Advertisement

ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ದತ್ತು ಪಡೆಯಲು ಅವಕಾಶ: ಸಚಿವ

10:09 PM Dec 04, 2024 | Team Udayavani |

ಬೆಂಗಳೂರು: ಶಾಲೆಗಳ ದತ್ತು ಕಾರ್ಯಕ್ರಮದ ಮಾದರಿಯಲ್ಲೇ ರಾಜ್ಯದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐ) “ಕಾರ್ಪೋರೆಟ್‌ ಸಾಮಾಜಿಕ ಹೊಣೆಗಾರಿಕೆ’ (ಸಿಎಸ್‌ಆರ್‌) ಅಡಿ ದತ್ತು ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲಾಭಿವೃದ್ಧಿ ಸಚಿವ ಡಾ| ಶರಣಪ್ರಕಾಶ ಪಾಟೀಲ್‌ ತಿಳಿಸಿದರು.

Advertisement

ನಗರದಲ್ಲಿ ಬುಧವಾರ ಕೌಶಲಾಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ ಐಟಿಐ ಪ್ರಾಂಶುಪಾಲರ ಕಾರ್ಯಾಗಾರ ಹಾಗೂ ತರಬೇತಿ ಮತ್ತು ಉದ್ಯೋಗಾವಕಾಶಗಳಿಗೆ ಸಂಬಂಧಿಸಿದಂತೆ ವಿವಿಧ ಕಾರ್ಪೋರೆಟ್‌ ಸಂಸ್ಥೆಗಳೊಂದಿಗೆ ಒಡಂಬಡಿಕೆ ಸಹಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರಕಾರದಿಂದ ಐಟಿಐಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ ಮೇಲ್ದರ್ಜೆಗೇರಿಸಲು ಹಲವು ರೀತಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದರ ಜತೆಗೆ ಸ್ಥಳೀಯವಾಗಿ ಆಯಾ ಜಿಲ್ಲೆಗಳಲ್ಲಿ ಉತ್ತಮ ಕಾರ್ಪೋರೆಟ್‌ ಸಂಸ್ಥೆಗಳೊಂದಿಗೆ ಐಟಿಐ ಪ್ರಾಂಶುಪಾಲರು ಚರ್ಚೆ ನಡೆಸಿ, ಸಿಎಸ್‌ಆರ್‌ ಅಡಿ ದತ್ತು ಪಡೆಯಲು ಮನವೊಲಿಸಬೇಕು ಅಥವಾ ಸರಕಾರದ ಗಮನ ಸೆಳೆದರೆ, ನಾವೂ ಆ ಕಂಪೆನಿಗಳಿಗೆ ಪತ್ರ ಬರೆದು ಸರಕಾರಿ ಐಟಿಐಗಳನ್ನು ದತ್ತು ಪಡೆಯುವಂತೆ ಕೋರಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next