ಪುಂಜಾಲಕಟ್ಟೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರಕೃತಿಯ ಜತೆ ಬೆರೆಯುವ ಅವಕಾಶ ಪಡೆದಿದ್ದು, ಹೆಚ್ಚು ಯಶಸ್ವಿಯಾಗಲು ಸಾಧ್ಯವಾಗುತ್ತದೆ.ಗ್ರಾಮೀಣ ಶಾಲೆಗಳಲ್ಲಿ ಉತ್ತಮ ಶಿಕ್ಷಣಕ್ಕೆ ಅವಕಾಶ ಲಭಿಸುತ್ತದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಹೇಳಿದರು.
ಬಂಟ್ವಾಳ ತಾಲೂಕು ಮಣಿನಾಲ್ಕೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 55 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡ ಹಾಗೂ ನವೀಕೃತ ಕೊಠಡಿ ಗಳನ್ನು ಉದ್ಘಾಟಿಸಿ ಮಾತನಾಡಿದರು.
ಮಣಿನಾಲ್ಕೂರು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಮೂವತ್ತು ವರ್ಷಗಳ ಬಳಿಕ ಹೊಸ ಕಟ್ಟಡದಲ್ಲಿ ಶಿಕ್ಷಣ ಪಡೆಯಲು ಅವಕಾಶ ಪಡೆದಿ ರುವುದು ಸಂತಸ ತಂದಿದೆ. ವಿದ್ಯಾ ರ್ಥಿಗಳು ಈ ಅವಕಾಶವನ್ನು ಸದು ಪಯೋಗಪಡಿಸಿಕೊಳ್ಳಬೇಕು. ಶಾಸಕನಾಗಿ ನಾನು ಈ ಭಾಗದ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ ಎಂಬ ಭರವಸೆ ನೀಡಿದ ಅವರು ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು ಕಾಲೇಜಿನ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಇದನ್ನೂ ಓದಿ:ಸಾಮಾನ್ಯ ಹೆರಿಗೆಗೂ ಸಿಜೇರಿಯನ್ ಮಾಡಿಸಲು ವೈದ್ಯರ ಸೂಚನೆ!
ಜಿ.ಪಂ.ಸದಸ್ಯ ಬಿ.ಪದ್ಮಶೇಖರ್ ಜೈನ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸುದರ್ಶನ್ ಬಜ, ಗ್ರಾ.ಪಂ. ಸದಸ್ಯರಾದ ರಾಮಕೃಷ್ಣ ಮಯ್ಯ, ಗೀತಾ, ಶಾಂತಪ್ಪ ಪೂಜಾರಿ , ಧನಂಜಯ ಶೆಟ್ಟಿ, ದಯಾನಂದ ನಾಯ್ಕ, ಧರಣೇಂದ್ರ ಜೈನ್, ಬಿ.ಎಂ. ಫಾರೂಕ್, ಚಿದಾನಂದ ರೈ, ಪುರುಷೋತ್ತಮ ಪೂಜಾರಿ, ಸರೋಜಿನಿ, ದಿನೇಶ್ ಗೌಡ, ಎಂಜಿನಿಯರ್ ಅಮೃತ್ ಕುಮಾರ್, ಜಯಪ್ರಕಾಶ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ರೆಜಿನಾ ಪಾçಸ್, ಸಮಿತಿ ಉಪಾಧ್ಯಕ್ಷ ಪೂವಪ್ಪ ಪೂಜಾರಿ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಸ್ಮಿತಾ ಸ್ವಾಗತಿಸಿದರು. ಉಪನ್ಯಾಸಕಿ ಅಮೃತಾ ವಂದಿಸಿದರು. ಉಪನ್ಯಾಸಕಿ ಶಾಲಿನಿ ನಿರೂಪಿಸಿದರು.