Advertisement

Parliament: ಎರಡೂ ಸದನಗಳಲ್ಲಿ ಸಂವಿಧಾನದ ಬಗ್ಗೆ ಚರ್ಚೆಗೆ ವಿಪಕ್ಷ ನಾಯಕರ ಪತ್ರ

09:18 PM Nov 26, 2024 | Team Udayavani |

ನವದೆಹಲಿ: ಸಂಸತ್‌ನ ಎರಡೂ ಸದನಗಳಲ್ಲಿ ಸಂವಿಧಾನಕ್ಕೆ ಸಂಬಂಧಿಸಿದ ಚರ್ಚೆ ನಡೆಯಬೇಕು ಎಂದು ಲೋಕಸಭೆ, ರಾಜ್ಯಸಭೆ ವಿಪಕ್ಷ ನಾಯಕರು ಒತ್ತಾಯಿಸಿದ್ದಾರೆ. ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ ಇದು ಅತ್ಯಂತ ಅಗತ್ಯವಾಗಿದೆ ಎಂದೂ ಹೇಳಿದ್ದಾರೆ.

Advertisement

ಈ ಕುರಿತು ಮಾತನಾಡಿರುವ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, “ಎರಡೂ ಸದನಗಳಲ್ಲಿ ಸಂವಿಧಾನದ ಕುರಿತು 2 ದಿನಗಳ ಕಾಲ ಚರ್ಚೆ ನಡೆಸಲು ಅವಕಾಶ ನೀಡುವಂತೆ ಕೋರಿ ನಾನು ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಲೋಕಸಭೆ ಮತ್ತು ರಾಜ್ಯಸಭಾ ಅಧ್ಯಕ್ಷರಿಗೆ ಪತ್ರ ಬರೆದಿದ್ದೇವೆ’ ಎಂದು ತಿಳಿಸಿದ್ದಾರೆ.

“ಚರ್ಚೆಗೆ ಕಾಲಾವಕಾಶ ಕಲ್ಪಿಸಬೇಕು. ಅಲ್ಲಿ ಸಂವಿಧಾನದ ಕುರಿತ ಒಳ್ಳೆಯ ವಿಚಾರಗಳು ಚರ್ಚೆಯಾಗಬೇಕು. ಅದರ ಜೊತೆಗೆ ಇಂದು ನಡೆಯುತ್ತಿರುವ ಕೆಟ್ಟ ಹಾಗೂ ತಪ್ಪು ಕೆಲಸಗಳ ಕುರಿತೂ ಚರ್ಚೆಯಾಗಬೇಕು. ನಾವು ಪತ್ರ ಬರೆದಿದ್ದೇವೆ. ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ’ ಎಂದಿದ್ದಾರೆ.

ಇದೇ ವೇಳೆ, “ಸಂವಿಧಾನದ ಮೂಲ ಆಶಯ ವಾಸ್ತವದಲ್ಲಿ ಅನುಷ್ಠಾನಗೊಂಡಿದೆಯೇ’ ಎಂದು ಪ್ರಶ್ನಿಸಿರುವ ಕಾಂಗ್ರೆಸ್‌ನ ಮತ್ತೂಬ್ಬ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌, “ಜನರಿಗೆ ನಿಜಕ್ಕೂ ನ್ಯಾಯ, ಸ್ವಾತಂತ್ರ್ಯ ಸಿಗುತ್ತಿದೆಯೇ? ಅಭಿವ್ಯಕ್ತಿ ಸ್ವಾತಂತ್ರ್ಯವಿದೆಯೇ? ಭಾÅತೃತ್ವ ಎಲ್ಲಿದೆ? ಸಂವಿಧಾನಕ್ಕೆ ತಲೆಬಾಗಿದ ತಕ್ಷಣ ಅದನ್ನು ಪಾಲಿಸಿದಂತೆ ಅರ್ಥ ಅಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next