ನವ ದೆಹಲಿ : ಪ್ರಧಾನಿ ನರೇಂದ್ರ ಮೊದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಿರಂತರವಾಗಿ ಪ್ರತಿರೋಧ ವ್ಯಕ್ತ ಪಡಿಸುತ್ತಿದೆ.
ಇಂದು(ಮಂಗಳವಾರ, ಆಗಸ್ಟ್ 03) ಪ್ರತಿಪಕ್ಷಗಳ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮತ್ತೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲದ ಏರಿಕೆಯ ವಿರುದ್ಧ ಸಂಸತ್ ಭವನಕ್ಕೆ ಸೈಕಲ್ ರ್ಯಾಲಿ ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ : ಮುಖ್ಯಮಂತ್ರಿ ಸ್ಥಾನ ಸುಖದ ಸುಪ್ಪತ್ತಿಗೆಯಲ್ಲ, ಮಹತ್ವದ ಜವಾಬ್ದಾರಿ ಇದೆ : ಉಗ್ರಪ್ಪ
ಇಂಧನ ಬೆಲೆಗಳಿಗೆ ಸಂಬಂಧಿಸಿದಂತೆ, ಭಾರತದ ಜನರು ಕಷ್ಟಪಡುತ್ತಿದ್ದಾರೆ. ಜನರ ಕಷ್ಟ ಅರಿವಿಗೆ ಬಾರದಂತೆ ಸರ್ಕಾರ ವರ್ತಿಸುತ್ತಿದೆ. ಜನರ ಪಾಲಿಗೆ ಆಗದ ಸರ್ಕಾರ, ಇದ್ದೂ ಇಲ್ಲದಂತೆ. ಜನರ ಮೇಲೆ ಆರ್ಥಿಕ ಹೊರೆ ಹಾಕುವ ಕೆಲಸವನ್ನು ಮೋದಿ ಸರ್ಕಾರ ಯಶಸ್ವಿಯಾಗಿ ನಡೆಸುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಇನ್ನು, ಪೆಗಾಸಸ್ ಬೇಹುಗಾರಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಸಭೆ ಕರೆದಿದ್ದ ಗಾಂಧಿ, ಪೆಗಾಸಸ್ ವಿಚಾರವನ್ನು ಮೋದಿ ಸರ್ಕಾರ ಬದಿಗೆ ಸರಿಸಿದೆ. ಪ್ರತಿಪಕ್ಷಗಳ ಮಾತನ್ನು ಕೇಳುವುದಕ್ಕೆ ಮೋದಿ ಸರ್ಕಾರ ಸಿದ್ಧವಿಲ್ಲ. ಸರ್ವ ಸ್ವತಂತ್ರವೆಂಬಂತೆ ನಡೆದುಕೊಳ್ಳುತ್ತಿದೆ. ಮೋದಿ ಸರ್ಕಾರ ವಿರುದ್ಧ ಪತ್ರಿಪಕ್ಷಗಳು ಧ್ವನಿ ಎತ್ತಲೇಬೇಕು ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ : ಹಣ ವಿತ್ ಡ್ರಾ ಮಾಡುವುದು ಮಾತ್ವಲ್ಲ, ಎಟಿಎಂ ನಲ್ಲಿ ಇವುಗಳನ್ನು ಮಾಡಬಹುದು..!