Advertisement

ಅಕ್ರಮ ಮದ್ಯ ತಡೆಗೆ ಕಾರ್ಯಾಚರಣೆ

10:56 AM Jul 29, 2020 | Suhan S |

ಭಾರತೀನಗರ: ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಗೆ ಕೆ.ಎಂ.ದೊಡ್ಡಿ ಸಬ್‌ಇನ್ಸ್‌ ಪೆಕ್ಟರ್‌ ಶೇಷಾದ್ರಿ ಕಾರ್ಯಾಚರಣೆಗಿಳಿದಿದ್ದಾರೆ.

Advertisement

ಬೆಳಗ್ಗೆಯೇ ಬೈಕ್‌ ಏರಿ ಸಾಮಾನ್ಯರಂತೆ ಕೆ.ಎಂ.ದೊಡ್ಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಅಕ್ರಮ ಮದ್ಯ ಮಾರಾಟ ಮಾಡುವ ಬಗ್ಗೆ ಮಾಹಿತಿ ಕಲೆ ಹಾಕುವ ಮೂಲಕ ಪ್ರಕರಣ ದಾಖಲಿಸುತ್ತಿದ್ದಾರೆ.

ಗ್ರಾಮೀಣ ಪ್ರದೇಶದ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಬ್‌ಇನ್ಸ್‌ ಪೆಕ್ಟರ್‌ ಶೇಷಾದ್ರಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಪ್ರಸ್ತುತ ಅಕ್ರಮ ಮದ್ಯ ಮಾರಾಟ  ದಿಂದ ಗ್ರಾಮಗಳಲ್ಲಿ ಶಾಂತಿ ಮಾಯವಾಗಿದೆ. ಸುಲಭವಾಗಿ ಮದ್ಯ ಕೈಗೆ ಸಿಗುತ್ತಿರುವುದರಿಂದ ಮದ್ಯ ಸೇವನೆ ವ್ಯಸನಿಗಳಾಗಿದ್ದಾರೆ. ಕುಡುಕರ ಹಾವಳಿಯಿಂದ ಮಹಿಳೆಯರು ಮತ್ತು ಮಕ್ಕಳು ನೆಮ್ಮದಿಯಾಗಿ ಗ್ರಾಮದಲ್ಲಿ ಓಡಾಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಲಾಕ್‌ಡೌನ್‌ನಿಂದ ಆರ್ಥಿಕವಾಗಿ ಸಂಕಷ್ಟ ದ ಲ್ಲಿದ್ದರೂ ಮದ್ಯ ವ್ಯಸನಿಗಳು ಮಾತ್ರ ಮದ್ಯಕ್ಕಾಗಿ ಇಂಥ ಮಾರ್ಗಗಳನ್ನು ಹಿಡಿದುಕೊಂಡಿದ್ದಾರೆ. ಇದರಿಂದ ಸಂಸಾರ ಗಳು ಬೀದಿಪಾಲಾಗುವಂತಾ ಗಿದೆ. ಆದ್ದರಿಂದ ಇದಕ್ಕೆಲ್ಲ ಕಡಿವಾಣ ಹಾಕುವ ದೃಷ್ಟಿಯಿಂದ ಈ ರೀತಿ ಕಾರ್ಯಾಚರಣೆ ನಡೆಸಿ, ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಬ್‌ ಇನ್ಸ್‌ಪೆಕ್ಟರ್‌ ಶೇಷಾದ್ರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next