ಅಮೃತಸರ: 1984 ರಜೂನ್ 6 ರಂದು ನಡೆದ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯ ವಾರ್ಷಿಕ ಕರಾಳ ದಿನವನ್ನುಆಚರಿಸುವ ಹಿನ್ನಲೆಯಲ್ಲಿ ಸಿಖ್ ಧರ್ಮೀಯರ ಸ್ವರ್ಣ ಮಂದಿರಕ್ಕೆ ವ್ಯಾಪಕ ಭದ್ರತೆ ಕಲ್ಪಿಸಲಾಗಿದೆ.
3,000 ಕ್ಕೂ ಹೆಚ್ಚು ಮಂದಿ ಭದ್ರತಾ ಸಿಬಂದಿಗಳನ್ನು ಮಂದಿರದ ಸುತ್ತ ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಸ್ವರ್ಣ ಮಂದಿರದ ಸುತ್ತ ಮುತ್ತ ಆಗಮಿಸುವ ಎಲ್ಲಾ ವಾಹನಗಳನ್ನು ತೀವ್ರ ತಪಾಸಣೆ ನಡೆಸಲಾಗುತ್ತಿದೆ . ಯಾವುದೇ ಆಯುಧಗಳನ್ನು ಸ್ವರ್ಣ ಮಂದಿರದ ಬಳಿಗೆ ಒಯ್ಯಲು ಮುಂದಿನ 5 ದಿನಗಳ ಕಾಲ ಅವಕಾಶ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಭಾರತ -ಪಾಕ್ ಗಡಿಯಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಗ್ರೆನೇಡ್‌ಗಳಿದ್ದ ಬ್ಯಾಗ್‌ಗಳನ್ನು ಎಸೆದು ಪರಾರಿಯಾಗಿದ್ದರು. ಆ ಬಳಿಕ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.
ಉಗ್ರಸಂಘಟನೆಯಾದಖಾಲಿಸ್ತಾನ್ ಲಿಬರೇಷನ್ ಫೋರ್ಸ್ ಪಂಜಾಬ್‌ನಲ್ಲಿ ಶಾಂತಿ ಕದಡುವ ಯತ್ನಕ್ಕೆ ಕೈಹಾಕಿದೆ ಎನ್ನುವ ಅಂಶವು ತಿಳಿದು ಬಂದಿದೆ.
ದಾಲ್ ಖಾಲ್ಸಾ ಎನ್ನುವ ಸಂಘಟನೆ ಗುರುವಾರ ಅಮೃತಸರ ಬಂದ್‌ಗೆ ಕರೆ ನೀಡಿದೆ.
1984 ರಲ್ಲಿಸ್ವರ್ಣ ಮಂದಿರದಲ್ಲಿ ಅಡಗಿದ್ದ ಉಗ್ರರಿಗಾಗಿ ಆಪರೇಷನ್ ಬ್ಲೂಸ್ಟಾರ್ ಹೆಸರಿನಲ್ಲಿ ಸೇನೆ ಕಾರ್ಯಾಚರಣೆ ನಡೆಸಿತ್ತು.