Advertisement

ಒಪ್ಪೋ ಎ54: ಒಪ್ಪೋ ಬಿಡುಗಡೆ ಮಾಡಿದ ಹೊಸ ಮೊಬೈಲ್‍ ಹೇಗಿದೆ? ದರ ಎಷ್ಟು?

05:39 PM Jun 15, 2021 | Team Udayavani |

ಒಪ್ಪೋ ಕಂಪೆನಿ ಮಧ್ಯಮ ದರ್ಜೆಯಲ್ಲಿ ಹೊರತಂದಿರುವ ಇತ್ತೀಚಿನ ಮೊಬೈಲ್‍ ಒಪ್ಪೋ ಎ54. ಮೊಬೈಲ್‍ ಪೋನ್‍ ಮಾರುಕಟ್ಟೆಯಲ್ಲಿ ಸ್ಪರ್ಧೆ ಜೋರಾಗಿದೆ. ಹೀಗಾಗಿ ಗ್ರಾಹಕ ನೀಡುವ ದರಕ್ಕೆ ಸಮಾಧಾನಕರವಾಗುವ ಸ್ಪೆಸಿಫಿಕೇಷನ್‍ ಗಳುಳ್ಳ ಮೊಬೈಲ್‍ ನೀಡಬೇಕೆಂಬುದು ಕಂಪೆನಿಗಳಿಗೆ ಅರ್ಥವಾಗತೊಡಗಿದೆ. ಅದನ್ನು ಒಪ್ಪೋ ಕೂಡ ಒಪ್ಪಿಕೊಂಡಂತಿದೆ. ಒಪ್ಪೋ ಎ54  ಮೊಬೈಲ್‍ ವಾಸ್ತವ ಬಳಕೆಯಲ್ಲಿ ಹೇಗಿದೆ ಎಂಬುದರ ಒಂದು ನೋಟ ಇಲ್ಲಿದೆ.

Advertisement

ಒಪ್ಪೋ-ವಿವೋ ಒಂದೇ ಕಂಪೆನಿಯ ಅಣ್ಣತಮ್ಮಂದಿರು. ಈ ಬ್ರಾಂಡ್‍ ಮೊಬೈಲ್‍ಗಳನ್ನು ಬಾಕ್ಸ್ ನಿಂದ ತೆರೆದ ತಕ್ಷಣ ಅವುಗಳ ವಿನ್ಯಾಸ ಗಮನ ಸೆಳೆಯದಿರುವುದಿಲ್ಲ. ಅದೇ ರೀತಿ ಒಪ್ಪೋ ಎ54 ಕೂಡ ಇದೆ. ಮೊಬೈಲ್‍ ಹೆಚ್ಚು ದಪ್ಪ ಅನಿಸುವುದಿಲ್ಲ. ಹೆಚ್ಚು ತೂಕವೂ ಇಲ್ಲ.

ಮೊಬೈಲ್‍ನ ಮೇಲ್ಭಾಗ ಯಾವುದೇ ಪೋರ್ಟ್ ಇಲ್ಲ.  ಬಲಗಡೆ ಆನ್‍ ಆಫ್‍ ಬಟನ್‍ ಇದೆ. ಇದೇ ಬಟನ್‍ ಫಿಂಗರ್‍ ಪ್ರಿಂಟ್‍ ಸ್ಕ್ಯಾನರ್‍ ಆಗಿಯೂ ಕೆಲಸ ಮಾಡುತ್ತದೆ. ಎಡಗಡೆ ಸಿಮ್‍ ಕಾರ್ಡ್‍ ಟ್ರೇ, ಅದರ ಕೆಳಗೆ ಧ್ವನಿ ಹೆಚ್ಚು ಕಡಿಮೆ ಮಾಡುವ ಬಟನ್‍ಗಳಿವೆ. ಕೆಳಗೆ 3.5 ಎಂ.ಎಂ. ಆಡಿಯೋ ಜಾಕ್‍, ಟೈಪ್‍ ಸಿ ಆಡಿಯೋ ಪೋರ್ಟ್, ಸ್ಪೀಕರ್‍ ಇದೆ.

ಪರದೆಯ ಮೇಲ್ಭಾಗದ ಎಡತುದಿಯಲ್ಲಿ ಸೆಲ್ಫೀ ಕ್ಯಾಮರಾ ಇದೆ. ಹಿಂಭಾಗ ಮೂರು ಕ್ಯಾಮರಾ ಲೆನ್ಸ್ ಉಬ್ಬಿದ ಆಕಾರದಲ್ಲಿದೆ. ಮೊಬೈಲ್‍ನ ಹಿಂಬದಿ ಪ್ಯಾನಲ್‍ ಗ್ಲಾಸ್ಟಿಕ್‍ (ಪ್ಲಾಸ್ಟಿಕ್‍ ಆದರೂ ಗಾಜಿನಂತೆ ಕಾಣುವ) ಆಗಿದೆ. ಮೊಬೈಲ್‍ನ ಫ್ರೇಂ ಅಲ್ಯೂಮಿನಿಯಂನದ್ದಾಗಿದೆ. ಒಟ್ಟಾರೆ ಈ ವಿನ್ಯಾಸ ಗಮನ ಸೆಳೆಯುತ್ತದೆ.

