Advertisement
ನಗರಸಭಾ ಸಾಮಾನ್ಯ ಸಭೆ ಅಧ್ಯಕ್ಷೆ ಜಯಂತಿ ಬಲಾ°ಡು ಅಧ್ಯಕ್ಷತೆಯಲ್ಲಿ ನಗರ ಸಭಾಂಗಣದಲ್ಲಿ ನಡೆಯಿತು.ಅಜೆಂಡಾ ವಿಷಯ ಪ್ರಸ್ತಾವನೆ ವೇಳೆ ಮಾತ ನಾಡಿದ ಸದಸ್ಯ ರಾಜೇಶ್ ಬನ್ನೂರು, ಫೆ. 9 ಮತ್ತು 10ರಂದು ನಡೆದ ಸಭೆಯ ನಡಾವಳಿಗಳನ್ನು ಈ ಸಭೆಯಲ್ಲಿ ಯಾಕೆ ಮಂಡಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಪುರಸಭಾ ಆ್ಯಕ್ಟ್‌ನಲ್ಲಿ ನಡಾವಳಿ ಮಂಡನೆ ಕುರಿತು ಸ್ಪಷ್ಟವಾಗಿ ಉಲ್ಲೇಖವಿದ್ದರೂ, ನಗರಸಭೆ ಆಡಳಿತ ಅದನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು
Related Articles
ಶುಕ್ರವಾರದ ಸಭೆಯ ನಾಲ್ಕು ಅಜೆಂಡಾಗಳಿಗೆ ವಿಪಕ್ಷ ಸದಸ್ಯರು ಅಧ್ಯಕ್ಷರಿಗೆ ಆಕ್ಷೇಪ ಪತ್ರವನ್ನು ಸಲ್ಲಿಸಿದರು. ಆದರೆ ಅಧ್ಯಕ್ಷರು ಹಿಂಬರೆಹದ ಪ್ರತಿಗೆ ಸಹಿ ಹಾಕದೆ ಇರುವುದಕ್ಕೆ ಗರಂ ಆದ ರಾಜೇಶ್ ಬನ್ನೂರು, ಜೀವಂಧರ್ ಜೈನ್, ವಿನಯ ಭಂಡಾರಿ, ರಮೇಶ್ ರೈ ಮೊದಲಾದವರು, ಏಕಪಕ್ಷೀಯ ಧೋರಣೆ ಪ್ರದರ್ಶಿಸುತ್ತಿದ್ದೀರಿ. ಆಕ್ಷೇಪ ಪತ್ರದ ಪ್ರತಿಗೆ ಸಹಿ ಹಾಕಿ ನೀಡುವುದು ನಿಯಮ. ಅದನ್ನು ಉಲ್ಲಂಘಿಸಿದ್ದೀರಿ ಎಂದು ಅವರು ಆರೋಪಿಸಿದರು.
Advertisement
ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ಸದಸ್ಯರು, ಬಿಜೆಪಿ ಆಡಳಿತ ಅವಧಿಯಲ್ಲಿ ಹೇಗೆ ಆಡಳಿತ ನಡೆದಿದೆ ಎನ್ನುವುದು ನಮಗೆ ಚೆನ್ನಾಗಿಗೊತ್ತಿದೆ ಎಂದು ಸಮರ್ಥಿಸಿದ ಸಂದರ್ಭದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ತೀವ್ರ ವಾಗ್ವಾದ ನಡೆಯಿತು. ಕೆಲ ಕಾಲ ಆರೋಪ-ಪ್ರತ್ಯಾರೋಪಗಳಲ್ಲಿ ಸಭೆ ಮುಳುಗಿ ಹೋಗಿತ್ತು. ಧಿಕ್ಕಾರವೂ ಮೊಳಗಿತ್ತು.
ಕಾನೂನು ಹೋರಾಟಆಡಳಿತ ಪಕ್ಷದ ಸದಸ್ಯ ಎಚ್.ಮಹಮ್ಮದ್ ಆಲಿ ಮಾತನಾಡಿ, ಬಿಜೆಪಿ ಅವಧಿಯಲ್ಲಿನ ಆಡಳಿತ ಭ್ರಷ್ಟಾಚಾರದ ದಾಖಲೆ ನಮ್ಮ ಬಳಿ ಇದೆ. ಅದನ್ನು ಹೊರ ತಂದು ಕಾನೂನಿನ ಮೂಲಕ ಹೋರಾಟ ನಡೆಸುತ್ತೇವೆ ಎಂದರು. ಇದಕ್ಕೆ ಬಿಜೆಪಿ ಸದಸ್ಯರು, ತನಿಖೆ ಮಾಡಿಸಿ. ನಮ್ಮದೇನೂ ಆಕ್ಷೇಪ ಇಲ್ಲ. ನಿಮ್ಮ ಅವಧಿಯ ಅವ್ಯವಹಾರ ನಮ್ಮ ಬಳಿ ಇದೆ. ನೀವು ಕಾನೂನು ಹೋರಾಟ ಮಾಡಿ ಎಂದು ಅವರು ಉತ್ತರಿಸಿದರು. ಈ ವಿಚಾರಕ್ಕೆ ಸಂಬಂಧಿಸಿ ಕೆಲ ಕಾಲ ಸಭೆ ಗದ್ದಲದ ಗೂಡಾಯಿತು. ಸ್ಥಾಯೀ ಸಮಿತಿಗೆ ಆಯ್ಕೆ ಚರ್ಚೆ
