Advertisement

ಯುವ ಗಾಯಕರಿಗೆ ವೇದಿಕೆ ಕಲ್ಪಸಿದ ಓರೆಂಜ್‌ ಮೀಡಿಯಾ

04:34 PM May 11, 2019 | Team Udayavani |

ವಿದ್ಯಾನಗರ :ಜಿಲ್ಲೆಯ ಹಿರಿಯ ಕಿರಿಯ ಗಾಯಕ ಗಾಯಕಿಯರನ್ನು ಹೊರಪ್ರಪಂಚಕ್ಕೆ ಪರಿಚಯಿಸುವ ಉದ್ಧೇಶದೊಂದಿಗೆ ಗಡಿನಾಡು ಕಾಸರಗೋಡಿನ ಓರೆಂಜ್‌ ಮೀಡಿಯಾ ಅವಕಾಶದ ಹೆಬ್ಟಾಗಿಲನ್ನು ತೆರೆಯುವ ಪ್ರಯತ್ನ ಮಾಡಿದೆ.

Advertisement

ಆಸಕ್ತ ಗಾಯಕರಿಗೆ ವೇದಿಕೆ ಕಲ್ಪಿಸುವ ಮತ್ತು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಸಲುವಾಗಿ ಕರೆಂದಕ್ಕಾಡು ವಿಕಾಸ ಭವನ ಸಭಾಂಗಣದಲ್ಲಿ ಆಯೋಜಿಸಲಾದ ಓರೆಂಜ್‌ ಮೀಡಿಯಾ ಸೊಲ್ಯೂಶನ್ಸ್‌ ಆಯೋಜಿಸಿದ ಮೆಗಾ ಮೀಡಿಯಾ ಎಂಟ್ರಿ ಓಡಿಶನ್‌ನಲ್ಲಿ ಜಿಲ್ಲೆಯ ಹಾಗೂ ಹೊರಜಿಲ್ಲೆಯ ಹಲವಾರುಗಾಯಕರು ಪಾಲ್ಗೊಂಡು ಮೊದಲನೇ ಸುತ್ತಿನ ಸ್ಪರ್ಧೆ ಯಶಸ್ವಿಯಾಗುವಂತೆ ಮಾಡಿದರು.

ಏಳರಿಂದ ಹನ್ನೆರಡು ವರ್ಷ, ಹನ್ನೆರಡರಿಂದ ಹದಿನೆಂಟು ವರ್ಷ ಹಾಗೂ ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟವರು ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಪ್ರಸ್ತುತ ಸ್ಪರ್ಧೆಯಲ್ಲಿ ಹೆಸರಾಂತ ಗಾಯಕರಾದ ಸಾರಮತಿ ಸ್ಕೂಲ್‌ ಓಫ್‌ ಮ್ಯೂಸಿಕ್‌ನ ಶಾಜಿ ಕುಮಾರ್‌, ಸಂಗೀತ ನಿರ್ದೇಶಕ ಹಾಗೂ ಗಾಯಕ ಹರಿಕುಮಾರ್‌, ಸಂಗೀತ ನಿರ್ದೇಶಕ ಹರಿಪ್ರಸಾದ್‌ ಹಾಗೂ ನಾದಬ್ರಹ್ಮ ಸಂಗೀತ ಶಾಲೆಯ ನಿರ್ದೇಶಕಿ ಸೌಮ್ಯ.ಕೆ.ಎಸ್‌ ತೀರ್ಪುಗಾರರಾಗಿ ಭಾಗವಹಿಸಿದರು.


ಜನಸೇವಾ ಹೆಲ್ತ್‌ ಸರ್ವಿಸಸ್‌ ಲಿಮಿಟೆಡ್‌ ಕಾಸರಗೋಡು ಇದರ ಸಹಸಂಸ್ಥೆಯಾದ ಬ್ಲೇಕ್‌ ಆಂಡ್‌ ವೈಟ್‌ನ ಚೇರ್ಮನ್ ಟಿ.ವಿ.ಗಂಗಾಧರನ್‌, ಓರೆಂಜ್‌ ಮೀಡಿಯಾದ ನಿರ್ದೇಶಕರಾದ ಪ್ರಶಾಂತ್‌ ಸಂಗೀತ ನಿರ್ದೇಶಕ ನಾಗಾರ್ಜುನ ಮಂಗಲ್ಪಾಡಿ, ಫರೋಝ್ ವೇವ್ಸ್‌ ರೆಕೋರ್ಡಿಂಗ್‌ ಸ್ಟುಡಿಯೋ, ಜಯ ಕುಮಾರ್‌, ಗಡಿನಾಡ ಸಾಹಿತ್ಯ ಸಾಂಸ್ಕೃತ ಆಕಾಡೆಮಿಯ ಕಾರ್ಯದರ್ಶಿ ಆಖೀಲೇಶ್‌ ನಗುಮುಗಂ, ಉದಯಕುಮಾರ್‌ ಚೈಲ್ಡ್ ಲೈನ್ ಕಾಸರಗೋಡು ನೇತೃತ್ವ ವಹಿಸಿದರು.ಗಡಿನಾಡ ಕಮೆಂಟೇಟರ್ ಎಂಬ ಖ್ಯಾತಿಯ ದಿವಾಕರ್ ಉಪ್ಪಳ ಕಾರ್ಯಕ್ರಮ ನಿರ್ವಹಿಸಿದರು

Advertisement

Udayavani is now on Telegram. Click here to join our channel and stay updated with the latest news.

Next