Advertisement

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೂ ಅವಕಾಶ

01:16 PM Dec 21, 2021 | Team Udayavani |

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇದೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರನ್ನೂ ಸೇವೆಗೆ ನೇಮಕ ಮಾಡಿಕೊಳ್ಳುವುದಕ್ಕೆ ಈಗ ಅವಕಾಶ ಕಲ್ಪಿಸಲಾಗಿದೆ.

Advertisement

ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

” ಹೌದು , ಕರ್ನಾಟಕ ಪೊಲೀಸ್ ಇಲಾಖೆ ಎಲ್ಲರಿಗೂ ಸಮಾನ ಅವಕಾಶ ನೀಡುವ ವ್ಯವಸ್ಥೆಯಾಗಿದೆ. ಪುರುಷರು, ಮಹಿಳೆಯರ ಜತೆಗೆ ಲಿಂಗತ್ವ ಅಲ್ಪಸಂಖ್ಯಾತರನ್ನೂ (ಟ್ರಾನ್ಸ್ ಜಂಡರ್ ) ಗಳನ್ನೂ ನಾವು ಸಬ್ ಇನ್ ಸ್ಪೆಕ್ಟರ್ ಹುದ್ದೆಗೆ ನೇಮಕ‌ ಮಾಡಿಕೊಳ್ಳುತ್ತೇವೆ ” ಎಂದು ಸೂದ್ ಟ್ವೀಟ್ ಮಾಡಿದ್ದಾರೆ‌.

ಮಂಗಳ ಸುದ್ದಿ ಎಂದ ಮಂಜಮ್ಮ ಜೋಗತಿ

Advertisement

ಪದ್ಮಶ್ರೀ ಮಂಜಮ್ಮ ಜೋಗತಿ ಅವರು ಟ್ವೀಟ್ ಮಾಡಿ ಸಂಭ್ರಮ ವ್ಯಕ್ತ ಪಡಿಸಿದ್ದಾರೆ. ಮಂಗಳವಾರದ ಮಂಗಳ ಸುದ್ದಿ -ಸಮ ಸಮಾಜದ ಸುದ್ದಿ! ನಾನು ಮೊದಲಿಗೆ ಪೊಲೀಸರ ಕಂಡರೆ ಹೆದರಿ ಓಡಿ ಹೋಗುತ್ತಿದ್ದೆ, ಈಗ ನಮ್ಮ ಸಮುದಾಯದ ಜನ ಪೊಲೀಸ್ ಆಗುವ ಸಾಧ್ಯತೆ! ದೇಶ ಬದಲಾಗುತ್ತಿದೆ-ನಮ್ಮ ಒಗ್ಗಟ್ಟಿನಲ್ಲಿ ಸಮಾಜದ ಒಳಿತಿದೆ.ಸಂದೇಶ ಎಲ್ಲರಿಗೆ ತಲುಪಲಿ, ಎಂದು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next