Advertisement

LokSabha; ಪ್ರತಿಪಕ್ಷದ ಅವಿಶ್ವಾಸ ನಿರ್ಣಯವು ನಮಗೆ ಉತ್ತಮ ಶಕುನವಾಗಿದೆ: ಪ್ರಧಾನಿ ಮೋದಿ

06:49 PM Aug 10, 2023 | Team Udayavani |

ಹೊಸದಿಲ್ಲಿ: ಕೇಂದ್ರ ಸರ್ಕಾರ ವಿರುದ್ಧ ವಿಪಕ್ಷಗಳ ಅವಿಶ್ವಾಸ ಗೊತ್ತುವಳಿಯ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದರು. ಈ ಸಮಯವನ್ನು ಪ್ರಧಾನಿ ಮೋದಿ ಅವರು ವಿಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಲು ಬಳಸಿದರು.

Advertisement

ಅಲ್ಲದೆ ಅವಿಶ್ವಾಸ ಗೊತ್ತುವಳಿ ಮಂಡನೆಯು ನಮಗೆ ಯಾವಾಗಲೂ ಲಕ್ಕಿ ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರತಿ ಬಾರಿ ಅವಿಶ್ವಾಸ ನಿರ್ಣಯ ಆದಾಗೆಲ್ಲಾ ಜನರು ಅವರನ್ನು ನಿರ್ಣಯಿಸುತ್ತಾರೆ ಮತ್ತು ದೊಡ್ಡ ಜನಾದೇಶದೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತಾರೆ. ಅವರು ಯಾವುದೇ ಸಂಸ್ಥೆಯ ವಿರುದ್ಧ ಮಾತನಾಡಿದಾಗೆಲ್ಲಾ ಎನ್‌ಡಿಎ ಮತ್ತು ಬಿಜೆಪಿ ದಾಖಲೆಯ ಜನಾದೇಶದೊಂದಿಗೆ ಮರಳುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ:Prithvi Shaw: ಟೀಂ ಇಂಡಿಯಾ ಆಯ್ಕೆಯ ಬಗ್ಗೆ ಮೌನ ಮುರಿದ ಪೃಥ್ವಿ ಶಾ

2018 ರಲ್ಲಿ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷವು ಮಂಡಿಸಿದ ಕೊನೆಯ ಅವಿಶ್ವಾಸ ನಿರ್ಣಯವನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, 2018ರಲ್ಲಿಯೂ ಅವಿಶ್ವಾಸ ನಿರ್ಣಯ ಮಂಡಿಸಿದ್ದೀರಿ. ಅಂದೇ ನಾನು ಹೇಳಿದ್ದೆ, ಈ ಬಹುಮತದ ಪರೀಕ್ಷೆ ನಮ್ಮ ಸರ್ಕಾರಕ್ಕಲ್ಲ, ಅದು ನಿಮಗೆ (ವಿಪಕ್ಷಗಳಿಗೆ) ಎಂದು. ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ, ಎನ್‌ ಡಿಎ ಮೈತ್ರಿಕೂಟಕ್ಕೆ ಭರ್ಜರಿ ಬಹುಮತ ನೀಡುವ ಮೂಲಕ ವಿಪಕ್ಷಗಳ ಮೇಲೆ ವಿಶ್ವಾಸ ಇಲ್ಲ ಎಂಬುದನ್ನು ಸಾಬೀತುಪಡಿಸಿದರು ಎಂದು ಪ್ರಧಾನಿ ಟೀಕಿಸಿದರು.

Advertisement

“ನಾವು ಸಾರ್ವಜನಿಕರ ಬಳಿಗೆ ಹೋದಾಗ, ಜನರು ಅವರ ಮೇಲೆ ವಿಶ್ವಾಸವನ್ನು ಘೋಷಿಸಿದರು. ಎನ್‌ಡಿಎ ಮತ್ತು ಬಿಜೆಪಿ ಹೆಚ್ಚು ಮತಗಳನ್ನು ಪಡೆದವು. ಒಂದು ರೀತಿಯಲ್ಲಿ, ಪ್ರತಿಪಕ್ಷದ ಅವಿಶ್ವಾಸ ನಿರ್ಣಯವು ನಮಗೆ ಉತ್ತಮ ಶಕುನವಾಗಿದೆ” ಎಂದು ಅವರು ಹೇಳಿದರು.

ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿಯೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿದ ಪ್ರಧಾನಿ ಮೋದಿ, ಮುಂಗಾರು ಅಧಿವೇಶನದಲ್ಲಿ ಪ್ರಮುಖ ಮಸೂದೆಗಳ ಬಗ್ಗೆ ಯಾವುದೇ ಚರ್ಚೆಗೆ ಅವಕಾಶ ನೀಡದೆ ಜನರಿಗೆ “ದ್ರೋಹ” ಮಾಡಿದ್ದಾರೆ ಎಂದು ಹೇಳಿದರು. ಅವರಿಗೆ ಪಕ್ಷವು ದೇಶಕ್ಕಿಂತ ದೊಡ್ಡದು ಎಂದು ತೋರಿಸಿದ್ದಾರೆ ಎಂದರು.

ಕಳೆದ 20 ವರ್ಷಗಳಿಂದ ನೀವು ನನ್ನ ಬೈಯುತ್ತಲೇ ಇದ್ದೀರಿ. ನಿಮ್ಮ ಎಲ್ಲಾ ಬೈಗುಳ, ಅಸಭ್ಯ ಭಾಷೆ ಎಲ್ಲವನ್ನೂ ವರ ಎಂದೇ ಭಾವಿಸುತ್ತೇನೆ. 2024ರಲ್ಲಿಯೂ ಕೂಡಾ ಭಾರತೀಯ ಜನತಾ ಪಕ್ಷ ಎಲ್ಲಾ ದಾಖಲೆಗಳನ್ನು ಮುರಿದು ಅಧಿಕಾರಕ್ಕೆ ಏರಲಿದೆ. ಆ ನಿಟ್ಟಿನಲ್ಲಿ 2028ರಲ್ಲಿಯೂ ಅವಿಶ್ವಾಸ ನಿರ್ಣಯ ಮಂಡಿಸುವ ಅವಕಾಶ ಸಿಗಲಿ ಎಂದು ಪ್ರಧಾನಿ ಮೋದಿ ಭವಿಷ್ಯ ನುಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next