Advertisement
ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆಗಾಗಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ಬಸವನಬಾಗೇವಾಡಿ, ಬಬಲೇಶ್ವರ ತಾಲೂಕಿನಲ್ಲಿ ಸಂಚಾರದ ಸಂದರ್ಭದಲ್ಲಿ ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದ ಅವರು, ಜಾತ್ಯತೀತ ತತ್ವವೇ ಆಸ್ತಿ ಎಂಬಂತೆ ವರ್ತಿಸುವ ನೀವು ಜಯಪ್ರಕಾಶ ನಾರಾಯಣ ಅವರ ಸಿದ್ದಾಂತಕ್ಕೆ ಬದ್ಧರಾಗಿದ್ದರೆ ಮುಖ್ಯಮಂತ್ರಿ ಅಧಿಕಾರದ ಆಸೆಗಾಗಿ ಮಾತೃಪಕ್ಷ ಜೆಡಿಎಸ್ ತೊರೆದು ಹೋಗುತ್ತಿರಲಿಲ್ಲ. ಅವಕಾಶವಾದಿ ರಾಜಕಾರಣ ಮಾಡುವ ನಿಮ್ಮಿಂದ ನಾನು ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
Related Articles
Advertisement
ನನ್ನ ನೇತೃತ್ವದ ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾದದ್ದು ಹೇಗೆ, ನನ್ನ ಸರ್ಕಾರವನ್ನು ಪತನ ಮಾಡುವಲ್ಲಿ ನಿಮ್ಮ ಕಾಣಿಕೆ ಏನಿದೆ. ಬಿಜೆಪಿ ನಾಯಕರ ಜೊತೆ ಹೇಗೆಲ್ಲಾ ಕುಮ್ಮಕ್ಕು ನಡೆಸಿದಿರಿ, ಯಾರನ್ನೆಲ್ಲ ಎಲ್ಲೆಲ್ಲಿಗೆ ಕಲಿಸಿದಿರಿ ಎನ್ನುವುದು ನನಗೆ ಮಾಹಿತಿ ಇದೆ. ಇದನ್ನು ಜನತೆಯ ಮುಂದಿಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಭ್ರಷ್ಟಾಚಾರದಲ್ಲಿ ಬಿಜೆಪಿ ಪಕ್ಷದವರಿಗಿಂತ ನಿವೇನೂ ಕಮ್ಮಿ ಇಲ್ಲ. ನೀವು ಬೇಕಾದಷ್ಟು ಅಕ್ರಮಗಳನ್ನು ನಡೆಸಿರುವ ನಿಮಗೆ ನಾನು ಎತ್ತಿದ ಪ್ರಶ್ನೆಗಳಿಗೆ ಈವರೆಗೆ ಉತ್ತರ ಕೊಡುವ ಶಕ್ತಿಯೂ ನಿಮಗೆ ಇಲ್ಲವಾಗಿದೆ ಎಂದು ಟೀಕೆಗಳ ಸುರಿಮಳ ಗರೆದರು.
ನಾನು ಹೋಟೆಲ್‍ನಲ್ಲಿ ಇದ್ದೆ ಎಂದು ಹೇಳುವ ನೀವು, ನಿಮ್ಮ ಸರಕಾರ ಅಧಿಕಾರ ಕಳೆದಕೊಂಡ ತಕ್ಷಣ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನೀವು ಕೂಡಲೇ ಸರಕಾರಿ ಮನೆ ಖಾಲಿ ಮಾಡಿಕೊಡಬೇಕಿತ್ತು. ನಾನು ಹೋಟೆಲ್‍ನಲ್ಲಿ ಇದ್ದರೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನಿಮ್ಮ ಪಕ್ಷ ಶಾಸಕರಿಗೆ ಸಾವಿರಾರು ಕೋಟಿ ರೂ. ಅನುದಾನ ಎಲ್ಲಿಂದ ಬಮತು ಎಂದು ಪ್ರಶ್ನಿಸಿದರು.
ಪಂಚರತ್ನ ರಥಯಾತ್ರೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರೇ ಹಾಗಾದರೆ ನೀವು ನಡೆಸಿರುವ ಯಾತ್ರೆ ಯಾವುದು, ನಿಮ್ಮದು ಪ್ರಜಾಧ್ವನಿ ಅಲ್ಲ, ಅಧಿಕಾರಕ್ಕಾಗಿ ನಡೆಸುತ್ತಿರುವ ಧ್ವನಿ ಎಂದು ಚಾಟಿ ಬೀಸಿದರು.
ಯಶಸ್ವಿ 5ನೇ ದಿನದಲ್ಲಿ ಮುನ್ನಡೆಯುತ್ತಿರುವ ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಜನತೆಯಿಮದ ಸಿಗುತ್ತಿರುವ ಬೆಂಬಲ ನಿಮ್ಮ ನಿದ್ದೆಗೆಡಿಸಿದೆ. ನಮಗೆ ಸಿಗುತ್ತಿರುವ ಜನಬೆಂಬಲವನ್ನು ಸಹಿಸಲಾಗದೇ ಟೀಕೆ ಮಾಡುವ ನೀವು, ಇನ್ನಾದರೂ ನಮ್ಮ ಬಗ್ಗೆ ಹಗರುವಾಗಿ ಮಾತನಾಡುವುದನ್ನು ನಿಲ್ಲಿಸಿ ಎಂದು ಕುಟುಕಿದರು.