ಸುವರ್ಣ ವಿಧಾನಸೌಧ: ಹಿಂದಿ ಭಾಷೆಯನ್ನು ವಿರೋಧಿಸುವವರು ಉರ್ದು ಭಾಷೆಯಲ್ಲಿ ಬರೆದರೆ ಯಾರೂ ಪ್ರಶ್ನೆ ಮಾಡುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ವಿಧಾನಸಭೆಯಲ್ಲಿ ರಾಯಣ್ಣನ ಪ್ರತಿಮೆ, ಕನ್ನಡ ಧ್ವಜ ಸುಟ್ಟ ಪ್ರಕರಣದ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ದೇಶದಲ್ಲಿ ಶಿವಾಜಿ ಮಹಾರಾಜರು ಹುಟ್ಟದೇ ಹೋಗಿದ್ದರೆ ಎಲ್ಲರದೂ ಸುನಿ¤ ಆಗುತ್ತಿತ್ತು ಎಂದು ಕವಿಯೊಬ್ಬರು ಹೇಳಿದ್ದರು. ನಮ್ಮಲ್ಲಿ ರಾಜ್ಯ ರಾಜ್ಯಗಳ ನಡುವೆ ಗಲಾಟೆ ನಡೆಯುವಂತೆ ಷಡ್ಯಂತ್ರ ರೂಪಿಸುವಂತಹ ದೇಶದ್ರೋಹದ ಕೆಲಸಗಳು ನಡೆಯುತ್ತಿವೆ. ಪಾಕಿಸ್ತಾನ ಧ್ವಜ ಹಾರಿಸಿ ಸಂಭ್ರಮಿಸುತ್ತಾರೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಗಡಿ ಪಾರು ಮಾಡಬೇಕು ಎಂದು ಹೇಳಿದರು.
ಒಂದು ಸಮುದಾಯವನ್ನು ಗುರಿ ಇಟ್ಟು ಮಾತನಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಸದಸ್ಯರಾದ ರಿಜ್ವಾನ್ ಅರ್ಷದ್, ಎನ್.ಎ.ಹ್ಯಾರಿಸ್, ಯು.ಟಿ.ಖಾದರ್ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದರು. ಯತ್ನಾಳ್ ಸಂವಿಧಾನ ಬಾಹಿರವಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ:ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ನೇಮಕ ಪ್ರಶ್ನಿಸಿ ಅರ್ಜಿ : ಹೈಕೋರ್ಟ್ ನೋಟಿಸ್
ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಜೈ ಶ್ರಿರಾಮ್ ಎಂದು ಘೋಷಣೆ ಕೂಗಿದರು. ನಾನು ಯಾವುದೇ ಸಂವಿಧಾನ ಬಾಹಿರ ಮಾತನಾಡಿಲ್ಲ. ಯಾವುದೇ ಅಸಾಂವಿಧಾನಿಕ ಪದ ಬಳಸಿಲ್ಲ. ನೀವು ಪಾಕಿಸ್ತಾನದ ಏಜೆಂಟರು ಅಂತ ಕಾಂಗ್ರೆಸ್ ಸದಸ್ಯರಿಗೆ ಯತ್ನಾಳ್ ತಿರುಗೇಟು ನೀಡಿದರು.