ಸ್ಥಾಯೀ ಸಮಿತಿ ಸದಸ್ಯರ ಆಯ್ಕೆಗೆ ಪಟ್ಟಿ ನೀಡಲಾಗಿದ್ದರೂ ಆಯ್ಕೆ ಮಾಡಿಲ್ಲ. ಮುಂದೂಡಲಾಗಿದೆ ಎಂಬ ಉತ್ತರ ನೀಡಿದ್ದೀರಿ ಎಂದು ಬಿಜೆಪಿ ಸದಸ್ಯರು ಆರೋಪಿಸಿದಾಗ, ಆಯ್ಕೆ ಬಗ್ಗೆ ಕುಳಿತು ಚರ್ಚಿಸಲು ನೀವು ತಯಾರಿಲ್ಲ. ಹೀಗಾಗಿ ಆಯ್ಕೆ ನಡೆದಿಲ್ಲ. ಸ್ಥಾಯಿ ಸಮಿತಿ ಅಧ್ಯಕ್ಷತೆ ಆಸೆ ನಮಗಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ಸಮರ್ಥಿಸಿದರು. ಈ ವಿಚಾರದಲ್ಲಿ ಸಭೆಯಲ್ಲಿ ದೀಫì ಚರ್ಚೆ ಮುಂದುವರಿಯಿತು. ಶಾಸಕರ ಆಗಮನ: ಸದಸ್ಯರ ನಿರ್ಗಮನ
ಬಿಜೆಪಿ ಸದಸ್ಯರು ಸಭಾ ಬಹಿಷ್ಕಾರಕ್ಕೆ ಮುಂದಾದ ವೇಳೆಯಲ್ಲಿ ಸಭೆಗೆ ಆಗಮಿಸಿದ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಬಹಿಷ್ಕಾರದ ಬದಲು ವಿಷಯ ತಿಳಿಸುವಂತೆ ಸೂಚಿಸಿದರು. ರಾಜೇಶ್ ಬನ್ನೂರು ನಗರಸಭೆ ಆಡಳಿತದ ಏಕಪಕ್ಷೀಯ ಧೋರಣೆ ತಳೆದಿದೆ ಎಂದು ವಿವರಿಸಿದರು. ಇದಕ್ಕೆ ಮರು ಉತ್ತರ ನೀಡಲು ಆಡಳಿತ ಪಕ್ಷದ ಸದಸ್ಯ ಎಚ್. ಮಹಮ್ಮದ್ ಆಲಿ ಮುಂದಾದಾಗ ಅದಕ್ಕೆ ಬಿಜೆಪಿ ಸದಸ್ಯರು ಸಹಮತ ಸೂಚಿಸದೆ, ಸಭೆ ಯಿಂದ ನಿರ್ಗಮಿಸಿದರು. ಅನಂತರ ಶಾಸಕರ ಉಪಸ್ಥಿತಿಯಲ್ಲಿ ಸಾಮಾನ್ಯ ಸಭೆ ಮುಂದುವರಿಯಿತು.ಪೌರಾಯುಕ್ತೆ ರೂಪಾ ಶೆಟ್ಟಿ, ಉಪಾಧ್ಯಕ್ಷ ವಿಶ್ವನಾಥ ಗೌಡ ಮತ್ತು ಸದಸ್ಯರು ಉಪಸ್ಥಿತರಿದ್ದರು. ಅನುದಾನ ಮೀಸಲಲ್ಲಿ ತಾರತಮ್ಯ: ಆಕ್ಷೇಪ; ಸಮರ್ಥನೆ
ಎಸ್‌ಪಿಸಿ-ಟಿಎಸ್‌ಪಿಯಲ್ಲಿನ 1.5 ಕೋ.ರೂ. ಅನುದಾನದಲ್ಲಿ 75 ಲಕ್ಷ ರೂ. ಅನುದಾನವನ್ನು ಅಧ್ಯಕ್ಷರ ವಾರ್ಡ್‌ಗೆ ಮೀಸಲಿರಿಸಲಾಗಿದೆ. ಇದು ಉಳಿದ ಸದಸ್ಯ ವಾರ್ಡ್‌ಗಳ ಕಡಗಣನೆಗೆ ಉದಾ ಹರಣೆಯಾಗಿದ್ದು, ಈ ತಾರತಮ್ಯ ನೀತಿಗೆ ಉತ್ತರಿಸುವಂತೆ ಸದಸ್ಯರಾದ ರಾಜೇಶ್ ಬನ್ನೂರು, ಜೀವಂಧರ್ ಜೈನ್, ರಾಮಣ್ಣ ಗೌಡ, ವಾಣಿಶ್ರೀಧರ್ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮಹಮ್ಮದ್ ಆಲಿ, ತಾರತಮ್ಯ ಮಾಡಿಲ್ಲ. ಎಸ್‌ಸಿ-ಎಸ್‌ಟಿ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ ಹಣ ಮೀಸಲಿಟ್ಟಿದ್ದು, ಬಲಾ°ಡು ವಾರ್ಡ್‌ನ ರಸ್ತೆಗೆ ಅಷ್ಟು ಮೊತ್ತದ ಹಣ ಅಗತ್ಯ ಇದ್ದ ಕಾರಣ ಈ ಹಣ ಮೀಸಲಿಡಲಾಗಿದೆ. ಎಲ್ಲ ವಾರ್ಡ್‌ಗಳ ಕಾಲನಿ ಸಂಪರ್ಕ ರಸ್ತೆಗೆ ಹಣ ಇಡಲಾಗಿದೆ ಎಂದರು. ಈ ಉತ್ತರ ಸಮರ್ಥ ನಿಯಲ್ಲ ಎಂದು ವಿಪಕ್ಷ ಸದಸ್ಯರು ವಿರೋಧ ಸೂಚಿಸಿದರು.