Advertisement

ವೈದ್ಯ ಇಂಟರ್ನ್ ಶಿಪ್‌ ಭಾರತದಲ್ಲಿ ಪೂರ್ಣಗೊಳಿಸಲು ಅವಕಾಶ

12:52 AM Mar 26, 2022 | Team Udayavani |

ಹೊಸದಿಲ್ಲಿ: ವಿದೇಶದ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತ ಮೂಲದ ವಿದ್ಯಾರ್ಥಿಗಳಿಗೆ ಯುದ್ಧ ಅಥವಾ ಕೊರೊನಾ ಸೋಂಕಿನಿಂದಾಗಿ ತಮ್ಮ ಕೋರ್ಸ್‌ ನ ಇಂಟರ್ನ್ ಶಿಪ್‌ ಪೂರ್ಣಗೊಳಿಸಲು ಸಾಧ್ಯವಾಗದೇ ಇದ್ದರೆ, ಅಂಥವರಿಗೆ ಇಂಟರ್ನ್ ಶಿಪ್‌ ನ ಉಳಿದ ಅವಧಿಯನ್ನು ಭಾರತದಲ್ಲಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಕೇಂದ್ರ ತಿಳಿಸಿದೆ.

Advertisement

ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಖಾತೆ ಸಹಾಯಕ ಸಚಿವೆ ಭಾರತಿ ಪ್ರವೀಣ್‌ ಪವಾರ್‌, ಭಾರತದಲ್ಲಿ ವೈದ್ಯ ಕೀಯ ಅಭ್ಯಾಸ ಮಾಡಬೇಕೆಂದರೆ ವಿದೇಶಿ ವೈದ್ಯಕೀಯ ವಿದ್ಯಾರ್ಹತೆ ಹೊಂದಿರುವವರು ಕಡ್ಡಾಯವಾಗಿ ಎಫ್ಎಂಜಿಇಯಲ್ಲಿ (ಸ್ಕ್ರೀನಿಂಗ್‌ ಪರೀಕ್ಷೆ) ಉತ್ತೀರ್ಣರಾಗಿರಬೇಕು ಎಂದ ಹೇಳಿದ್ದಾರೆ.

ಇದನ್ನೂ ಓದಿ:ಕೆಐಎಡಿಬಿ ಕಾಯ್ದೆ ತಿದ್ದುಪಡಿಯಿಂದ ರೈತರ ಭೂ ಪರಿಹಾರ ಸರಳ: ನಿರಾಣಿ

ಇದೇ ವೇಳೆ ಹೊರದೇಶಗಳಲ್ಲಿ ವೈದ್ಯ ಸ್ನಾತಕ ಪದವಿ ವ್ಯಾಸಂಗ ಮಾಡಲಿಚ್ಛಿಸುವ ವಿದ್ಯಾ ರ್ಥಿಗಳಿಗೆ ಭಾರತದಲ್ಲಿ ಬರೆಯುವ ರಾಷ್ಟ್ರಮಟ್ಟದ ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್‌) ಪರೀಕ್ಷೆಯ ಅರ್ಹತ ಪ್ರಮಾಣಪತ್ರವೇ ಮಾನ ದಂಡವಾಗಲಿದೆ. ಈವರೆಗೆ ನೀಟ್‌ ಪ್ರಮಾಣ ಪತ್ರದ ಜತೆಗೆ ರಾಷ್ಟ್ರೀಯ ವೈದ್ಯಕೀಯ ಮಂಡಳಿಯ (ಎನ್‌ಎಂಸಿ) ಅನುಮತಿಯನ್ನೂ ಪಡೆಯ ಬೇಕಿತ್ತು. ಆದರೆ ಇನ್ನು ಮುಂದೆ ಎನ್‌ಎಂಸಿ ಅನು ಮತಿ ಅಗತ್ಯವಿಲ್ಲ ಎಂದಿದ್ದಾರೆೆ.

Advertisement

Udayavani is now on Telegram. Click here to join our channel and stay updated with the latest news.

Next