Advertisement

ಆಪರೇಷನ್ ಮಂಗಳೂರು ಜೈಲ್‌: ಗಾಂಜಾ, ಹುಕ್ಕಾ, ಮೊಬೈಲ್‌

11:33 AM Sep 19, 2017 | |

ಮಂಗಳೂರು : ಅಕ್ರಮಗಳ ವಾಸನೆ ಬಂದ ಹಿನ್ನಲೆಯಲ್ಲಿ  ಮಂಗಳವಾರ ಬೆಳ್ಳಂಬೆಳಗ್ಗೆ  ಡಿಸಿಪಿ ಹನುಮಂತರಾಯ ನೇತೃತ್ವದಲ್ಲಿ ಜಿಲ್ಲಾ ಕಾರಾಗೃಹದ ಮೇಲೆ ಭಾರಿ ಸಂಖ್ಯೆಯ ಪೊಲೀಸರು ದಾಳಿ ನಡೆಸಿ ವ್ಯಾಪಕ ಪರಿಶೀಲನೆ ನಡೆಸುತ್ತಿದ್ದಾರೆ. 

Advertisement

ದಾಳಿ ವೇಳೆ ಕೈದಿಗಳ ಬಳಿ 2 ಮೊಬೈಲ್, ಗಾಂಜಾ ಪ್ಯಾಕೇಟ್, ಪ್ಲಾಸ್ಟಿಕ್ ಬಾಟಲ್ ನಿಂದ ತಯಾರಿಸಿದ ಹುಕ್ಕಾ ರೀತಿಯ ವಸ್ತು, ಪಂಚ್, ರಾಡ್ ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. 

ಜೈಲಿಗೆ ಮಾರಕವಸ್ತುಗಳು ಪೂರೈಕೆಯಾಗಿವೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಆದರೆ,ಈ ದಾಳಿಯನ್ನು ರೂಟಿನ್ ಚೆಕ್ ಅಪ್ ಎಂದು  ಅಧಿಕಾರಿಗಳು ಹೇಳಿಕೊಂಡಿದ್ದಾರೆ. 

ಜೈಲಿನಲ್ಲಿ ಲಭ್ಯವಾದ ಮಾದಕವಸ್ತುಗಳ ಬಗ್ಗೆ ತನಿಖೆ ನಡೆಯಲಿದ್ದು, ಪ್ರತಿಯೊಂದು ಮಾಹಿತಿ‌ ಕಲೆ ಹಾಕಲು  ಪೊಲೀಸರು ನಿರ್ಧರಿಸಿದ್ದಾರೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next