Advertisement
ಬಿಜೆಪಿಯನ್ನು ಸೋಲಿಸಬೇಕೆಂದರೆ ವಿಪಕ್ಷಗಳೆಲ್ಲ ಒಂದಾಗಬೇಕು ಎಂಬ ಧ್ಯೇಯದೊಂದಿಗೆ “ಇಂಡಿಯಾ ಒಕ್ಕೂಟ’ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿ ಇದ್ದಿದ್ದೇ ನಿತೀಶ್ ಕುಮಾರ್. ವಿವಿಧ ಪಕ್ಷಗಳ ನಾಯಕರ ಸರಣಿ ಸಭೆಗಳನ್ನೂ ಅವರು ನಡೆಸಿದ್ದರು. ಅದರಂತೆ, ಒಕ್ಕೂಟ ಸ್ಥಾಪನೆಯೂ ಆಯಿತು. ಆದರೆ, ಒಬ್ಬೊಬ್ಬರು ಒಂದೊಂದು ದಿಕ್ಕಿನ ಕಡೆಗೆ ಮುಖ ಮಾಡಿದ್ದರಿಂದ ದಿನೇ ದಿನೆ ಬಿರುಕುಗಳೇ ಹೆಚ್ಚಾಗತೊಡಗಿತು.
Related Articles
Advertisement
“ಇಂಡಿಯಾ’ ಸ್ಥಿತಿ ಸರಿಯಿಲ್ಲ: ನಿತೀಶ್
ಸಿಎಂ ಹುದ್ದೆಗೆ ರಾಜೀನಾಮೆ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ನಿತೀಶ್, “ಮಹಾಘಟಬಂಧನ್ ಕಥೆ ಮುಗಿದಿದೆ. ಇಂಡಿಯಾ ಒಕ್ಕೂಟದ ಪರಿಸ್ಥಿತಿ ಸರಿಯಿಲ್ಲ. ಅಲ್ಲಿ ಯಾರೂ ಕೆಲಸ ಮಾಡುತ್ತಿಲ್ಲ. ಒಕ್ಕೂಟವನ್ನು ಬೆಳೆಸಲು ನಾನು ಪ್ರಯತ್ನಿಸಿದೆ, ಆದರೆ ಅದು ಸಾಧ್ಯವಾಗಲಿಲ್ಲ’ ಎಂದಿದ್ದಾರೆ.
ಜೆಡಿಯು ಕಥೆ ಮುಗಿಯಲಿದೆ: ತೇಜಸ್ವಿ
ಬಿಹಾರ ಬೆಳವಣಿಗೆ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, “ನಿತೀಶ್ ಗೌರವಾನ್ವಿತ ನಾಯಕ. ಆದರೆ, ಒಂದಂತೂ ಸತ್ಯ- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಕಥೆ ಮುಗಿಯಲಿದೆ’ ಎಂದಿದ್ದಾರೆ.
ಇಂಡಿಯಾಗೆ ಹಿನ್ನಡೆ: ವಿದೇಶಿ ಮಾಧ್ಯಮಗಳು!
ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ನಿತೀಶ್ ಕುಮಾರ್ ಒಕ್ಕೂಟ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಾದ ಈ ಬೆಳವಣಿಗೆ ಇಂಡಿಯಾ ಒಕ್ಕೂಟಕ್ಕೆ ಭಾರೀ ಹಿನ್ನಡೆಯಾದಂತಾಗಿದೆ ಎಂದು ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅರಬ್ ನ್ಯೂಸ್, ಪ್ರಸಕ್ತ ಬೆಳವಣಿಗೆ ಒಕ್ಕೂಟದ ರಾಜಕೀಯಕ್ಕೆ ತಿರುವು ಎಂದಿದ್ದರೆ, ಅಲ್ ಅರೇಬಿಯಾ ಮತ್ತು ರಾಯಿಟರ್ಸ್ ಸಂಸ್ಥೆಗಳೂ “ಈ ಬೆಳವಣಿಗೆ ಬಿಜೆಪಿಗೆ ಲಾಭ ಮತ್ತು ಒಕ್ಕೂಟಕ್ಕೆ ನಷ್ಟತರುವಂಥದ್ದು’ ಎಂದು ಹೇಳಿವೆ. ಸಿಂಗಾಪುರ ಮೂಲದ ಏಷ್ಯಾ ನ್ಯೂಸ್ ನೆಟ್‌ವರ್ಕ್, “ನಿತೀಶ್ ನಿರ್ಣಯ ಒಕ್ಕೂಟದ ಶಕ್ತಿಯನ್ನು ಕುಂದಿಸಿ ದುರ್ಬಲಗೊಳಿಸುತ್ತದೆ’ ಎಂದು ವರದಿ ಮಾಡಿದ್ದರೆ, ಮಲೇಷ್ಯಾ ಮೂಲದ ದಿ ಸ್ಟಾರ್ ವೆಬ್‌ಸೈಟ್, “ಮೋದಿ ಸರ್ಕಾರಕ್ಕೆ ಸವಾಲೆಸೆದವರಿಗೆ ಇದು ದೊಡ್ಡ ಆಘಾತ’ ಎಂದು ವರದಿ ಮಾಡಿದೆ.