Advertisement
ಮೊಹಮ್ಮದ್ ಇಕ್ಬಾಲ್: ಈ ವರ್ಷ ಶಾಲೆ ಆರಂಭ ಮಾಡುದು ಬೇಡ. ಮಕ್ಕಳ ಆರೋಗ್ಯ ಮೊದಲು.
Related Articles
Advertisement
ಅರುಣಾ ಎನ್ ಗೌಡ: ಕರ್ಮ! ಮಕ್ಕಳಿಗೆ ಸಣ್ಣ ಶೀತ ಬಂದರೆನೇ ಸುಧಾರಿಸಲು 15 ದಿನ ಬೇಕು ಮೆಡಿಸನ್ ಇದ್ದು. ಇನ್ನು ಕೋವಿಡ್-19 ಮದ್ದೇ ಇಲ್ಲ ಪಾಪ ಆ ಏಳೆಯ ಮನಸ್ಸಿನ ಮಕ್ಕಳು ಹೇಗೆ ತಡೆದುಕೊಂಡಾವು.
ರವಿ ಅಯ್ಯರ್: ನಾವು ಫೀಸ್ ಕಟ್ಟಿರುವ ಶಾಲೆ ಮಕ್ಕಳ ಜವಾಬ್ದಾರಿ ಹೊತ್ತು ಏನಾದರೂ ಹೆಚ್ಚು ಕಮ್ಮಿಯಾದರೆ ಶಾಲೆಯ ಆಡಳಿತ ಮಂಡಳಿ ಪೂರ್ಣ ಜವಾಬ್ದಾರಿ ವಹಿಸಿ ಕೊಳ್ಳುವುದಾದರೆ ಗ್ಯಾರೆಂಟಿ ಕಳಿಸ್ತೀವಿ ಏನಾದರೂ ಹೆಚ್ಚು ಕಮ್ಮಿಯಾದರೆ ಸರಕಾರಕ್ಕೆ ಮನವಿ ಸಲ್ಲಿಸಲ್ಲ, ಖಾಸಗಿ ಆಡಳಿತ ಮಂಡಳಿ ಕೊಡಬೇಕು. ಇದಕ್ಕೆ ಒಪ್ಪಿಗೆ ಎಂದು ಮುಚ್ಚಳಿಕೆ ಪತ್ರ ಬರೆದು ಕೊಡಬೇಕು.
ಗೀತಾಕೃಷ್ಣ ನೆಟ್ಲ: ಈ ನಿರ್ಧಾರ ಸರಿಯಲ್ಲ. ಲಸಿಕೆ ಔಷಧಿಗಳಿಲ್ಲದ ಮೇಲೆ ಶಾಲೆ ತೆರೆಯಲು ಅವಸರ ಸಲ್ಲದು. ಕೋವಿಡ್-19 ಹರಡುವ ಪರಿಯೂ ಗುಪ್ತವಾಗಿದ್ದು ಯಾರಿಂದ ಎಲ್ಲಿಂದ ಹೇಗೆ ಬಂತು ಅಥವಾ ಬರುವುದು ಎಂಬುದೇ ಸ್ಪಷ್ಟವಿಲ್ಲದ ಮೇಲೆ ಮಕ್ಕಳ ಜೀವ ರಕ್ಷಕರು ಯಾರು? ಕೊರೊನದ ಒಂದೂ ಪ್ರಕರಣ ಇಲ್ಲವೆಂದು ದೃಢವಾದ ಮೇಲೆ ಶಾಲೆ ತೆರೆಯುವುದು ಸೂಕ್ತ.
ರವೀಶ ರವೀಶ: ನನ್ನ ಪ್ರಕಾರ ಈಗಲೇ ಶಾಲೆ ತೆರೆಯುವುದು ಬೇಡ ಏಕೆಂದರೆ ಮೊದಲು ಹತ್ತನೇ ತರಗತಿ ಹಾಗೂ ಪಿಯು ಪರೀಕ್ಷೆಗಳನ್ನು ನಡೆಸಿ ಇನ್ನೂ ಎರಡು ತಿಂಗಳ ನಂತರ ಶಾಲೆಯನ್ನು ತೆರೆಯಿರಿ ಎರಡು ತಿಂಗಳ ನಂತರವೂ ಕೋವಿಡ್-19 ಹತೋಟಿಗೆ ಬರದಿದ್ದರೆ ? ಮತ್ತೆ ಒಂದು ತಿಂಗಳು ಮುಂದೂಡಿ ಈ ರಜೆಗಳನ್ನು ಮುಂದಿನ ರಜಾದಿನಗಳು ಹಾಗೂ ಹಬ್ಬ ಹರಿದಿನಗಳು ದಸರಾ ರಜೆ ಕೊಡುವ ದಿನಗಳು ಹಾಗೂ ಮುಂದಿನ ಬೇಸಿಗೆ ಬರುವ ರಜೆಗಳು ಕಡಿತ ಮಾಡಿ ಅನ್ನುವ ಸಲಹೆ ನನ್ನದು