Advertisement

1 ಸಾವಿರ ಮಂದಿಗೆ ಅವಕಾಶ : ಸ್ವಿಜರ್ಲೆಂಡ್‌ನ‌ಲ್ಲಿ ಹೊಸ ನಿಯಮ ಮುಂದಿನ ವಾರದಿಂದ

11:06 AM Jul 03, 2020 | mahesh |

ಜ್ಯೂರಿಚ್‌: ಐರೋಪ್ಯ ಒಕ್ಕೂಟದ ದೇಶಗಳು ಲಾಕ್‌ಡೌನ್‌ ಸಡಿಲಗೊಳಿಸಿರುವಂತೆಯೇ, ಸ್ವಿಜರ್ಲೆಂಡ್‌ ಕೂಡ ನಿಯಮಗಳನ್ನು ಸಡಿಲಗೊಳಿಸಿದೆ. ಹೊಸ ಕ್ರಮವಾಗಿ 1 ಸಾವಿರ ಮಂದಿ ಸೇರುವ ಸಭೆ, ಪಾರ್ಟಿ ಇತ್ಯಾದಿಗಳಿಗೆ ಅನುವು ಮಾಡಿಕೊಟ್ಟಿದೆ. ಮುಂದಿನ ವಾರದಿಂದ ಹೊಸ ನಿಯಮ ಜಾರಿಗೆ ಬರಲಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ನಾಲ್ಕನೇ ಹಂತದ ಲಾಕ್‌ಡೌನ್‌ ಸಡಿಲಿಕೆ ನಡೆಯಲಿದೆ ಎಂದು ಅಲ್ಲಿನ ಸರಕಾರ ಹೇಳಿದೆ.

Advertisement

ನೆರೆಯ ಇಟಲಿಯಲ್ಲಿ ಕೋವಿಡ್‌ ತಲ್ಲಣವನ್ನೇ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಸ್ವಿಜರ್ಲೆಂಡ್‌ ಕೂಡ ಭೀತಿಗೆ ಒಳಗಾಗಿದ್ದು, ಹಲವು ಕ್ರಮಗಳನ್ನು ಕೈಗೊಂಡಿತ್ತು. ಸದ್ಯ ಹಲವು ನಿಯಮಗಳು ಸಡಿಲಗೊಂಡಿದ್ದರೂ ಸಾಮಾಜಿಕ ಅಂತರ ಮಾಸ್ಕ್ ಧರಿಸುವುದು ಇತ್ಯಾದಿಗಳ ಬಗ್ಗೆ ನಿಯಮಗಳು ಕಟ್ಟುನಿಟ್ಟಾಗಿವೆ. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಜನರು 1.5 ಮೀಟರ್‌ನಷ್ಟು ದೂರ ಇರುವುದು ಕಡ್ಡಾಯವಾಗಿದೆ. ಮುಂದಿನ ಸೋಮವಾರ ಇದು ಜಾರಿಗೆ ಬರಲಿದೆ. ರೆಸ್ಟೋರೆಂಟ್‌, ನೈಟ್‌ಕ್ಲಬ್‌ಗಳಿಗೆ ವಿಧಿಸಲಾಗಿದ್ದ ನೈಟ್‌ ಕರ್ಫ್ಯೂವನ್ನು ವಾಪಸ್‌ ಪಡೆಯಲಾಗಿದೆ.

ಆದರೆ ಇಲ್ಲೆಲ್ಲ ಜನರು ಅಂತರ ಕಾಪಾಡಿಕೊಳ್ಳುವಂತೆ ಕುಳಿತುಕೊಳ್ಳಬೇಕಾದ್ದು ಕಡ್ಡಾಯವಾಗಿದೆ. ಈ ಮೊದಲು 300 ಜನ ಸೇರಬಹುದು ಎಂಬ ನಿಯಮವಿದ್ದು ಅದನ್ನು ಸಡಿಲಗೊಳಿಸಲಾಗಿದೆ. 300 ಜನಕ್ಕಿಂತ ಹೆಚ್ಚಿದ್ದರೆ, ಕೋವಿಡ್‌ ಪ್ರಕರಣಗಳು ಕಂಡುಬಂದಲ್ಲಿ ಸೇರಿದ ಜನರ ವಿವರ ಸಂಗ್ರಹಿಸುವುದು, ಪತ್ತೆ ಹಚ್ಚುವುದು ಕಷ್ಟವಾದ್ದರಿಂದ ನಿಯಮ ಅಷ್ಟಕ್ಕೇ ಸೀಮಿತಗೊಳಿಸಲಾಗಿತ್ತು. ಹೆಚ್ಚು ಜನರು ಈಗ ಸೇರಬಹುದಾಗಿದ್ದರೂ ಎಲ್ಲ ಕಾರ್ಯಕ್ರಮಗಳಿಗೆ ಸರಕಾರದಿಂದ ಸೂಕ್ತ ಅನುಮತಿ ಪಡೆಯಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next