Advertisement
ಉಕ್ರೇನ್‌ನ ನೆರೆರಾಷ್ಟ್ರವಾದ ಹಂಗೇರಿಯ ಬುಡಾ ಪೆಸ್ಟ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಸ್ಥಾಪಿ ಸಿರುವ ನಿಯಂತ್ರಣ ಕೊಠಡಿಯ ಚಿತ್ರಣವಿದು.
ಬೆಂಗಳೂರು: ಉಕ್ರೇನ್‌ನಿಂದ ಬರುವ ರಾಜ್ಯದ ವಿದ್ಯಾರ್ಥಿಗಳಿಗೆ ಸಕಲ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವೂ ಅನೇಕ ಕ್ರಮಗಳನ್ನು ಕೈಗೊಂಡಿದೆ. ದಿಲ್ಲಿ ಹಾಗೂ ಮುಂಬಯಿಯಲ್ಲಿ ಕರ್ನಾಟಕ ಭವನದ ಸ್ಥಳೀಯ ಆಯುಕ್ತರ ನೇತೃತ್ವದಲ್ಲಿ ವಿದ್ಯಾರ್ಥಿ ಗಳನ್ನು ಬರಮಾಡಿಕೊಳ್ಳಲಾಗುತ್ತಿದೆ. ರಾಜ್ಯ ಸರಕಾರ ಮನೋಜ್ ರಂಜನ್ ನೇತೃತ್ವದಲ್ಲಿ ವಿಶೇಷ ಆಯುಕ್ತ ರನ್ನು ನೇಮಿಸಿದೆ. ಅವರ ಮಾರ್ಗದರ್ಶನದಲ್ಲಿ ದಿಲ್ಲಿ, ಮುಂಬಯಿ ವಿಮಾನ ನಿಲ್ದಾಣದಲ್ಲಿ ಇಬ್ಬರು ಕರ್ನಾಟಕದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಉಕ್ರೇನ್‌ನಿಂದ ಯಾವ ವಿಮಾನದಲ್ಲಿ ಎಷ್ಟು ಕರ್ನಾಟಕದ ವಿದ್ಯಾರ್ಥಿಗಳು, ಜನರು ಆಗಮಿಸುತ್ತಾರೆ ಎನ್ನುವುದನ್ನು ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಸುರಕ್ಷಿತವಾಗಿ ಅವರ ಊರುಗಳಿಗೆ ತಲುಪಿ ಸುವ ಕೆಲಸವನ್ನು ಮಾಡುತ್ತಿದ್ದಾರೆ. ಫೆ.27ರಿಂದ ಮಾ.6ರ ವರೆಗೆ ರಾಜ್ಯದ 448 ವಿದ್ಯಾರ್ಥಿಗಳು ತವರಿಗೆ ಮರಳಿದ್ದಾರೆ.
Related Articles
01 ಕಂಟ್ರೋಲ್ ರೂಂನಲ್ಲಿ ಕಮಾಂಡ್ ಸೆಂಟರ್ ಇದೆ. ಎಷ್ಟು ಮಂದಿ ಭಾರತೀಯರು ಗಡಿ ದಾಟಿ ಬಂದರು? ಇವರಲ್ಲಿ ಎಷ್ಟು ಜನರು ಬುಡಾಪೆಸ್ಟ್‌ಗೆ ಬರುತ್ತಾರೆ ಎಂಬ ಮಾಹಿತಿಯನ್ನು ಗಡಿಯಲ್ಲಿರುವ ತಂಡವು ಕಮಾಂಡ್ ಸೆಂಟರ್‌ಗೆ ರವಾನಿಸುತ್ತದೆ.
02 ತಂಡವನ್ನು ಸಾರಿಗೆ, ವಸತಿ, ಆಹಾರ ಮತ್ತು ವಿಮಾನ ಎಂಬ 4 ಭಾಗಗಳಾಗಿ ವಿಂಗಡಿಸಲಾಗಿದೆ. ಉಕ್ರೇನ್‌ನಿಂದ ಜನರು ರಸ್ತೆ, ರೈಲು, ಖಾಸಗಿ ವಾಹನಗಳು ಹಾಗೂ ಕಾಲ್ನಡಿಗೆಯಲ್ಲೂ ಬರುತ್ತಿದ್ದಾರೆ. ಗಡಿ ತಲುಪಿದ ಕೂಡಲೇ ಅಲ್ಲಿಂದ ಅವರನ್ನು ವಸತಿ ವ್ಯವಸ್ಥೆಯಿರುವ ಕಡೆಗೆ ಕಳುಹಿಸುವ ಕೆಲಸವನ್ನು ಸಾರಿಗೆ ತಂಡ ಮಾಡುತ್ತದೆ.
03 2ನೇ ತಂಡವು, ಗಡಿಯಿಂದ ಬಂದ ಜನರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಅದಕ್ಕೆಂದೇ 40 ಸ್ಥಳಗಳನ್ನು ನಿಗದಿಪಡಿಸಲಾಗಿದೆ.
04 3ನೇ ತಂಡವು ಅಲ್ಲಿ ತಂಗಿರುವ ಎಲ್ಲರಿಗೂ ದಿನಕ್ಕೆ 3 ಬಾರಿ ಆಹಾರ ಒದಗಿಸುತ್ತದೆ.
05 4ನೇ ತಂಡವನ್ನು ವಿಮಾನ ನಿಲ್ದಾಣದಲ್ಲಿ ನಿಯೋಜಿಸ ಲಾಗಿದೆ. ಏರ್‌ಪೋರ್ಟ್‌ನಲ್ಲಿ ಎಷ್ಟು ವಿಮಾನಗಳಿವೆ, ಯಾವ ಸಮಯಕ್ಕೆ ಎಷ್ಟು ಮಂದಿಯನ್ನು ಕಳುಹಿಸಬಹುದು ಎಂಬ ಮಾಹಿತಿಯನ್ನು ಈ ತಂಡ ರವಾನಿಸುತ್ತದೆ. ಅದರಂತೆ, ಸ್ಥಳಾಂತರ ಕಾರ್ಯ ನಡೆಯುತ್ತದೆ.
Advertisement
30 ಮಂದಿಯ ಪ್ರಮುಖ ತಂಡವು ನಿಯಂತ್ರಣ ಕೊಠಡಿ ಯಲ್ಲಿ ಕೆಲಸ ಮಾಡುತ್ತಿದೆ. ಜತೆಗೆ 150ಕ್ಕೂ ಹೆಚ್ಚು ಸ್ವಯಂ ಸೇವಕರು ದಿನ ವಿಡೀ ನಿಸ್ವಾರ್ಥವಾಗಿ ಸಹಾಯ ಮಾಡು ತ್ತಿದ್ದಾರೆ. ಕೆಲವರಂತೂ ಕಚೇರಿಗೆ ರಜೆ ಹಾಕಿ ಇಲ್ಲಿಗೆ ಬಂದಿ ದ್ದಾರೆ. ಎಲ್ಲರ ಸಮನ್ವಯತೆ ಯಿಂದಾಗಿ ಕೆಲಸ ಸುಲಭ ವಾಗಿ ಆಗುತ್ತಿದೆ.– ರಾಜೀವ್ ಬೋಡ್ವಡೆ,
ಆಪರೇಷನ್ ಗಂಗಾ ಉಪ ಮುಖ್ಯಸ್ಥರು