವತೆಯಿಂದ ದೂರವಾಗಿದ್ದಾರೆ” ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ಜನಸಂಘದ ಸ್ಥಾಪಕ ಶ್ಯಾಮ ಪ್ರಸಾದ ಮುಖರ್ಜಿ ಅವರ ಗುಣಗಾನ ಮಾಡಿದರು; ಶಿಕ್ಷಣ, ಆರೋಗ್ಯ, ಹಣಕಾಸು ಮತ್ತು ಭದ್ರತೆಯನ್ನು ಬಲಪಡಿಸುವುದು ಅವರ ದೃಷ್ಟಾರತೆಯಾಗಿತ್ತು ಎಂದು ಹೇಳಿದರು.