ಹೊಸದಿಲ್ಲಿ: ದೇಶದಲ್ಲಿ ಹೆಚ್ಚುತ್ತಿರುವ ಅಂತಾ ರಾಷ್ಟ್ರೀಯ ಸಂಘಟಿತ ಸೈಬರ್ ಆರ್ಥಿಕ ಅಪರಾಧಗಳನ್ನು ಮಟ್ಟಹಾಕುವ ನಿಟ್ಟಿ ನಲ್ಲಿ ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ) ಆಪರೇಷನ್ ಚಕ್ರ-2 ಎಂಬ ಕಾರ್ಯಾ ಚರಣೆ ಶುರು ಮಾಡಿದೆ. ಅದರ ಅನ್ವಯ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ 76 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
100 ಕೋಟಿ ರೂ.ಗಳ ಕ್ರಿಪ್ಟೋ ಹಗರಣ ಸೇರಿದಂತೆ 5 ಪ್ರತ್ಯೇಕ ಹಾಗೂ ಪ್ರಮುಖ ಆರ್ಥಿಕ ಅಪರಾಧಗಳ ಕುರಿತು ಪ್ರಕರಣ ಗಳು ದಾಖಲಾದ ಬೆನ್ನಲ್ಲೇ ಆಪರೇಷನ್ ಚಕ್ರ-2 ಪ್ರಾರಂಭಗೊಂಡಿರುವುದು ಮಹತ್ವ ಪಡೆದಿದೆ. ನಕಲಿ ಕ್ರಿಪ್ಟೋ ಮೈನಿಂಗ್ ಕಾರ್ಯಾ ಚರಣೆಯ ಹೆಸರಿನಲ್ಲಿ ಭಾರ ತೀಯ ನಾಗರಿಕರನ್ನು ಗುರಿಯಾಗಿಸಿ 100 ಕೋಟಿ ರೂ. ವಂಚಿಸಿರುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ.
ಕರ್ನಾಟಕ, ತಮಿಳನಾಡು, ಮಧ್ಯ ಪ್ರದೇಶ, ಉತ್ತರ ಪ್ರದೇಶ, ದಿಲ್ಲಿ, ಬಿಹಾರ ಸೇರಿ ದಂತೆ ಹಲವು ರಾಜ್ಯಗಳ ವಿವಿಧ ಪ್ರದೇಶ ಗಳಲ್ಲಿ ಶೋಧ ಕಾರ್ಯಾಚರಣೆ ನಡೆಸ ಲಾಗಿದ್ದು, ಈ ವೇಳೆ ಕಾಲ್‌ಸೆಂಟರ್‌ಗಳಲ್ಲಿಯೂ ಶೋಧ ನಡೆಸಲಾಗಿದೆ. 9 ಕಾಲ್‌ಸೆಂಟರ್‌ಗಳ ಮೂಲಕ ವ್ಯವಸ್ಥಿತವಾಗಿ ವಿದೇಶಿ ಪ್ರಜೆಗಳನ್ನೂ ಮೋಸದ ಜಾಲದಲ್ಲಿ ಸಿಲುಕಿಸುತ್ತಿದ್ದುದ್ದು ಪತ್ತೆಯಾಗಿದೆ.
ಶೋಧದ ವೇಳೆ 32 ಮೊಬೈಲ್ ಫೋನ್‌ಗಳು, 48 ಲ್ಯಾಪ್‌ಟಾಪ್/ ಹಾರ್ಡ್‌ಡಿಸ್ಕ್, 2 ಸರ್ವರ್ ಇಮೇಜ್, 33 ಸಿಮ್‌ಕಾರ್ಡ್ ಮತ್ತು ಪೆನ್‌ಡ್ರೈವ್‌ಗಳನ್ನು ವಶಪಡಿಸಿಕೊಳ್ಳ ಲಾಗಿದೆ ಈ ಸಂಪೂರ್ಣ ಸೈಬರ್ ಅಪರಾಧ ಗಳನ್ನು ತೊಡೆದುಹಾಕಲು ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳ ಜತೆಗೆ ನಿಕಟ ಸಂಪರ್ಕ ಇರಿಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಸಿಬಿಐ ಹೇಳಿದೆ.