Advertisement

ಇದನ್ನೂ ಓದಿ:ಕೇಂದ್ರಕ್ಕೆ ಕೋವ್ಯಾಕ್ಸಿನ್ ನನ್ನು 150 ರೂ.ನಂತೆ ನೀಡಲು ಸಾಧ್ಯವಾಗುತ್ತಿಲ್ಲ: ಭಾರತ್ ಬಯೋಟೆಕ್

ಪರದೆ: ಪರದೆಯ ಅಳತೆ 6.51 ಇಂಚಿದೆ. 720*1600 ಎಚ್‍ಡಿ ಪ್ಲಸ್‍ ಡಿಸ್‍ಪ್ಲೇ ಇದೆ. ಎಲ್‍ಸಿಡಿ ಪ್ಯಾನೆಲ್‍ ಇದ್ದು, ಪರದೆಯ ರಿಫ್ರೆಶ್‍ ರೇಟ್‍ 60 ಹರ್ಟ್ಜ್ ಇದೆ. ಪರದೆಯ ಗುಣಮಟ್ಟ ಪರವಾಗಿಲ್ಲ ಎನ್ನುವಂತಿದೆ.

ಕಾರ್ಯಾಚರಣೆ: ಇದು ಮೀಡಿಯಾಟೆಕ್‍ ಹೀಲಿಯೋ ಪಿ35 ಪ್ರೊಸೆಸರ್ (ಎಂಟು ಕೋರ್ ಗಳು) ಹೊಂದಿದೆ. ಇದು ಸ್ನಾಪ್‍ಡ್ರಾಗನ್‍ 625 ಪ್ರೊಸೆಸರ್‍ ಗೆ ಸಮನಾದ ಪ್ರೊಸೆಸರ್‍. ಅಂಡ್ರಾಯ್ಡ್ 10 ಆವೃತ್ತಿ ಹೊಂದಿದೆ. ಮುಂದಿನ ಅಪ್‍ ಡೇಟ್‍ ಗಳಲ್ಲಿ ಆಂಡ್ರಾಯ್ಡ್ 11 ದೊರಕಲಿದೆ. ಇದಕ್ಕೆ ಕಲರ್‍ ಓಎಸ್‍ ಹೊಂದಿಸಲಾಗಿದೆ. ಟಿಪಿಕಲ್‍ ಒಪ್ಪೋ, ವಿವೋ ಫೋನಿನ ಇಂಟರ್‍ ಫೇಸ್‍ ಇದೆ. ಮಧ್ಯಮ ದರ್ಜೆಯ ಫೋನಿನಲ್ಲಿರಬೇಕಾದ ವೇಗದಲ್ಲಿ ಫೋನ್‍ ಕೆಲಸ ಮಾಡುತ್ತದೆ. ಸಾಧಾರಣ ಬಳಕೆದಾರರಿಗೆ ಈ ವೇಗ ಸಾಕು.

ಕ್ಯಾಮರಾ: ಇದರಲ್ಲಿ 13 ಮೆಗಾ ಪಿಕ್ಸಲ್‍ ಪ್ರಾಥಮಿಕ ಸೆನ್ಸರ್, 2 ಮೆಗಾ ಪಿಕ್ಸಲ್‍ ಮತ್ತು 2 ಮೆಗಾ ಪಿಕ್ಸಲ್‍ ಹೆಚ್ಚುವರಿ ಲೆನ್ಸ್ ಗಳಿವೆ. 16 ಮೆಗಾಪಿಕ್ಸಲ್‍ ಸೆಲ್ಫಿ ಕ್ಯಾಮರಾ ಇದೆ. ಆರಂಭಿಕ ಮಧ್ಯಮ ದರ್ಜೆಯ ಫೋನ್‍ ಗಳಲ್ಲಿ ಕ್ಯಾಮರಾ ಗುಣಮಟ್ಟವನ್ನು ಹೆಚ್ಚು ನಿರೀಕ್ಷಿಸಲು ಸಾಧ್ಯವಿಲ್ಲ. ಇದರ ಸೆಲ್ಫೀ ಕ್ಯಾಮರಾ ಮುಖವನ್ನು ಇರುವುದಕ್ಕಿಂತ ನಯವಾಗಿ ತೋರಿಸುತ್ತದೆ!

ಬ್ಯಾಟರಿ: 5000 ಎಂಎಎಚ್‍ ಬ್ಯಾಟರಿ ಹೊಂದಿದೆ. ಒಂದೂವರೆ ದಿನದ ಬ್ಯಾಟರಿ ಬಾಳಿಕೆಗೆ ಅಡ್ಡಿಯೇನಿಲ್ಲ. ಇದಕ್ಕೆ 18 ವ್ಯಾಟ್ಸ್ ವೇಗದ ಚಾರ್ಜರ್‍ ನೀಡಿರುವುದು ಬೋನಸ್‍.

ದರ: 4 ಜಿಬಿ ರ್ಯಾಮ್‍, 64 ಜಿಬಿ ಸಂಗ್ರಹ= 13,490 ರೂ.

4 ಜಿಬಿ ರ್ಯಾಮ್‍, 128 ಜಿಬಿ ಸಂಗ್ರಹ= 14,490 ರೂ.

6 ಜಿಬಿ ರ್ಯಾಮ್‍, 128 ಜಿಬಿ ಸಂಗ್ರಹ= 15,990 ರೂ.

-ಕೆ.ಎಸ್‍. ಬನಶಂಕರ  ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next