Advertisement

ಪಿಕ್‌ಅಪ್‌ ಪಾಯಿಂಟ್‌ಗಳಲ್ಲಿ ಅವಕಾಶ

06:12 AM Jun 09, 2020 | Lakshmi GovindaRaj |

ಬೆಂಗಳೂರು: ಲಾಕ್‌ಡೌನ್‌ ಸಂಪೂರ್ಣ ತೆರವಾದ ಬೆನ್ನಲ್ಲೇ ಕೆಎಸ್‌ಆರ್‌ಟಿಸಿಯು ಪಿಕ್‌ಅಪ್‌ ಪಾಯಿಂಟ್‌ಗಳಿಂದ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವ್ಯವಸ್ಥೆ ಮಾಡಿದೆ. ಇದುವರೆಗೆ ಕೇವಲ ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಪಿಕ್‌ಅಪ್‌  ಪಾಯಿಂಟ್‌ ಇತ್ತು. ಅಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಿ, ಬಸ್‌ ಏರಲು ಅವಕಾಶ ಕಲ್ಪಿಸಲಾಗಿತ್ತು.

Advertisement

ಈಗ ಲಾಕ್‌ಡೌನ್‌ ತೆರವಾಗಿದ್ದು, ಸಂಚರಿಸುವವರ ಸಂಖ್ಯೆ ಕೂಡ ಏರಿಕೆ ಆಗಲಿದೆ. ಪ್ರತಿಯೊಬ್ಬರೂ ಮೆಜೆಸ್ಟಿಕ್‌ಗೆ ಬರುವುದು  ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹಿಂದಿನ ವ್ಯವಸ್ಥೆಯಂತೆ ನಗರದ ಸುಮಾರು 15 ಕಡೆಗಳಲ್ಲಿ ಪಿಕ್‌ಅಪ್‌ ಪಾಯಿಂಟ್‌ಗಳನ್ನು ಕಲ್ಪಿಸಿದ್ದು, ಸ್ಥಳದಲ್ಲೇ ಸ್ಕ್ರೀನಿಂಗ್‌ ಕೂಡ ನಡೆಯಲಿದೆ ಎಂದು  ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

ರಿಯಾಯಿತಿ ಪ್ರಯಾಣ: ಬಸ್‌ಗಳಲ್ಲಿ ಈ ಹಿಂದಿನಂತೆ ರಿಯಾಯ್ತಿ ದರದಲ್ಲಿ ಸಂಚರಿಸಲು ಬಿಎಂಟಿಸಿ ಅವಕಾಶ ಕಲ್ಪಿಸಿದೆ. ಸರ್ಕಾರವು ಬಸ್‌ಗಳಲ್ಲಿ 65 ವರ್ಷ ಮೇಲ್ಪಟ್ಟವರಿಗೆ  ಅಗತ್ಯ ಸೇವೆಗಳಿಗೆ  ಓಡಾಡಲು ಅವಕಾಶ ನೀಡಿರುವುದರಿಂದ ಬಿಎಂಟಿಸಿಯು ಈ ಅವಕಾಶ ಕಲ್ಪಿಸಿದೆ. ಹಾಗಾಗಿ, ಎಂದಿನಂತೆ ಹಿರಿಯ ನಾಗರಿಕರಿಗೆ ಟಿಕೆಟ್‌ ದರದಲ್ಲಿ ರಿಯಾಯಿತಿ ಹಾಗೂ ಸಾಮಾನ್ಯ ಮಾಸಿಕ ಪಾಸಿನಲ್ಲಿ ರಿಯಾಯಿತಿ ಸೌಲಭ್ಯ ಒದಗಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next