Advertisement

ವಯೋಮಿತಿ ಹೇರಿಕೆ: ಹಿರಿಯ ರಂಗಭೂಮಿ ಕಲಾವಿದರ ವಿರೋಧ

05:16 PM Jun 06, 2021 | Team Udayavani |

ಬೆಂಗಳೂರು: ಕೋವಿಡ್‌ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆಸಿಲುಕಿದ ಕಲಾವಿದರಿಗಾಗಿ ಸರ್ಕಾರ ಮೂರು ಸಾವಿರರೂ. ಸಹಾಯ ಧನ ನೀಡಲು ಮುಂದಾಗಿದ್ದು ಆದರೆಕಲಾವಿದರಿಗೆ 35 ವರ್ಷ ಆಗಿರಬೇಕು ಎಂಬ ಮಿತಿಹೇರಿರುವ ಬಗ್ಗೆ ರಂಗಭೂಮಿ ವಲಯದಿಂದ ಭಾರೀವಿರೋಧ ವ್ಯಕ್ತವಾಗಿದೆ.

Advertisement

ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡಚರ್ಚೆಗೆ ಗ್ರಾಸವಾಗಿದೆ. ಮತದಾನ ಮಾಡಲು 18ವರ್ಷದ ಮೇಲ್ಪಟ್ಟವರು ಬೇಕು. ಆದರೆ ಸರ್ಕಾರದಸಹಾಯ ಧನಕ್ಕೆ ಮಾತ್ರ ಮಿತಿ ಏಕೆ ಎಂಬ ಪ್ರಶ್ನೆಗಳುಕೂಡ ಕೇಳಿ ಬಂದಿವೆ.ರಾಜ್ಯಾದ್ಯಂತ ಸಾವಿರಕ್ಕೂ ಅಧಿಕ ಯುವರಂಗಭೂಮಿ ಕಲಾವಿದರಿದ್ದಾರೆ. ಅವರೆಲ್ಲರೂ ಕಲೆಯನ್ನು ಅಪ್ಪಿಕೊಂಡು ಬೆಳೆದವರಾಗಿದ್ದಾರೆ. ನೀನಾಸಂ,ಸಾಣೆಹಳ್ಳಿ, ಅಭಿನಯ ತರಂಗ, ವಿಜಯನಗರ ಬಿಂಬಸೇರಿದಂತೆ ಹಲವು ತಂಡಗಳಲ್ಲಿ ಯುವ ಕಲಾವಿದರುಇದ್ದಾರೆ.

ಅವರನ್ನು ಕೂಡ ಸಹಾಯ ಧನಕ್ಕೆ ಪರಿಗಣಿಸಬೇಕಾಗಿತ್ತು ಎಂಬುದು ಹಿರಿಯರ ರಂಗಭೂಮಿಕಲಾವಿದರ ಮಾತಾಗಿದೆ.ರಂಗಭೂಮಿಯಲ್ಲಿ ಈಗಾಗಲೇ ನೀನಾಸಂ,ಸಾಣೆಹಳ್ಳಿ ಯಲ್ಲಿ ತರಬೇತಿ ಪಡೆದಿರುವ ಯುವಕಲಾವಿದರು ತಿರುಗಾಟದ ನಾಟಕಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಬಗ್ಗೆ ಕೂಡ ಸರ್ಕಾರ ಅನುಕಂಪತೋರಬೇಕಾಗಿತ್ತು ಎಂದು ಹಿರಿಯ ರಂಗಕಲಾವಿದಗುಂಡಣ್ಣ ಹೇಳಿದ್ದಾರೆ.ಸರ್ಕಾರ ಲಸಿಕೆ ನೀಡುವ ವಿಚಾರದಲ್ಲಿ ಮಿತಿಹೇರಿದೆ. ಅದನ್ನು ಲಸಿಕೆ ಇಲ್ಲ ಎಂಬಕಾರಣದಿಂದಾಗಿಒಪ್ಪೋಣ. ಆದರೆ ಸಹಾಯ ಧನಕ್ಕೂ ಮಿತಿ ಹೇರಿರುವು ಸರಿಯಾದ ನಿರ್ಧಾರವಲ್ಲ ಎಂದಿದ್ದಾರೆ.

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next