ಎಚ್.ಡಿ.ಕೋಟೆ: ಕೊರೊನಾ ತಡೆಯುವ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಸುಮಾರು 10 ರೆಸಾರ್ಟ್‌ಗಳ ಪೈಕಿ 9 ರೆಸಾರ್ಟ್ ಬಂದ್ ಮಾಡಿದ್ದರೆ ಆರೆಂಜ್ ಕೌಂಟಿ ರೆಸಾರ್ಟ್ ಪ್ರವಾಸಿಗರಿಗೆ ಪ್ರವೇಶ ನೀಡುತ್ತಿರುವ ಕ್ರಮ ವಿರೋಧಿಸಿ ಗ್ರಾಮಸ್ಥರು ರೆಸಾರ್ಟ್‌ಗೆ ಮುತ್ತಿಗೆ ಹಾಕಿ ತೀವ್ರ ವಿರೋಧ ವ್ಯಕ್ತಪಡಿಸಿದರು.
ರೆಸಾರ್ಟ್ ಆಡಳಿತ ಮಂಡಳಿ ಅವರೊಡನೆ ಮಾತಿನ ಚಕಮಕಿ ನಡೆಸಿದ ಬೀರಂಬಳ್ಳಿ ಗ್ರಾಮಸ್ಥರು, ಮಹಾಮಾರಿ ಕೊರೊನಾ ತಡೆಗೆ ವಿಶ್ವ ಸೇರಿದಂತೆ ಇಡೀ ಭಾರತ ಮುಂದಾಗಿದೆ. ಹೀಗಿರುವಾಗ ತಾಲೂಕಿನ ಬಹುತೇಕ ಎಲ್ಲಾ ರೆಸಾರ್ಟ್‌ಗಳೂ ಶಾಸಕ ಅನಿಲ್ ಚಿಕ್ಕಮಾದು ಅವರು ಸಭೆಯೊಂದರಲ್ಲಿ ನೀಡಿದ ಆದೇಶದಂತೆ ಪ್ರವಾಸಿಗರಿಗೆ ರೆಸಾರ್ಟ್‌ಗೆ ಪ್ರವೇಶ ಬಂದ್ ಮಾಡಿವೆ.
ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ಎನ್.ಬೇಗೂರು ಸಮೀಪದ ಬೀರಂಬಳ್ಳಿ ಬಳಿ ಆರೆಂಜ್ ರೆಸಾರ್ಟ್ ಇದಾವುದನ್ನೂ ಲೆಕ್ಕಿಸದೆ ಪ್ರವಾಸಿಗರನ್ನು ರೆಸಾರ್ಟ್‌ಗೆ ದಾಖಲಿಸಿಕೊಳ್ಳುತ್ತಿದ್ದು ಸುಮಾರು 17ಮಂದಿ ಪ್ರವಾಸಿಗರಿಗೆ ಪ್ರವೇಶ ನೀಡಿತ್ತು ಅನ್ನುವ ಅಂಶ ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದು ಗ್ರಾಮದ ಪ್ರಮುಖರು ರೆಸಾರ್ಟ್ ಬಳಿ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಬೇಕು. ಈಗ ದಾಖಲಾಗಿರುವ ಪ್ರವಾಸಿಗರನ್ನು ಕೂಡಲೇ ಹೊರಗೆ ಕಳಿಸಬೇಕೆಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ದೌಡಾಯಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಭಾನುವಾರ ಮುಂಜಾನೆ ವೇಳೆಗೆ ಪ್ರವಾಸಿಗರನ್ನು ಕಳುಹಿಸುವುದರ ಜೊತೆಗೆ ಮತ್ತೆ ಪ್ರವೇಶಿಗರಿಗೆ ಪ್ರವೇಶ ನೀಡದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದಾಗ ಪ್ರತಿಭಟನೆ ವಾಪಸ್ ಪಡೆದರು.
ತಹಶೀಲ್ದಾರ್ ಆರ್.ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ರೆಸಾರ್ಟ್‌ನಲ್ಲಿ ಪ್ರವಾಸಿಗರಿಗೆ ಪ್ರವೇಶ ನೀಡದಂತೆ ಎಚ್ಚರಿಕೆ ನೀಡಿ ಮುಂದೆ ನಿಯಮ ಪಾಲಿಸದ ರೆಸಾರ್ಟ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡುತ್ತಿದ್ದೇವೆಂದರು.